ತಾಜಾ ಸುದ್ದಿಲೇಖನಗಳುಶಿಕ್ಷಣ

ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ : ಭಾರತದ ಮೊದಲ ಮಹಿಳಾ ಶಿಕ್ಷಕಿ…

Share Below Link

ಸಮಕಾಲೀನ ವಿಸ್ಮಯದ ವಿಶ್ವವು ಸ್ಪರ್ಧಾತ್ಮಕ ಯುಗವಾಗಿದೆ. ೨೧ನೇ ಶತಮಾನದಲ್ಲಿ ವಿಶ್ವವು ಎಂದೆಂದೂ ಕಂಡು ಕೇಳರಿಯದಷ್ಟು ಬೆಳವಣಿಗೆ ಮತ್ತು ವಿಕಾಸವನ್ನು ಕಂಡಿದೆ. ಈ ವಿಶ್ವದ ವಿಭಿನ್ನ ಕ್ಷೇತ್ರಗಳಾದ ವಿeನ ಮತ್ತು ತಂತ್ರeನ, ಸಾಮಾಜಿಕ ಮತ್ತು ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯ, ಐತಿಹಾಸಿಕ ಮತ್ತು ಸಾಂಸ್ಕೃತಿಕ ವಿಚಾರಗಳಲ್ಲಿ ವೈವಿಧ್ಯಮಯ ವಾದ ಪ್ರಗತಿ ಕಂಡು ಬಂದಿದೆ. ಆದರೆ ನಮ್ಮ ದೇಶದ ಚರಿತ್ರೆಯ ಪುಟಗಳ ಆರಂಭದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಅವಲೋಕಿಸಿದಾಗ ಇಂದಿಗಿಂತ ಅಂದು ಕಾಲಘಟ್ಟದ ಹಿಂದುಳಿಯುವಿಕೆ ಕಂಡುಬಂದಿತ್ತು. ೨೧ನೇ ಶತಮಾನದಲ್ಲಿ ಸಾಕ್ಷರತೆಯು ಹೆಮ್ಮರವಾಗಿ ಬೇರು ಬಿಡಲು ೧೯ನೇ ಶತಮಾನದಲ್ಲಿ ಸಾಕ್ಷರತೆಯ ಬೆಳವಣಿಗೆಗಾಗಿ ಅಕ್ಷರಶಃ ಕಾದಾಡಿದ ವೀರಾಗ್ರಣಿಗಳನ್ನು ಸ್ಮರಿಸುವುದು ನಾವು ಅವರಿಗೆ ನೀಡುವ ಗೌರವವೇ ಸರಿ.
೧೯ನೇ ಶತಮಾನದ ಕಾಲಘಟ್ಟದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ ಅಕ್ಷರದವ್ವ ಸಾವಿತ್ರಿಬಾಯಿ ಪುಲೆಯವರನ್ನು ಸದಾ ಸ್ಮರಿಸಬೇಕು. ಏಕೆಂದರೆ ಅಂದು ಮಹಿಳೆಯ ಸ್ಥಾನ ಮನೆಯ ಅಡುಗೆ ಕೋಣೆಗೆ ಸೀಮಿತವಾಗಿತ್ತು. ಸಾವಿತ್ರಿ ಬಾಯಿ ಫುಲೆಯವರ ಹೋರಾಟದ ಫಲವಾಗಿ ಮಹಿಳೆ ಮನೆಯಿಂದ ಹೊರ ಬಂದು ಶಿಕ್ಷಣ ಪಡೆದು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ವತಂತ್ರವಾಗಿ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಅವಕಾಶ ಸಿಕ್ಕಿದೆ. ಅಂದಮೇಲೆ ಅಂತಹ ಮಹಾ ಮಹಿಳೆ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆಯವರ ಬಗ್ಗೆ ತಿಳಿಯೋಣ ಬನ್ನಿ.


