ಸಂಕ್ರಾತಿ ಕಿಚ್ಚು ಹೊತ್ತಿಸಿ ಸಂಭ್ರಮಿಸಿದ ಆಕ್ಸ್‌ಫರ್ಡ್ ಶಾಲೆಯ ಪುಟಾಣಿಗಳು…
ಹೊನ್ನಾಳಿ: ಸಾಂಪ್ರ ದಾಯಿಕ ಉಡುಗೊರೆ ತೊಟ್ಟು ಸಂಭ್ರಮಿಸುತ್ತಿರುವ ಮಕ್ಕಳ ಕಲರವ, ಒಂದೆಡೆ ಹೆಣ್ಣು ಮಕ್ಕಳು ರಂಗೋಲಿ ಸ್ಪರ್ಧೆಯಲ್ಲಿ ತಲ್ಲೀನ ರಾಗಿದ್ದರೆ. ಮತ್ತೊಂದೆಡೆ ಬಾಲಕರ ಗಾಳಿ ಪಟಗಳು ಮುಗಿಲು ಮುಟ್ಟುವ ತವಕದಲ್ಲಿದ್ದವು.
ಹೌದು ಈ ಸಂಭ್ರಮ ಮನೆ ಮಾಡಿದ್ದ ದೃಶ್ಯ ಕಂಡು ಬಂದಿದ್ದು ಪಟ್ಟಣದ ಕ್ರೀಡಾಂಗಣದ ಬಳಿಯ ಮದರ್ ಥೆರೆಸಾ ಮೆಮೋರಿಯಲ್ ಎಜು ಕೇಶನಲ್ ಸೊಸೈಟಿಯಿಂದ ನಡೆಯುತ್ತಿರುವ ಆಕ್ಸ್ ಫರ್ಡ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ.
ಜ.೧೪ರಂದು ಎಂದಿನಂತೆ ಶಾಲೆಗೆ ಆಗಮಿಸಿದ ಮಕ್ಕಳು ಪ್ರತಿನಿತ್ಯ ಶಾಲೆಯ ಪಾಠಗಳಲ್ಲಿ ತಲ್ಲೀನರಾಗುತ್ತಿದ್ದವರು, ಅಂದು ಮಾತ್ರವೇ ಸಂಕ್ರಾಂತಿ ಹಬ್ಬದ ಆಚರಣೆ, ಮಹತ್ವ, ಎಳ್ಳು- ಬೆಲ್ಲ- ಕಬ್ಬಿನ ಖಾದ್ಯಗಳ ಸವಿ ಯನ್ನು ಸವಿಯುತ್ತಾ ಮನೆಯನ್ನೂ ಮರೆತು ಹಬ್ದದ ಹಿನ್ನೆಯನ್ನು ಶಿಕ್ಷಕವೃಂದದ ವರಿಂದ ಕಲಿಯುತ್ತಾ -ನಲಿಯುತ್ತಾ ಸಂಭ್ರಮಿಸಿದರು.
ಶಾಲೆಯ ಕಾರ್ಯದರ್ಶಿ ರಾಜು ಕಣಗಣ್ಣಾರ್ ಮಾರ್ಗ ದರ್ಶನದಲ್ಲಿ ಮುಖ್ಯ ಶಿಕ್ಷಕಿ ಸುಚಿತ್ರಾ ಅವರ ನೇತೃತ್ವದಲ್ಲಿ ಶಾಲೆ ಯನ್ನು ಸಂಕ್ರಾಂತಿ ಹಬ್ಬದ ಮಹತ್ವ ವನ್ನು ಬಿಂಬಿಸುವ ರೀತಿಯಲ್ಲಿ ಸಜ್ಜುಗೊಳಿಸಿದ್ದ ದೃಶ್ಯ ಎಂತಹವ ರನ್ನೂ ಕ್ಷಣ ಕಾಲ ನಿಂತು ಈ ದೃಶ್ಯವನ್ನು ನೋಡುವಂತೆ ಆಕರ್ಷಿತಗೊಳಿಸುವಂತಿತ್ತು.
