ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಕುಸ್ತಿಯ ಶ್ರೇಷ್ಟ ಇತಿಹಾಸ ಉಳಿಸಿ ಬೆಳೆಸಲು ಸಹಕಾರಿಯಾಗಲಿ: ಶಾಸಕ ಬಿ.ವೈ.ವಿಜಯೇಂದ್ರ

Share Below Link

ಶಿಕಾರಿಪುರ : ಮನುಷ್ಯನ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿರುವ ಕುಸ್ತಿ ಪಂದ್ಯಾವಳಿಗೆ ತಾಲೂಕು ಅನಾದಿ ಕಾಲದಿಂದ ಅತ್ಯಂತ ಪ್ರಸಿದ್ದವಾ ಗಿದ್ದು, ಇದೇ ಪ್ರಥಮ ಬಾರಿ ಅಂತರಾಷ್ಟ್ರೀಯ ಮಟ್ಟದ ಜೋಡಿ ಕುಸ್ತಿ ಪಂದ್ಯಾವಳಿ ಆಯೋಜನೆ ಯಿಂದಾಗಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಪಂದ್ಯಾವಳಿಯು ಕುಸ್ತಿಯ ಶ್ರೇಷ್ಟ ಇತಿಹಾಸ, ಪರಂಪರೆ ಉಳಿಸಿ ಬೆಳೆಸಲು ಸಹಕಾರಿಯಾಗಲಿ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.


ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರದಲ್ಲಿ ನಟ ಪುನಿತ್ ರಾಜ್‌ಮಾರ್ ಸ್ಮರಣಾರ್ಥ ಆಯೋಜಿಸಿದ್ದ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕುಸ್ತಿ ಪಂದ್ಯಾವಳಿ ದಸರಾ ಉತ್ಸವಕ್ಕೆ ಮಾತ್ರ ಸೀಮಿತವಲ್ಲ. ರಾಜ್ಯದ ಹಲವು ಉತ್ಸವಗಳಲ್ಲಿ ಕುಸ್ತಿಗೆ ಆದ್ಯತೆ ನೀಡಲಾಗುತ್ತಿದೆ. ಯುವ ಜನತೆಯ ಆರೋಗ್ಯ ಸಂರಕ್ಷಣೆ, ಆರೋಗ್ಯಯುತ ಯುವಜನತೆ ಮೂಲಕ ದೇಶ ನಿರ್ಮಾಣಕ್ಕೆ ಕಾರಣವಾಗಲಿದೆ. ಶಾಲಾ ಕ್ರೀಡೆಯಲ್ಲಿ ಕುಸ್ತಿ ಸ್ಪರ್ಧೆಗೆ ಆದ್ಯತೆ ನೀಡಲಾಗಿದ್ದು, ತಾಲೂಕಿನ ಹಲವು ಪ್ರತಿಭೆಗಳು ರಾಜ್ಯ ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿ ಪಡೆದುಕೊಂಡಿzರೆ. ಕುಸ್ತಿ ಪಂದ್ಯಕ್ಕೆ ಶಿಕಾರಿಪುರ ಅನಾದಿ ಕಾಲದಿಂದ ಹೆಚ್ಚು ಪ್ರಸಿದ್ದ ವಾಗಿದೆ ಎಂದರು.
ಕುಸ್ತಿ ಪಂದ್ಯಾವಳಿ ಸಮಿತಿ ಅಧ್ಯಕ್ಷ ಸಂದೀಪ ಗೋಣಿ ಮಾತನಾಡಿ, ತಾಲೂಕಿನಲ್ಲಿ ಕುಸ್ತಿ ಪಂದ್ಯಾವಳಿ ಪರಂಪರೆ ಬೆಳೆದು ಬಂದಿದ್ದು ಕ್ಷೇತ್ರ ದೇವತೆ ಜತ್ರೆ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿ ನಡೆಯುವುದು ಮಾತ್ರವಲ್ಲ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿನ ಜತ್ರೆ, ವಿಶೇಷ ಸಂದರ್ಭಗಳಲ್ಲಿ ಕುಸ್ತಿ ಸ್ಪರ್ಧೆ ನಡೆಯುತ್ತದೆ. ಇಲ್ಲಿನ ಸುತ್ತ ಮುತ್ತಲಿನ ತಾಲೂಕಿನ ಕುಸ್ತಿ ಅಭಿಮಾನಿಗಳ ಪ್ರೇರಣೆಯಿಂದ, ಯುವಜನತೆ ಕುಸ್ತಿ ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು, ಆರೋಗ್ಯಯುತ ದೇಹಕ್ಕೆ ಕುಸ್ತಿ ಸಹಕಾರಿ ಎನ್ನುವ ಕಾರಣಕ್ಕೆ ದಾನಿಗಳು, ಜನಪ್ರತಿನಿಧಿಗಳು, ಸ್ನೇಹಿತರ ತಂಡದ ಸಹಕಾರದೊಂದಿಗೆ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದು ಯಶಸ್ವಿಗೆ ಸಹಕರಿಸಿದ ಸರ್ವರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.
ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷ ನಗರದ ಮಹದೇವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಶ್ರೀಕಾಂತ್, ಮಾರಿಕಾಂಬ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್, ನವೀನ್, ಹುಲ್ಮಾರ್ ಮಹೇಶ್ ಇನ್ನಿತರರಿದ್ದರು.