ಜಿಲ್ಲಾ ಸುದ್ದಿತಾಜಾ ಸುದ್ದಿ

ಸೂಡಾದಿಂದ ಸುಂದರ ನಗರ ನಿರ್ಮಾಣಕ್ಕಾಗಿ ವಿವಿಧ ಕಾಮಗಾರಿಗಳಿಗೆ ಚಾಲನೆ…

Share Below Link

ಶಿವಮೊಗ್ಗ: ಶಿವಮೊಗ್ಗ ನಗರವನ್ನು ಸುಂದರಗೊಳಿಸಲು ಹಾಗೂ ಜನತೆಗೆ ಅನುಕೂಲ ವಾಗುವ ದೃಷ್ಟಿಯಿಂದ ಸೂಡಾ ವತಿಯಿಂದ ಪಾರ್ಕ್‌ಗಳ ಅಭಿವೃದ್ದಿ, ಕೆರೆಗಳ ಅಭಿವೃದ್ದಿ, ಅಪಾರ್ಟ್‌ಮೆಂಟ್ ನಿರ್ಮಾಣ ಹೀಗೆ ಸುಮಾರು ರೂ.೫೦೦ ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿ ವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ತಿಳಿಸಿದರು.
ನಗರದ ಗೋಪಾಳಗೌಡ ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಹಾಗೂ ಫ್ರೀಡಂ ಪಾರ್ಕಿ ನಲ್ಲಿ ಓಪನ್ ಜಿಮ್ ಅವಳವಡಿಕೆ ಕಾಮಗಾರಿಗಳಿಗೆ ಇಂದು ಗುದ್ದಲಿಪೂಜೆ ನೆರವೇರಿಸಿದ ನಂತರ ಅವರು ಮಾತನಾಡಿದರು.
ನಗರದ ನಾಗರೀಕರು, ಹಿರಿಯ ನಾಗರೀಕರು, ಮಹಿಳೆಯರು ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಈಗಾಗಲೇ ೫೦ ಪಾರ್ಕ್‌ಗಳ ಉದ್ಘಾಟನೆ ಆಗಿದೆ. ಇನ್ನೂ ೧೦೦ ಪಾರ್ಕ್‌ಗಳನ್ನು ಅಭಿವೃದ್ದಿಪಡಿಸುವ ಯೋಜನೆ ಇದೆ. ಶಿವಮೊಗ್ಗ- ಭದ್ರಾವತಿ ವ್ಯಾಪ್ತಿಯಲ್ಲಿ ಅಂದಾಜು ರೂ.೫೦ ಕೋಟಿ ವೆಚ್ಚದಲ್ಲಿ ೨೨ ಕೆರೆಗಳನ್ನು ಅಭಿವೃದ್ದಿ ಪಡಿಸುವ ಯೋಜನೆ ಸಿದ್ದಪಡಿಸಲಾಗಿದೆ. ೧೦ ಕೆರೆಗಳ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಹಾಗೂ ಇನ್ನುಳಿದ ೧೨ ಕೆರೆಗಳ ಅಭಿವೃದ್ದಿಗೆ ಅಂದಾಜುಪಟ್ಟಿ ತಯಾರಿಸಲಾಗಿದೆ ಎಂದರು.
ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ನಿವೇಶನ ಹಂಚುವುದು ಪ್ರಾಧಿಕಾರದ ಉzಶವಾಗಿದೆ. ಆದರೆ ನಗರದಲ್ಲಿ ಇತ್ತೀಚೆಗೆ ಭೂಮಿ ಸಿಗುತ್ತಿಲ್ಲ. ದರ ಹೆಚ್ಚಿರುವ ಕಾರಣ ಪ್ರಾಧಿಕಾರದ ವತಿಯಿಂದ ನಗರದಲ್ಲಿ ೧೦೦೦ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ನೀಡುವ ಯೋಜನೆ ಇದೆ. ಊರುಗಡೂರಿನ ೪ ಎಕರೆ ಜಗ ದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಲು ಟೆಂಡರ್ ಕರೆಯಲು ಅನುಮೋದನೆಗೆ ಕಳುಹಿಸಲಾಗಿದೆ. ಹಾಗೂ ಜೆ.ಹೆಚ್. ಪಟೇಲ್ ಬಡಾವಣೆಯ ಒಂದೂಕಾಲು ಎಕರೆಯಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸುವ ಯೋಜನೆಯಿದ್ದು ಖಾಸಗಿ ಅಪಾರ್ಟ್‌ಮೆಂನಲ್ಲಿರುವಂತೆ ಸ್ವಿಮ್ಮಿಂಗ್ ಪೂಲ್, ಪಾರ್ಕ್, ಕ್ಲಬ್ ಹೌಸ್, ಸಭಾಂಗಣ ಇತರೆ ಎಲ್ಲ ಸೌಲಭ್ಯ ಹೊಂದಿರುವ ರೂ.೩೦ ರಿಂದ ೪೦ ಲಕ್ಷ ಮೊತ್ತದಲ್ಲಿ ೨ ಬಿಹೆಚ್‌ಕೆ ಮತ್ತು ೫೦ ರಿಂದ ೬೦ ಲಕ್ಷ ಮೊತ್ತದಲ್ಲಿ ೩ ಬಿಹೆಚ್‌ಕೆ ಅಪಾರ್ಟ್‌ಮೆಟ್‌ಗಳನ್ನು ನಿರ್ಮಿಸಲಾಗುವುದು ಎಂದರು.
ಗೋಪಾಲಗೌಡ ಬಡಾವಣೆಯ ವಿವೇಕಾನಂದ ಬಡಾವಣೆಯಲ್ಲಿ ಒಂದೂಕಾಲು ಎಕರೆ ಜಗದಲ್ಲಿ ೧ ಮಾಲ್ ಮತ್ತು ಸೋಮಿನಕೊಪ್ಪದಲ್ಲಿ ೧ ಮಾಲ್ ಗಳನ್ನು ನಿರ್ಮಿಸುವ ಉzಶವಿದೆ. ಹಾಗೂ ವಾಜಪೇಯಿ ಲೇಔಟಿನಲ್ಲಿ ಪ್ರಾಧಿಕಾರದ ಕಚೇರಿ ನಿರ್ಮಾಣ ಮಾಡುವ ಯೋಜನೆಯಿದೆ ಎಂದರು.
ನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿನಿತ್ಯ ಸಾವಿರಾರು ಜನರು ವಾಯುವಿಹಾರಕ್ಕೆ ಬರುವುದರಿಂದ ಇಲ್ಲಿ ಓಪನ್ ಜಿಮ್ ನಿರ್ಮಿಸಿದರೆ ಅವರಿಗೆಲ್ಲ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ರೂ.೨೫ ಲಕ್ಷ ವೆಚ್ಚದಲ್ಲಿ ಜಿಮ್‌ನ್ನು ಅಳವಡಿಸಲು ಗುದ್ದಲಿ ಪೂಜೆ ನೆರವೇರಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಗೋಪಾಳ ೨ನೇ ಹಂತದಲ್ಲಿ ರೂ.೨.೫ ಕೋಟಿ ಮೊತ್ತದಲ್ಲಿ ಒಳಚರಂಡಿ (ಯುಜಿಡಿ) ಕಾಮಗಾರಿಗೆ ಇಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಹಾಗೂ ಗೋಪಾಳದ ಕೆಹೆಚ್‌ಬಿ ಕಾಲೋನಿಯ ಕನಕ ಸರ್ಕಲ್ ಬಳಿ ರೂ.೫ ಲಕ್ಷ ಮೊತ್ತದ ಆಟೋ ಸ್ಟ್ಯಾಂಡ್, ವಿನೋಬನಗರದ ಶಿವಾಲಯ ಎದುರು ರೂ.೫ ಲಕ್ಷ ಮೊತ್ತದಲ್ಲಿ ಆಟೋಸ್ಟ್ಯಾಂಡ್ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ಎಇ ಗಂಗಾಧರ್, ಎಇಇ ಬಸವರಾಜಪ್ಪ, ಪ್ರಮುಖರಾದ ನಾಗರಾಜ ಕಂಕಾರಿ, ಪಾಲಾಕ್ಷಿ, ಕೆ ರಂಗನಾಥ್ ಇನ್ನಿತರರಿದ್ದರು.