ಶಾಲೆಯ ಆವರಣದಲ್ಲಿ ರಾಗಿ -ಭತ್ತ-ಜೋಳದ ರಾಶಿಯನ್ನು ಮಾಡಿ, ಎತ್ತಿ ಗಾಡಿ ಮತ್ತು ಗುಡಿ ಸಲುಗಳನ್ನು ಸಿದ್ಧಪಡಿಸಿ ಧವಸ- ಧಾನ್ಯದ ರಾಶಿಯನ್ನು ಪೂಜೆ ಮಾಡ ಲಾಗಿದ್ದಿತು. ಕಿಚ್ಚು ಹೊತ್ತಿ ಸುವ ರೀತಿ ಸಜ್ಜುಗೊಳಿಸುವುದರ ಜೊತೆಗೆ ಕರು ಸಮೇತ ಗೋ- ಮಾತೆಯನ್ನು ಶಾಲೆಗೆ ಕರೆತಂದು ಎ ಮಕ್ಕಳಿಂದ ಗೋ-ಪೂಜೆ ನೇರವೇರಿಸಲಾಯ್ತು. ನಂತರ ಶಾಲೆಯ ಎ ಕೊಠಡಿಗಳಿಗೂ ಗೋ-ಮಾತೆ ಯನ್ನು ಕರೆತಂದು ಶಾಲಾ ಮಕ್ಕಳಿಂದಲೇ ಅಕ್ಕಿ-ಬೆಲ್ಲ- ಸಿಹಿ ತಿನ್ನಿಸಲಾಯ್ತು.
ಶಾಲಾ ಮಕ್ಕ ಳಿಂದ ಸಾಂಪ್ರಾದಾಯಿಕ ಒಲೆ ಯನ್ನು ನಿರ್ಮಾಣ ಮಾಡಿ ಹಾಲು ಉಕ್ಕಿಸುವ ಮೂಲಕ ನಾಡಿನಲ್ಲಿ ಮಳೆ-ಬೆಳೆ ಸಮೃದ್ಧಿಯಾಗಿ ಎಲ್ಲರೂ ಆರೋಗ್ಯದಿಂದಿರಲಿ ಎಂದು ಪ್ರಾರ್ಥಿಸಲಾಯ್ತು.
ಸಂಸ್ಥೆಯ ಕಾರ್ಯದರ್ಶಿ ರಾಜು ಕಣಗಣ್ಣಾರ್ ಮಾತನಾಡಿ ಪ್ರತಿಯೊಂದು ಹಬ್ಬ-ಹರಿದಿನಗಳ ಆಚರಣೆಯಲ್ಲೂ ವೈeನಿಕ ಮಹತ್ವ ಇದ್ದೇ ಇರುತ್ತದೆ. ಇಂದು ಮಕ್ಕಳು ಮೊಬೈಲ್, ಟಿವಿ ಮಾಧ್ಯ ಮಗಳಲ್ಲಿ ಮುಳುಗಿ ಹೋಗಿ ನಮ್ಮ ಹಬ್ಬಗಳ ಆಚರಣೆಯನ್ನೇ ಮರೆತು ಹೋಗಿzರೆ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮೂಲಕ ನಮ್ಮ ಸಂಸ್ಕೃತಿ, ಹಬ್ಬಗಳ ಮಹತ್ವ ಹಾಗೂ ಅವುಗಳ ಆಚರಣೆಯ ಹಿನ್ನೆಲೆ ಯನ್ನು ಶಾಲೆಯಲ್ಲಿ ಮಕ್ಕಳಿಗೆ ಅರಿವು ಮೂಡಿಸುತ್ತಾ ನಮ್ಮ ಮುಂದಿನ ಪೀಳೆಗೆಯೂ ಕೂಡ ನಮ್ಮ ಸಂಸ್ಕೃತಿ, ಆಚಾರ- ವಿಚಾರ ಗಳನ್ನು ಉಳಿಸಿ-ಬೆಳೆಸಿಕೊಂಡು ಹೋಗಬೇಕು ಎಂಬ ಸದುದ್ದೇಶ ನಮ್ಮ ಸಂಸ್ಥೆಯಿಂದ ನಿರಂತರ ಕಾರ್ಯಕ್ರಮಗಳ ಆಯೋಜನೆ ಮೂಲಕ ಪ್ರಯತ್ನ ಇದ್ದೇ ಇರು ತ್ತದೆ ಎಂದು ಮಾಹಿತಿ ನೀಡಿದರು.ಎ ಮಕ್ಕಳಿಗೂ ಪೊಂಗಲ್, ಎಳ್ಳು-ಬೆಲ್ಲ-ಕಬ್ಬು ವಿತರಿಸಲಾ ಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ಶಾಲೆಯ ಮುಖ್ಯ ಶಿಕ್ಷಕಿ ಸುಚಿತ್ರಾ, ಶಿಕ್ಷಕರಾದ ಅಣ್ಣಪ್ಪ, ಶೋಭಾ, ಸರಿತಾ, ಮಂಜುಳ, ರೇಣುಕಾ, ಶ್ವೇತಾ, ಪೂಜ ಮತ್ತಿತರರು ಉಪಸ್ಥಿತರಿದ್ದರು.

