ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಶಿವಮೊಗ್ಗ ಪಾಲಿಕೆಗೆ ಲೋಕಾಯುಕ್ತ ದಿಢೀರ್ ಎಂಟ್ರಿ….

Share Below Link

ಶಿವಮೊಗ್ಗ: ಲೋಕಾಯುಕ್ತ ತಂಡದಿಂದ ಇಂದು ಶಿವಮೊಗ್ಗ ಮಹಾನಗರ ಪಾಲಿಕೆಗೆ ದಿಢೀರ್ ಭೇಟಿನೀಡಿ, ಕಡತಗಳ ಪರಿಶೀಲನೆ ನಡೆಸಲಾಯಿತು.
ಪಾಲಿಕೆಯ ನಲ್ಮ್ ವಿಭಾಗ, ಕಂದಾಯ ವಿಭಾಗ, ಆಡಳಿತ ವಿಭಾಗ, ನ್ಯಾಯಾಂಗ ವಿಭಾಗ, ಟಪಾಲು ವಿಭಾಗ ಸೇರಿದಂತೆ ಹಲವು ವಿಭಾಗಗಳಿಗೆ ಭೇಟಿನೀಡಿದ ಲೋಕಾಯುಕ್ತ ಪೊಲೀಸರ ತಂಡ ಇ-ಖಾತೆ ಮತ್ತು ಬಿ-ಖಾತೆ ಸರ್ಕಾರದ ಆದೇಶದ ಬಳಿಕ ಇದೂ ವರೆಗೆ ಒಟ್ಟು ಎಷ್ಟು ಖಾತೆಯನ್ನು ಮಾಡಲಾಗಿದೆ ಮತ್ತು ಎಷ್ಟು ಬಾಕಿ ಉಳಿದಿದೆ ಮತ್ತು ಯಾವ ಹಂತದಲ್ಲಿದೆ ಎಂದು ಪರಿಶೀಲನೆ ನಡೆಸಿದರು. ಅಲ್ಲದೆ ಹಿಂದೆ ಎರಡು ಬಾರಿ ಲೋಕಾಯುಕ್ತ ಪೊಲೀಸರು ದಾಳಿಮಾಡಿ ಪಾಲಿಕೆ ಅಧಿಕಾರಿಗಳಿಗೆ ಕೆಲವೊಂದು ಸೂಚನೆ ನೀಡಿದ್ದರು. ಅದು ಪಾಲನೆಯಾಗಿಲ್ಲ ಎನ್ನುವ ಬಗ್ಗೆ ಅಧಿಕಾರಿಗಳಿಗೆ ತರಾಟೆಗೆ ತೆಗೆದು ಕೊಂಡರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳನ್ನು ಕರೆಯಿಸಿ ಅವರಿಂದ ಸಂಪೂರ್ಣ ಮಾಹಿತಿ ಪಡೆದರು. ದಿನನಿತ್ಯ ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ಇಲ್ಲದೆ ಸಿಬ್ಬಂದಿಗಳೇ ಮಾಹಿತಿ ಕೊಡಲು ಪರದಾಡುತ್ತಿರುವುದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿತು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರು ಅಧಿಕಾರಿಗಳಿಗೆ ಎ ದಾಖಲೆ ಗಳನ್ನು ನೀಡುವಂತೆ ತಮ್ಮ ಕೈಕೆಳಗಿನ ಅಧಿಕಾರಿಗಳಿಗೆ ಸೂಚಿಸಿದ್ದಲ್ಲದೆ ಲೋಕಾಯುಕ್ತ ಪೊಲೀಸರು ಪಾಲಿಕೆಗೆ ಯಾವಾಗ ಬಂದರೂ ನಮ್ಮ ಸ್ವಾಗತವಿದೆ. ಪಾಲಿಕೆಯಲ್ಲಿ ಎ ದಾಖಲೆಗಳು ಪಾರದರ್ಶಕ ವಾಗಿ ನಿರ್ವಹಿಸುತ್ತಿzವೆ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಲೋಕಾಯುಕ್ತ ಭೇಟಿ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ., ಇಬ್ಬರು ಇನ್ಸ್‌ಪೆಕ್ಟರ್‌ಗಳು ಮತ್ತು ಸಿಬ್ಬಂದಿಗಳ ತಂಡದಿಂದ ಪರಿಶೀಲನೆ ನಡೆಯಿತು.