ಮಡಿವಾಳ ಮಾಚಿದೇವನ ದೇವಸ್ಥಾನದ ನಿರ್ಮಾಣಕ್ಕಾಗಿ ಸಮಾಜದ ಪ್ರತಿ ಕುಟುಂಬ ರೂ.೧೦ ಸಾವಿರ ದೇಣಿಗೆ ಸಂಕಲ್ಪ…
ಶಿಕಾರಿಪುರ: ಅನಕ್ಷರಸ್ಥರು ಆರ್ಥಿಕ ದುರ್ಬಲರು ಅಧಿಕವಾಗಿರುವ ತಾಲೂಕಿನ ಮಡಿವಾಳ ಸಮಾಜಕ್ಕೆ ಕುಲ ದೈವ ಮಡಿವಾಳ ಮಾಚಿದೇವನ ದೇವಸ್ಥಾನದ ಕೊರತೆ ಹಲವು ವರ್ಷಗಳಿಂದ ಕಾಡುತ್ತಿದ್ದು ಪರಿಹಾರಕ್ಕಾಗಿ ಜನಪ್ರತಿನಿಧಿಗಳ ಮನೆ ಬಾಗಿಲಿಗೆ ಅಲೆದಾಡಿ ಪ್ರಯೋಜನವಿಲ್ಲದೆ ಸಮುದಾಯದ ಪ್ರತಿ ಕುಟುಂಬ ಕಡ್ಡಾಯವಾಗಿ ನಿತ್ಯ ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣ ದೇಣಿಗೆ ರೂಪದಲ್ಲಿ ನೀಡಿ ದೇವಸ್ಥಾನ ಕಟ್ಟಡ ಆರಂಭಿಸುವ ಮೂಲಕ ಸ್ವಾಭಿಮಾನ ಛಲದಿಂದ ಎಲ್ಲವೂ ಸಾಧ್ಯ ಎಂಬುದನ್ನು ಸಾಬೀತು ಪಡಿಸುವ ದೃಢ ಸವಾಲು ಸ್ವೀಕರಿಸಿ ಎಲ್ಲ ಸಮುದಾಯಕ್ಕೆ ಮಾದರಿಯಾಗಿದೆ.

ತಾಲೂಕಿನಲ್ಲಿ ಮಡಿವಾಳ ಮಾಚಿದೇವರ ದೇವಸ್ಥಾನ ನಿರ್ಮಾಣ ಸಮಾಜದ ಬಹು ದೊಡ್ಡ ಕನಸಾಗಿದ್ದು, ಬಹುತೇಕ ಅನಕ್ಷರಸ್ಥರು, ಆರ್ಥಿಕ ದುರ್ಬಲರು ಅಧಿಕವಾಗಿರುವ ಸಮುದಾಯ ದವರು ನಿತ್ಯ ಹೊಟ್ಟೆಪಾಡಿನ ದುಡಿಮೆಯಲ್ಲಿ ಕೆಲ ಅಂಶ ದೇವಸ್ಥಾನ ಕಾಮಗಾರಿಗೆ ವಿನಿಯೋಗಿಸುವ ಸಂಕಲ್ಪ ಕೈಗೊಂಡಿzರೆ.
ಬಟ್ಟೆ ಸ್ವಚ್ಚಗೊಳಿಸುವ ಮೂಲ ವೃತ್ತಿಯನ್ನು ಅವಲಂಭಿಸಿದ ಗ್ರಾಮದ ಬಹುತೇಕ ಸದಸ್ಯರು ಕೈಗೊಂಡ ದೃಡ ತೀರ್ಮಾನದಿಂದ ಅಲ್ಪಾವಧಿಯಲ್ಲಿಯೇ ಕಟ್ಟಡದ ತಳಪಾಯ ಪೂರ್ಣಗೊಂಡಿದೆ. ದೇವಸ್ಥಾನ ನಿರ್ಮಾಣ ಕಾಮಗಾರಿ ಸಮಿತಿ ನೇತೃತ್ವದಲ್ಲಿ ಆರಂಭಗೊಂಡ ಕಟ್ಟಡ ಕಾಮಗಾರಿಗೆ ಗ್ರಾಮದ ಮಡಿವಾಳ ಸಮಾಜದ ಪ್ರತಿ ಕುಟುಂಬ ರೂ.೧೦ ಸಾವಿರ ದೇಣಿಗೆ ನೀಡುವ ಸಂಕಲ್ಪ ಹೊಂದಿದೆ. ಗ್ರಾಮದಲ್ಲಿ ಅಂದಾಜು ೫೦ ಮಡಿವಾಳ ಕುಟುಂಬವಿದ್ದು ನಿತ್ಯ ಶ್ರzಯಿಂದ ಕಾಮಗಾರಿ ಪೂರ್ಣ ಗೊಳಿಸುವ ಛಲದಿಂದ ಚಾಲನೆಗೆ ವೇಗ ದೊರೆತಿದೆ.

ಸಮಿತಿಯ ಉಪಾಧ್ಯಕ್ಷ ಚಂದ್ರಪ್ಪ ಈ ಬಗ್ಗೆ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಮಡಿವಾಳ ಸಮಾಜದ ಕುಲದೈವ ಮಡಿವಾಳ ಮಾಚಿದೇವರ ದೇವಸ್ಥಾನವಿಲ್ಲದೆ ಪ್ರತಿಬಾರಿ ಗುರುಪೀಠ ಚಿತ್ರದುರ್ಗಕ್ಕೆ ತೆರಳಬೇಕಾದ ಅನಿವಾರ್ಯತೆ ಯಿಂದಾಗಿ ತಾಲೂಕಿನಾದ್ಯಂತ ೨೫ ಸಾವಿರ ಅಧಿಕ ಜನಸಂಖ್ಯೆ ಹೊಂದಿ ರುವ ಸಮುದಾಯ ಗ್ರಾಮದಲ್ಲಿ ವೀರಘಂಟಿ ಮಡಿವಾಳ ಮಾಚಿ ದೇವ ದೇವಸ್ಥಾನ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಪ್ರತಿಯೊಂದು ಸಮಾಜಕ್ಕೆ ಪ್ರತ್ಯೇಕ ದೇವಾಲಯವಿದ್ದು ಧಾರ್ಮಿಕ ಕಾರ್ಯದ ಜತೆಗೆ ಯುವಪೀಳಿಗೆಗೆ ದೈವದ ಬಗ್ಗೆ ಶ್ರz ಸಂಸ್ಕಾರಕ್ಕಾಗಿ ಮಡಿವಾಳ ಸಮಾಜದ ದೇವಸ್ಥಾನದ ಕೊರತೆ ನೀಗಿಸಲು ಜನಪ್ರತಿನಿಧಿಗಳು ಸ್ಪಂದಿಸುವಂತೆ ಮನವಿ ಮಾಡಿದರು.
ಸಮಿತಿ ಅಧ್ಯಕ್ಷ ಕುಮಾರಪ್ಪ, ಕಾರ್ಯದರ್ಶಿ ವಿಜಯಕುಮಾರ್ ರವರಿಗೆ ಎಂ.ಮಂಜಪ್ಪ ರೂ.೧೦ ಸಾವಿರ ದೇಣಿಗೆ ಚೆಕ್ ಹಸ್ತಾಂತರಿಸಿದರು.
