ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಅಂತರ ರಾಷ್ಟ್ರೀಯ ಕರಾಟೆ: ಜಿಗೆ ೪ ಚಿನ್ನ-೪ ಬೆಳ್ಳಿ ಪದಕ

Share Below Link

ಶಿವಮೊಗ್ಗ : ಬ್ಯಾಂಕಾಕ್‌ನ ರತನ್ ಬಂಡಿತ್ ಯೂನಿವರ್ಸಿಟಿಯ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.೧೫ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಯ ಕರಾಟೆ ಪಟುಗಳು ಭಾರತ ದೇಶವನ್ನು ಪ್ರತಿನಿಧಿಸಿ ನಾಲ್ಕು ಚಿನ್ನ ಹಾಗೂ ನಾಲ್ಕು ಬೆಳ್ಳಿ ಪದಕವನ್ನು ಗಳಿಸಿ ಜಿಗೆ ಕೀರ್ತಿ ತಂದಿzರೆ ಎಂದು ಕರ್ನಾಟಕ ಶೋಟೊ ಕಾಯ್ ಕರಾಟೆ ಡೋ ಅಸೋಸಿ ಯೇಷನ್‌ನ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಜಿ.ಭಟ್ ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟಾ ಮತ್ತು ಕಮಿಟೆ, ಬಾಲಕ, ಬಾಲಕಿಯರ ಸಬ್ ಜೂನಿಯರ್ ೧೪ ವರ್ಷದೊಳಗಿನ ವಿಭಾಗದಲ್ಲಿ ಕರಾಟೆ ಪಟುಗಳು ಪದಕಗಳಿಸಿ ವೈಯಕ್ತಿಕ ವಿಭಾಗದಲ್ಲಿ ವಿಜೇತರಾಗಿzರೆ ಎಂದರು.
ಬಾಲಕರ ವಿಭಾಗದಲ್ಲಿ ಉತ್ತರ ಕರ್ನಾಟಕ ಸಿzಪುರ ತಾಲೂಕಿನ ಶ್ರೀ ರಮಾನಂದ ಆಂಗ್ಲಶಾಲೆಯ ಸಿ.ಗೌರೀಶ್ ವಿದ್ಯಾರ್ಥಿ ಸಬ್ ಜೂನಿಯರ್‌ನಲ್ಲಿ ೨೧ ರಿಂದ ೨೫ ಕೆ.ಜಿ. ವಿಭಾಗದಲ್ಲಿ ಕಟಾ ಮತ್ತು ಕಮಿಟೆಯಲ್ಲಿ ೨ ಚಿನ್ನದ ಪದಕವನ್ನು, ತೀರ್ಥಹಳ್ಳಿಯ ಸೆಂಟ್ ಮ್ಯಾರೀಸ್ ಇಂಗ್ಲೀಷ್ ಶಾಲೆಯ ಕ್ಲಿಯೋನ್ ಫೆಬಿಲಿಯೊ ಮಾರ್ಟಿಸ್, ೨೬ ರಿಂದ ೩೦ ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗಳಿಸಿzರೆ ಎಂದರು.
ತೀರ್ಥಹಳ್ಳಿಯ ಸೇವಾಭಾರತಿ ಶಿಕ್ಷಣ ಸಂಸ್ಥೆಯ ರಾಹುಲ್ ಭಾರದ್ವಾಜ್ ೪೬ ರಿಂದ ೫೦ ಕೆ.ಜಿ. ವಿಭಾಗದಲ್ಲಿ ಕಟಾ ಮತ್ತು ಕಮಿಟೆಯಲ್ಲಿ ೨ ಬೆಳ್ಳಿ ಪದಕವನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ಸಾನ್ವಿ ಜೋಯ್ಸ್, ೪೬ ರಿಂದ ೫೦ ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸಿರುತ್ತಾಳೆ. ಪದಕ ಗಳಿಸುವ ಮೂಲಕ ಸ್ಪರ್ಧಿಗಳು ನಮ್ಮ ದೇಶಕ್ಕೆ ರಾಜ್ಯಕ್ಕೆ, ಜಿಗೆ ಹಾಗೂ ಕರಾಟೆ ಸಂಸ್ಥೆಗೆ ಕೀರ್ತಿ ತಂದಿರುವ ಇವರಿಗೆ ಸಂಸ್ಥೆ ಅಭಿನಂದಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಕಗಳನ್ನು ಗಳಿಸಿದವರು, ಮಹಾಬಲ ಜೋಯ್ಸ್, ಚಂದ್ರಹಾಸ, ಕ್ಲೇವನ್ ಮಾರ್ಟಿಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *