ಸಾಂಸ್ಕೃತಿಕ ವೈವಿಧ್ಯತೆ ಸಾರಲು ಮಾತೃಭಾಷೆ ವೇದಿಕೆಯಾಗಿದೆ: ಮಂಜುನಾಥ್
ಶಿವಮೊಗ್ಗ : ಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯತೆ, ಬಹುಭಾಷಾವಾದವನ್ನು ಉತ್ತೇಜಿಸಲು ಮಾತೃಭಾಷೆ ದಿನ ಪೂರಕ ವೇದಿಕೆಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಧ್ಯಕ್ಷ ಡಿ.ಮಂಜುನಾಥ ಹೇಳಿದರು.
ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜನಪದ ಪರಿಷತ್ತು ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಾತೃಭಾಷೆ ದಿನದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮನುಷ್ಯರಾದ ನಮಗೆ ಭಾವನೆ ಹಂಚಿಕೊಳ್ಳಲು ಭಾಷೆಯಿದೆ. ವಿಶ್ವದೆಡೆ ವಾಸಿಸುವ ಪ್ರತಿಯೊಬ್ಬರಿಗೂ ಭಾಷೆಯಿದೆ. ಆಯಾಯ ಭಾಷೆಯನ್ನಾಡುವ ಜನರ ಮೇಲೆ ಮತ್ತೊಂದು ಭಾಷೆಯನ್ನು ಹೇರುವುದನ್ನು ಸಹಿಸಲಾರರು ಎಂಬುದಕ್ಕೆ ಉರ್ದು, ಬಂಗಾಳಿ ಭಾಷೆಗಳೇ ಉದಾಹರಣೆ ಎಂದರು.

ಧರ್ಮದ ಕಾರಣಕ್ಕೆ ಭಾರತ ಪಾಕಿಸ್ತಾನ ವಿಭಜನೆ ಆಗಿ ೧೦ ವರ್ಷಗಳ, ಉರ್ದು ಭಾಷೆ ಯನ್ನು ಬಂಗಾಳಿ ಭಾಷಿಗರ ಮೇಲೆ ಹೇರುವುದನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾದವು. ಬಂಗಾಳಿ ಜನರು ನಮ್ಮ ಆಡಳಿತ, ಶಿಕ್ಷಣ, ವ್ಯವಹಾರ ಎಲ್ಲವೂ ನಮ್ಮ ಭಾಷೆಯಲ್ಲಿ ಬೇಕು ಎನ್ನುವ ಒತ್ತಡ ಹೆಚ್ಚಾಯಿತು. ೧೯೫೨ರಲ್ಲಿ ಡಾಕಾ ವಿವಿ ಮುಂದೆ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟ ಹದ್ದು ಮೀರಿದಾಗ ಪೋಲಿಸರು ಗುಂಡು ಹಾರಿಸಿದರು. ಇದರಿಂದ ಹಲವು ವಿದ್ಯಾರ್ಥಿಗಳು ಹುತಾತ್ಮರಾಗು ತ್ತಾರೆ. ಈ ಘಟನೆಯನ್ನು ೧೯೯೯ ರಲ್ಲಿ ವಿಶ್ವಸಂಸ್ಥೆ ತೀರ್ಮಾನದಂತೆ ವಿಶ್ವದ ಎ ಭಾಷೆಗಳು ಉಳಿಯ ಬೇಕು. ಅವುಗಳನ್ನು ರಕ್ಷಿಸಿಸುವ ಉzಶದಿಂದ ೨೦೦೦ ದಿಂದ ವಿಶ್ವದೆಡೆ ಫೆಬ್ರವರಿ ೨೧ ನ್ನು ಭಾಷೆ ಕುರಿತು ಜಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ವಿವರಿಸಿದರು.
ನಮ್ಮೆಲ್ಲರ ಭಾಷೆ ಕನ್ನಡ. ನಮ್ಮ ಭಾಷೆಯನ್ನು ಮೊದಲು ಚೆನ್ನಾಗಿ ಕಲಿಯಬೇಕು. ಉಳಿದ ಭಾಷೆಗಳನ್ನು ಕನ್ನಡದ ಮೂಲಕವೇ ಅರ್ಥಮಾಡಿಕೊಳ್ಳುವ ಅಗತ್ಯವನ್ನು ವಿವರಿಸಿದರು.
ಕೆ.ಜಿ. ಧನಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಅನಿತಾ ಸೂರ್ಯ ಮಾತನಾಡಿ, ಕನ್ನಡ ಪುಸ್ತಕ ಓದುವ ಹವ್ಯಾಸ ಬೆಳಸಿ ಕೊಳ್ಳಿ. ಮೊಬೈಲ್ ಬಿಟ್ಟು ಪುಸ್ತಕದ ಜೊತೆಯಲ್ಲಿ ಸಮಯ ಕಳೆಯಿರಿ ಎಂದರು.
ಇದೇ ವೇಳೆ ತಾಯಿ ನುಡಿ ಕವನ ವಾಚಿಸಿದರು. ಸಾನಿಕ ತುಳು ಭಾಷೆಯಲ್ಲಿ ಮಾತನಾಡಿದರು. ಅಭಿನಯ ಕವನ ವಾಚಿಸಿದರು. ವೇದಿಕೆಯಲ್ಲಿ ಶಿವಪ್ಪಗೌಡರು, ಮಧುಸೂದನ್, ಷರೀಫ್, ಗೌಸ್ ಪೀರ್, ನಾರಾಯಣ, ರಾಮಪ್ಪ ಗೌಡರು ಉಪಸ್ಥಿತರಿದ್ದರು. ಪಲ್ಲವಿ ಪ್ರಾರ್ಥಿಸಿ, ಸರಸ್ವತಿ ಸ್ವಾಗತಿಸಿ, ಅಭಿನಯ ಎಂ. ಅಂಗಡಿ ನಿರೂಪಿಸಿ, ಅಭಿನಯ ಎಂ. ವಂದಿಸಿದರು.


