ಆರೋಗ್ಯಉದ್ಯೋಗಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ನವೀಕೃತಗೊಂಡ ಮಹಾತ್ಮಗಾಂಧಿ ಪಾರ್ಕ್: ಇಂದಿನಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯ

Share Below Link

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನವನ್ನು ೧.೮ ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಇಂದಿ ನಿಂದಲೇ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಉದ್ಯಾನವನ ಕೆಲ ವರ್ಷ ಗಳಿಂದ ನಿರ್ವಹಣೆ ಇಲ್ಲದೇ ಸೊರಗಿತ್ತು. ಈಗ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ದುರಸ್ಥಿ ಕಾರ್ಯವನ್ನು ಕೈಗೊಂಡು ಪ್ರಮುಖ ಕಾರ್ಯಗಳನ್ನು ಪೂರೈಸಿzರೆ ಎಂದರು.
ಕಾರಂಜಿ, ಕಾಂಪೌಂಡ್ ಗ್ರಿಲ್, ಮಕ್ಕಳ ರೈಲು, ಮಕ್ಕಳ ಆಟಿಕೆಗಳು, ಜಿಮ್ ಉಪಕರಣಗಳು, ಈಜುಕೊಳ ಮೊದಲಾದವುಗಳ ಜೀರ್ಣೋದ್ಧಾರ ಮಾಡಲಾಗಿದೆ. ಪಾರ್ಕಿನ ನಿರ್ವಹಣೆಗೆ ಪ್ರತ್ಯೇಕ ವಾಗಿ ಒಂದು ಸಮಿತಿ ರಚಿಸಲಾ ಗಿದೆ. ಇದರಲ್ಲಿ ಉಪ ಆಯುಕ್ತರು (ಆಡಳಿತ), ಉಪ ಆಯುಕ್ತರು (ಅಭಿವೃದ್ಧಿ), ಸಹಾಯಕ ಕಾರ್ಯ ಪಾಲ ಅಭಿಯಂತರು (ಪರಿಸರ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್), ಕಾರ್ಯಪಾಲಕ ಅಭಿಯಂತರರು (ಸಿವಿಲ್) ಮತ್ತು ಎಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳು ಈ ಸಮಿತಿ ಯಲ್ಲಿ ಇರುತ್ತಾರೆ. ಸಾರ್ವಜನಿಕರಿಗೆ ಏನೇ ತೊಂದರೆಯಾದರೂ ಈ ಸಮಿತಿಯ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳ ಬಹುದು ಎಂದರು.


ಈ ಹಿಂದೆ ಇದ್ದಂತೆ ಪ್ರವೇಶ ಶುಲ್ಕ ವಯಸ್ಕರಿಗೆ ೨೦ ರೂಪಾಯಿ, ಮಕ್ಕಳಿಗೆ ೧೦ ರೂ. ಮುಂದುವರಿಸ ಲಾಗಿದೆ. ಮಕ್ಕಳ ರೈಲು ಪ್ರಯಾಣಕ್ಕೆ ವಯಸ್ಕರಿಗೆ ೨೦ ರೂ., ಮಕ್ಕಳಿಗೆ ೧೦ ರೂ. ನಿಗಧಿಪಡಿಸಲಾಗಿದೆ. ನೂತನವಾಗಿ ನಿರ್ಮಿಸಿ ಇಂದು ಸಾರ್ವಜನಿಕ ವೀಕ್ಷಣೆಗೆ ತೆರೆಯಲಾದ ವನ್ಯಜೀವಿ ವ್ಯಾಖ್ಯಾನ ಕೇಂದ್ರ ವೀಕ್ಷಣೆಗೆ ವಯಸ್ಕರಿಗೆ ೧೦ ರೂ., ಮಕ್ಕಳಿಗೆ ೫ ರೂ. ನಿಗಧಿ ಪಡಿಸಲಾಗಿದ್ದು, ಶಾಲಾ- ಕಾಲೇಜುಗಳ ಮಕ್ಕಳು ಗುಂಪಿನಲ್ಲಿ ಬಂದರೆ ಅವರಿಗೆ ರಿಯಾಯಿತಿ ದರದಲ್ಲಿ ಪ್ರವೇಶ ಕಲ್ಪಿಸುವ ಅಲೋಚನೆ ಮಾಡಲಾಗಿದೆ. ಬೆಳಿಗ್ಗೆ ೬ ರಿಂದ ೯ ಹಾಗೂ ಸಂಜೆ ೬ ರಿಂದ ೮ರ ವರೆಗೆ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಉಚಿತ ಪ್ರವೇಶ ಮುಂದುವರೆದಿದೆ ಎಂದರು.
ಉದ್ಯಾನದಲ್ಲಿ ೩೨ ಸಿಸಿ ಕ್ಯಾಮೇರಾಗಳನ್ನು ಅಳವಡಿಸಲಾ ಗಿದ್ದು, ಇನ್ನು ಮುಂದೆ ಇಡೀ ಉದ್ಯಾನವನ ಸಿಸಿ ಕಣ್ಗಾವಲಿನಲ್ಲಿ ಇರಲಿದೆ. ಸಾರ್ವಜನಿಕರು ಉದ್ಯಾನವನದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪ ಆಯುಕ್ತ ತುಷಾರ್ ಹೊಸೂರ್, ಎಇಇಗಳಾದ ಪ್ರಿಯಾ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *