ಫೆ.28: ಮಲೆನಾಡ ಮಡಿಲಿನಿಂದ ಬಾಹ್ಯಾಕಾಶಕ್ಕೆ ಕೃತಿ ಲೋಕಾರ್ಪಣೆ …
ಶಿವಮೊಗ್ಗ, (ಹೊಸನಾವಿಕ): ಮಲೆನಾಡಿನ ಹೆಮ್ಮೆ, ದೇಶದ ಖ್ಯಾತ ಬಾಹ್ಯಾಕಾಶ ವಿeನಿ ಡಾ. ಬಿ ಎನ್. ಸುರೇಶ್ ಅವರ ಜೀವನ ಪಯಣವನ್ನು ದಾಖಲಿಸಿದ ಮಲೆನಾಡ ಮಡಿಲಿನಿಂದ ಬಾಹ್ಯಾಕಾಶಕ್ಕೆ ಕೃತಿ ಫೆ.೨೮ರಂದು ಸಂಜೆ ೪ ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ತಲವಾನೆ ಪ್ರಕಾಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊರವಲಯದ ಜಾವಳ್ಳಿಯ ಶ್ರೀ ಅರಬಿಂದೋ ಫೌಂಡೇಶನ್ ಫಾರ್ ಎಜುಕೇಶನ್ ಟ್ರಸ್ಟ್ ಈ ಕಾರ್ಯಕ್ರಮ ವನ್ನು ರಾಷ್ಟ್ರೀಯ ವಿeನ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದು, ಬೆಂಗಳೂರಿನ ಇಸ್ರೋ ಸಂಸ್ಥೆಯ ಅಧ್ಯಕ್ಷ ಡಾ.ವಿ. ನಾರಾಯಣನ್ ಮುಖ್ಯ ಅತಿಥಿಯಾಗಿ ಆಗಮಿಸುವರು. ಕುವೆಂಪು ವಿವಿ ಕುಲಪತಿ ಡಾ. ಶರತ್ ಅನಂತಮೂರ್ತಿ, ಬೆಂಗಳೂರಿನ ಐಐಟಿಯ ಚಾನ್ಸಲರ್ ಪದ್ಮವಿಭೂಷಣ ಡಾ.ಬಿ.ಎನ್. ಸುರೇಶ್ ಡಾ.ಎಚ್.ಎಸ್. ನಾಗಭೂಷಣ್, ಆನ್‌ಟು ಎ ರಾಕೆಟ್ ಸಿಪ್ ಕೃತಿ ಲೇಖಕ ಸುನಿಲ್ ಸುರೇಶ್, ಹಾಸನದ ಸಿಎ ಬಿ.ಎನ್.ರಮೇಶ್, ಅನುವಾದಕ ತುರುವ ನೂರು ಮಲ್ಲಿಕಾರ್ಜುನ ಪಾಲ್ಗೊಳ್ಳಲಿzರೆ ಎಂದರು.
ಈ ಕೃತಿ ಮೂಲತಃ ಡಾ. ಸುರೇಶ್ ಅವರ ಪುತ್ರ ಸುನಿಲ್ ಸುರೇಶ್ ಅವರು ಇಂಗ್ಲಿಷ್‌ನಲ್ಲಿ ೞu ಠಿಟ Z ಟ್ಚhಛಿಠಿ ಖeಜಿmೞಎಂಬ ಹೆಸರಿನಲ್ಲಿ ರಚಿಸಿದ್ದು, ಅದರ ಕನ್ನಡ ಅನುವಾದವನ್ನು eನದೀಪ ಶಾಲೆಯ ಕನ್ನಡ ವಿಭಾಗದ ಅಧ್ಯಾಪಕ ತುರುವನೂರು ಮಲ್ಲಿಕಾರ್ಜುನ ಎಂ.ವಿ. ಅವರು ಮಾಡಿzರೆ. ಅಭ್ಯುದಯ ಪ್ರಕಾಶನದಿಂದ ಪ್ರಕಟವಾಗುತ್ತಿರುವ ಈ ಕೃತಿಯನ್ನು ಪ್ರಸ್ತುತ ಇಸ್ರೋ ಅಧ್ಯಕ್ಷರಾದ ಡಾ. ವಿ ನಾರಾಯಣನ್ ಲೋಕಾರ್ಪಣೆ ಮಾಡಲಿzರೆ ಎಂದರು.

ಡಾ. ಬಿ.ಎನ್. ಸುರೇಶ್ ಅವರು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ಯಲ್ಲಿ ಮಹತ್ವದ ಪಾತ್ರವಹಿಸಿರುವ ವಿeನಿ. ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿರುವ ಅವರು ಪ್ರಸ್ತುತ ಐಐಎಸ್‌ಟಿ (ಐbಜಿZ ಐoಠಿಜಿಠ್ಠಿಠಿಛಿ ಟ್ಛ ಖmZಛಿ ಖ್ಚಜಿಛ್ಞ್ಚಿಛಿ Zb Sಛ್ಚಿeಟ್ಝಟಜqs)ಯ ಚಾನ್ಸಲರ್ ಆಗಿ ಸೇವೆ ಸಲ್ಲಿಸುತ್ತಿzರೆ. ಹಲವು ದಶಕಗಳ ಕಾಲ ರಾಕೆಟ್ ಉಡಾವಣೆಗಳು ಮತ್ತು ಬಾಹ್ಯಾಕಾಶ ಮಿಷನ್‌ಗಳ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು, ರಾಷ್ಟ್ರಪತಿಗಳು ಹಾಗೂ ಕೇಂದ್ರ ಮಂತ್ರಿಗಳಿಗೆ ತಾಂತ್ರಿಕ ವಿವರಣೆ ನೀಡುವ ಜವಾಬ್ದಾರಿಯನ್ನು ನಿಭಾಯಿಸಿರು ವುದು ಅವರ ವೈಶಿಷ್ಟ್ಯ. ದೇಶದ ಹೆಮ್ಮೆಯ ವಿeನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರೊಂದಿಗೆ ಸಹ ಹಲವಾರು ವರ್ಷಗಳ ಕಾಲ ನಿಕಟವಾಗಿ ಕೆಲಸ ಮಾಡಿ ದೇಶದ ಬಾಹ್ಯಾಕಾಶ ಕನಸಿಗೆ ಬೆಂಬಲ ನೀಡಿzರೆ ಎಂದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ೨೫ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದು ಭಾರತದ ಕೀರ್ತಿಯನ್ನು ಹೆಚ್ಚಿಸಿzರೆ. ಪುಸ್ತಕ ಲೋಕಾರ್ಪಣೆ ಸಮಾರಂಭದ ಬಳಿಕ ರಾಷ್ಟ್ರೀಯ ವಿeನ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಱಐbಜಿZ ಖmZಛಿ Pಟಜ್ಟZಞಞಛಿ: ಇeZಛ್ಞಿಜಛಿo Zb UZqs ಊಟ್ಟಡಿZbಱ ವಿಷಯದ ಕುರಿತು ಯುವ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಿzರೆ. ನಂತರ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವ ಸಂವಾದ ಕಾರ್ಯಕ್ರಮವೂ ಏರ್ಪಡಿಸ ಲಾಗಿದೆ ಎಂದು ವಿವರಿಸಿದರು.

ಯುವಜನರಲ್ಲಿ ವಿeನಾಸಕ್ತಿ ಹೆಚ್ಚಿಸುವ ಉzಶದಿಂದ ಆಯೋಜಿಸಲಾದ ಈ ಕಾರ್ಯ ಕ್ರಮದಲ್ಲಿ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಲವಾನ ಪ್ರಕಾಶ್ ಮನವಿ ಮಾಡಿzರೆ.
ಕಾರ್ಯಕ್ರಮಕ್ಕೆ ವಿದ್ಯಾರ್ಥಿ ಗಳನ್ನು ಕಳುಹಿಸಲು ಆಸಕ್ತಿ ಹೊಂದಿರುವ ಶಾಲಾ ಹಾಗೂ ಕಾಲೇಜುಗಳ ಮುಖ್ಯಸ್ಥರು ತಮ್ಮ ಸಂಸ್ತೆಯಿಂದ ಆಯ್ದ ೧೦ ವಿದ್ಯಾರ್ಥಿ ಗಳಿಗೆ ಕಳುಹಿಸಬಹುದು ಎಂದು ತಿಳಿಸಿದ ಅವರು ವಿವರಗಳಿಗೆ ಮೊ. ೯೪೮೦೦೩೯೯೩೫, ೯೦೦೮೫ ೧೫೪೨೯, ೯೭೪೦೯೪೧೯೨೫, ೯೮೮೦೫೮೮೭೩೬ರಲ್ಲಿ ಸಂಪರ್ಕಿಸು ವಂತೆ ಮನವಿ ಮಾಡಿದರು.
ಈಗ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯವಾಗಿದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಎಷ್ಟು ಸರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗ ವಿಪ್ರೋ ಅಧ್ಯಕ್ಷರ ಅಪಾಯಿಂಟ್‌ಮೆಂಟ್ ಸಿಕ್ಕಿರುವುದರಿಂದ ಕಾರ್ಯಕ್ರಮ ಆಯೋಜಿಸಿದ್ದೇವೆ. ಒತ್ತಾಯಪೂರ್ವಕವಾಗಿ ಯಾವ ವಿದ್ಯಾರ್ಥಿಗಳನ್ನೂ ಕರೆತರುತ್ತಿಲ್ಲ. ಬದಲಿಗೆ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಮಾತ್ರ ಆಹ್ವಾನಿಸಲಾಗಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಪ್ರಾಂಶುಪಾಲ ಶ್ರೀಕಾಂತ್ ಎಂ ಹೆಗಡೆ ಮತ್ತು ನಿಲಕಂಠಮೂರ್ತಿ ಅವರು, ಇದು ಕೇವಲ ೨ ಗಂಟೆಗಳ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಜಾಯಿಸಿ ನೀಡಿದರು.
ಪ್ರಮುಖರಾದ ಪ್ರಕಾಶ್, ಡಾ. ಕೆ.ಆರ್. ಶ್ರೀಧರ್, ಹೆಚ್. ಎನ್. ಎಸ್. ರಾವ್, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.
