ಜಿಲ್ಲಾ ಸುದ್ದಿತಾಜಾ ಸುದ್ದಿ

ಜ.12: ಶಿವ ಸಂಕಲ್ಪ ವೀರಶೈವ ಲಿಂಗಾಯತ ಒಕ್ಕೂಟದ ಉದ್ಘಾಟನೆ…

Share Below Link

ಶಿವಮೊಗ್ಗ : ಶಿವ ಸಂಕಲ್ಪ ವೀರಶೈವ ಲಿಂಗಾಯತ ಒಕ್ಕೂಟದ ಉದ್ಘಾಟನಾ ಸಮಾರಂಭವನ್ನು ಜ.೧೨ರ ಸೋಮವಾರ ಸಂಜೆ ೫:೩೦ಕ್ಕೆ ಕುವೆಂಪು ರಂಗಮಂದಿರ ದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಇ.ವಿಶ್ವಾಸ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಸನ್ನಿವೇಶದಲ್ಲಿ ಸಮಾಜದ ಸಂಘಟನೆಯಲ್ಲಿ ಅತ್ಯಂತ ಗೊಂದಲದ ವಾತಾವರಣ ವಿರುವುದು ನಮ್ಮ ವೀರಶೈವ- ಲಿಂಗಾಯತ ಸಮಾಜದಲ್ಲಿ. ಇಂದು ನಮ್ಮೊಳಗಿನ ಕೆಲ ಭೇದ-ಭಾವ ಗಳಿಂದ ಒಡೆದ ಮನೆಯಂತಾಗಿ ಒಗ್ಗಟ್ಟಿಲ್ಲದೆ ಗೊಂದಲದ ವಾತಾ ವರಣ ಸೃಷ್ಟಿಯಾಗಿದೆ ಎಂದರು.
ಈ ನಿಟ್ಟನಲ್ಲಿ ಸಮಾಜದ ಹಲವು ಸಮಾನ ಮನಸ್ಕ ಮುಖಂಡರು ಸೇರಿ ವೀರಶೈವ- ಲಿಂಗಾಯತ ಸಮಾಜದ ವಿವಿಧ ಜತಿ, ಉಪ ಜತಿಗಳ ಪ್ರಮುಖರ ಜೊತೆ ಹಲವು ಸಭೆಗಳನ್ನು ನಡೆಸಿ ಅವರಲ್ಲಿ ಒಮ್ಮತವನ್ನು ಮೂಡಿ ಸುವ ಕಾರ್ಯ ಯಶಸ್ವಿಯಾಗಿದೆ. ಇದರ ಪ್ರತಿಫಲವಾಗಿ ಸಮಾಜದ ಎ ಪ್ರಮುಖರು ನಮ್ಮ ನಮ್ಮ ಜತಿ, ಉಪಜತಿಗಳಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಂಡು ಶಿವ ಸಂಕಲ್ಪದಡಿಯಲ್ಲಿ ವೀರಶೈವ -ಲಿಂಗಾಯತ ಸಮಾಜವನ್ನು ಸಂಘಟಿಸಿ ಮುನ್ನಡೆಸಿಕೊಂಡು ಹೋಗುವ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ ಎಂದರು.
ಎ ಗೊಂದಲಗಳಿಂದ ಹೊರಬಂದು, ಯಾವುದೇ ಜತಿ, ಉಪಜತಿ, ಪಂಗಡ, ಉಪ ಪಂಗಡಗಳ ಭೇದ-ಭಾವವನ್ನು ತೊರೆದು ಎಲ್ಲರನ್ನೂ ಒಗ್ಗೂಡಿಸಿ ವೀರಶೈವ-ಲಿಂಗಾಯತದಡಿಯಲ್ಲಿ ತಂದು ತನ್ಮೂಲಕ ಹಿಂದೂ ಧರ್ಮ ವನ್ನು ಸಂರಕ್ಷಿಸುವ ಸಂಕಲ್ಪ ದೊಂದಿಗೆ ಸಮಾನ ಮನಸ್ಕರು ಸೇರಿಕೊಂಡು ಸಂಘಟಿತ ರಾಗಿರುವುದೇ ಶಿವ ಸಂಕಲ್ಪ ವೀರಶೈವ-ಲಿಂಗಾಯತ ಒಕ್ಕೂಟದ ಉzಶ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿರುವ ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳು ಒಕ್ಕೂಟವನ್ನು ಉದ್ಘಾಟಿಸಲಿzರೆ. ಹಲವು ಗಣ್ಯರು ಅತಿಥಿಗಳಾಗಿರುತ್ತಾರೆ ಎಂದರು. ನಂತರ ಖ್ಯಾತ ಜನಪದ ಕಲಾವಿದ ಶಂಭು ಬಳಗಾರ್ ಅವರಿಂದ ವಿಶೇಷ ಉಪನ್ಯಾಸ ಇರುತ್ತದೆ ಎಂದರು.
ಸಂಘಟನೆಯ ಮಹಾ ಪೋಷಕ ಮಹಾಲಿಂಗಯ್ಯ ಶಾಸ್ತ್ರಿಗಳು, ಪ್ರಮುಖರಾದ ಸೋಮಶೇಖರ್ ಎನ್.ಎಂ. ಶ್ರೀಕಾಂತ್, ಅಂಗಮೂರ್ತಿ, ಕುಬೇರಪ್ಪ ಪಿ.ಹೆಚ್., ರತ್ನಮ್ಮ ಮಂಜುನಾಥ್, ಗೌರಮ್ಮ ಷಡಾಕ್ಷರಿ, ರಾಜಯ್ಯ, ಕಾಂತರಾಜ್, ಆರ್.ಎಸ್.ಸ್ವಾಮಿ, ಪುಷ್ಪ, ನಾಗರಾಜ್ ಶಾಸ್ತ್ರೀ, ಚೆನ್ನೇಶ್, ಪರಮಾನಂದಸ್ವಾಮಿ ಇನ್ನಿತರರಿದ್ದರು.