ದುಶ್ಚಟಗಳಿಗೆ ದಾಸನಾದವನಿಂದ ಆ ಕುಟುಂಬದ ಭವಿಷ್ಯ ನಿರೀಕ್ಷಿಸಲು ಸಾಧ್ಯವಿಲ್ಲ…
ಸಾಸ್ವೆಹಳ್ಳಿ: ದುಶ್ಚಟಗಳ ದಾಸನಾದವನಿಂದ ಆ ಕುಟುಂಬದ ಉಜ್ವಲ ಭವಿಷ್ಯ ನಿರೀಕ್ಷಿಸಲು ಸಾಧ್ಯವಿಲ್ಲ, ಇದು ಅವರಿಗೆ ಗೊತ್ತಿದ್ದರೂ ದುಶ್ಚಟದಿಂದ ದೂರ ಆಗುವ ಪ್ರಯತ್ನ ಮಾಡುವುದಿಲ್ಲ ಎಂದು ರಾಂಪುರ ಹಾಲಸ್ವಾಮಿ ಬೃಹನ್ಮಠದ ಶ್ರೀ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು ಹೇಳಿದರು.
ಹೊನ್ನಾಳಿ ತಾಲೂಕು ಬುಳ್ಳಾಪುರ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆದ ಶ್ರೀ ಬನಶಂಕರಿ ದೇವಾಲಯದ ಉತ್ಸವ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಿಯ ಪಲ್ಲಕ್ಕಿ ಅರ್ಪಣೆ ಕಾರ್ಯಕ್ರಮದಲ್ಲಿ ನಡೆದ ಧರ್ಮಸಭೆಯ ಆಶೀರ್ವಚನ ನೀಡಿದ ಪೂಜ್ಯರು, ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಹ ದುಷ್ಚಟಕ್ಕೆ ಬಲಿಯಾಗಿರುವುದು ದುರಂತವೇ ಸರಿ, ಕುಟುಂಬದ ಉಜ್ವಲ ಭವಿಷ್ಯದಲ್ಲಿ ಮಹಿಳೆಯರ ಪಾತ್ರ ಸಾಕಷ್ಟಿದೆ ಎಂದರು.
ಗುರುವಾರ ಸಂಜೆ ದೇವಾಲಯದ ಆವರಣದಲ್ಲಿ ವಾಸ್ತು ಹೋಮ, ಗಣ ಹೋಮ, ಸುದರ್ಶನ ಹೋಮ, ಮೃತ್ಯುಂಜಯ ಹೋಮ, ಗಂಗಾ ಪೂಜೆ, ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ ಅಲಂಕಾರ, ಚಂಡಿಕಾ ಹೋಮ ಮಹಾ ಮಂಗಳಾರತಿ ನಡೆಯಿತು, ರಾತ್ರಿ ಬೈರನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ರಾಂಪುರ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್, ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಪ್ರದೀಪ್, ಸದಸ್ಯರಾದ ಮಂಜುನಾಥ್, ನಾಗರಾಜ್, ಗೋಪಾಲಪ್ಪ, ಹಾಗೂ ಗ್ರಾಮದ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


