ಜಿಲ್ಲಾ ಸುದ್ದಿತಾಜಾ ಸುದ್ದಿ

ಹಿರಿಯ ಪತ್ರಕರ್ತ ಭರತ್‌ರಾಜ್ ಸಿಂಗ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ…

Share Below Link

ಶಿವಮೊಗ್ಗ : ನಗರದ ಹಿರಿಯ ಪತ್ರಕರ್ತ ಆರ್. ಪಿ ಭರತ್ ರಾಜ್ ಸಿಂಗ್ ಅವರು ೨೦೨೫ನೇ ಸಾಲಿನ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿzರೆ.
ನಿವೃತ್ತ ಪ್ರಾಂಶುಪಾಲರಾದ ಪುಟ್ಟುಸಿಂಗ್ ಅವರ ಪುತ್ರರಾದ ಬಿ.ಎ ಪದವೀಧರ ಆರ್. ಪಿ ಭರತ್‌ರಾಜ್‌ಸಿಂಗ್ ಅವರು ಸಾಮಾಜಿಕ ಬದಲಾವಣೆಯ ಚಳವಳಿಯ ಭಾಗವಾಗಿ ೧೯೮೯ರಲ್ಲಿ ಶಿವಮೊಗ್ಗ ಎಕ್ಸ್ ಪ್ರೆಸ್ ಕನ್ನಡ ದಿನಪತ್ರಿಕೆಯನ್ನು ಆರಂಭಿಸುವ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿಟ್ಟರು. ಆರ್ಥಿಕ ಮುಗ್ಗಟ್ಟಿನಿಂದ ಪತ್ರಿಕೆ ಮುನ್ನಡೆಸಲಾಗದೆ ೧೯೯೧ ರಿಂದ ಸ್ವಾತಂತ್ರ್ಯ ಹೋರಾಟ ಗಾರರು, ಜನಪರ ಚಳವಳಿಗಾರರು ಆದ ಶ್ರೀನಿವಾಸ್ ಅಯ್ಯಂಗಾರ್ , ಸಿ.ಎಸ್. ಚಂದ್ರಭೂಪಾಲ್ ಅವರ ಸಂಪಾದಕತ್ವದ ಜಿಲ್ಲಾ ಮಟ್ಟದಿಂದ ಪ್ರಕಟಗೊಳ್ಳುತ್ತಿದ್ದ ದಿನಪತ್ರಿಕೆಯ ವರದಿಗಾರರಾಗಿ ಮತ್ತು ಅನೇಕ ರಾಜ್ಯಮಟ್ಟದ ದಿನಪತ್ರಿಕೆಗಳಿಗೆ ವರದಿಗಳನ್ನು ಬರೆಯುತಿದ್ದರು.
ಆರ್. ಪಿ ಭರತ್ ರಾಜ್ ಸಿಂಗ್ ಅವರ ಮೂರುವರೆ ದಶಕಗಳಿಗೂ ಹೆಚ್ಚಿನ ಕಾಲ ಪತ್ರಕರ್ತರಾಗಿ ವೃತ್ತಿಪರತೆ, ಬದ್ದತೆಯಿಂದ ಸಲ್ಲಿಸಿದ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ೨೦೨೫ನೇ ಸಾಲಿನ ವಾರ್ಷಿಕ ಪ್ರಶಸ್ತಿ ಆಯ್ಕೆ ಮಾಡಿದೆ. ಪ್ರಶಸ್ತಿಯು ೫೦ ಸಾವಿರ ರೂ. ನಗದು, ಪ್ರಶಸ್ತಿ ಫಲಕ ಹೊಂದಿರುತ್ತದೆ.