ಕ್ರಾಂತಿಜ್ಯೋತಿ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆಯವರು ಸ್ವಾತಂತ್ರ್ಯ ಪೂರ್ವ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿzರೆ. ಸಾಮಾಜಿಕ ಬದಲಾವಣೆಯ ಕನಸು ಕಾಣುವುದಕ್ಕು. ಮಾತನಾಡುವುದಕ್ಕು ಬಹಳ ಸುಲಭ. ಆದರೆ ಕಂಡ ಕನಸನ್ನು ನೆನಸು ಮಾಡು ವುದು ಮಾತನಾಡಿದಷ್ಟು ಸುಲಭವೇನಲ್ಲ. ಬಹು ಕಷ್ಟಸಾಧ್ಯದ ವಿಚಾರವಾಗಿದೆ. ಕಾರಣ ಸಮಾಜದಲ್ಲಿನ ಆತಂಕ, ಅಂಧಕಾರ, ಅeನ, ಮೂಢನಂಬಿಕೆ, ಕಂದಾಚಾರಗಳ ಕಟ್ಟುಪಾಡುಗಳ ಸಂಕೋಲೆಗಳು ಬಿಗಿಯಾದ ಬಂಧನವನ್ನು ಬೆಸೆದಿರುತ್ತವೆ. ಒಂದೊಮ್ಮೆ ಸಮಾಜದಲ್ಲಿನ ಜನ ಪ್ರe ಹೀನ ವ್ಯವಸ್ಥೆಯಲ್ಲಿ ಬದುಕುಳಿಯಬೇಕಿತ್ತು. ಆದರೆ ಸಾಮಾಜಿಕ ಮತ್ತು ಇನ್ನಿತರ ಎ ಕ್ಷೇತ್ರಗಳ ಬದಲಾವಣೆಗೆ ಶಿಕ್ಷಣವೊಂದು ಮೂಲ ಅಸ್ತ್ರವೆನ್ನುವುದನ್ನು ಮನವರಿಕೆ ಮಾಡಿಕೊಡುವ ಮೂಲಕ ಶಿಕ್ಷಣದಿಂದ ಏನೆಲ್ಲವನ್ನು ಸಾಧಿಸಬಹುದು ಎನ್ನುವ ಬಗ್ಗೆ ಸಾಧಿಸಿ ತೋರಿಸಿದ ೧೯ನೇ ಶತಮಾನ ದಲ್ಲಿನ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಭಾರತೀಯ ಸ್ತ್ರೀ ಸಂಕುಲದ ಚಿರಧ್ರುವತಾರೆ, ಸಾಧಕರು, ಸಾಹಿತಿ, ಶಿಕ್ಷಣ ತe, ಸಮಾಜ ಸುಧಾರಕರು ಆದ ಸಾವಿತ್ರಿ ಬಾಯಿ ಫುಲೆ ಯವರ ಜೀವನ ಗಾಥೆ ಅನನ್ಯವೆನಿಸಿದೆ.
ಸ್ತ್ರೀಯರು ಗೃಹಿಣಿಯಾಗಿರಬೇಕಷ್ಟೇ ವಿನಃ ಅಕ್ಷರಾಭ್ಯಾಸ ಕಲಿತು ವಿದ್ಯಾವಂತ ರಾಗುವ ಅವಶ್ಯಕತೆ ಇಲ್ಲ ಎಂಬ ಸ್ವಾತಂತ್ರ್ಯ ಪೂರ್ವದಲ್ಲಿನ ಅನಿಷ್ಟ ಪದ್ಧತಿಯ ಸನ್ನಿವೇಶದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲೇಬೇಕೆಂದು ಶಾಲೆಗಳನ್ನು ತೆರೆದು ತಾವೇ ಶಿಕ್ಷಕಿಯಾಗಿ ವಿದ್ಯೆ ಕಲಿಸುತ್ತಿದ್ದ ಸಾವಿತ್ರಿಬಾಯಿಯವರ ಪರಿಶ್ರಮ ವರ್ತಮಾನದ ಮತ್ತು ಭವಿಷ್ಯದ ಮಹಿಳಾವರ್ಗಕ್ಕೆ ಆದರ್ಶಪ್ರಾಯವಾಗಿದೆ.
ಸಾವಿತ್ರಿಬಾಯಿ ಅವರು ೧೮೩೧ನೇ ಇಸವಿ ಜ.೩ರಂದು ಮಹಾರಾಷ್ಟ್ರದ ಸತಾರಾ ಜಿಯ ಖಂಡಾಲ ತಾಲ್ಲೂಕಿನ ಒಂದು ಸಣ್ಣ ಹಳ್ಳಿ ನಯಗಾಂವ್‌ನಲ್ಲಿ ಜನಿಸಿದರು. ಇವರ ತಂದೆ ಖಂಡೋಜಿ ನೆವಸೆ ಪಾಟೀಲ ಮತ್ತು ತಾಯಿ ಲಕ್ಷ್ಮೀಬಾಯಿ ಸಮಾಜದಲ್ಲಿ ಪ್ರತಿಷ್ಠಿತ ಜಮೀನ್ದಾರರು ಮತ್ತು ಶ್ರೀಮಂತ ಕುಟುಂಬದವರಾಗಿದ್ದರು. ಸಾವಿತ್ರಿಬಾಯಿ ಬಾಲ್ಯದಿಂದಲೇ ಚುರುಕುತನ ಮತ್ತು ಧೈರ್ಯವನ್ನು ಮೈಗೂಡಿಸಿಕೊಂಡಿದ್ದಳು. ಅಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳು ಶಾಲೆಗೆ ಹೋಗುವಂತಿರಲಿಲ್ಲ. ಶಿಕ್ಷಣ ಪಡೆಯುವಂತಿರಲಿಲ್ಲ. ಮಹಿಳೆಯರು ಅನಕ್ಷರತೆಯ ಕೂಪದಲ್ಲಿ ಬಡತನದ ಬೇಗೆಯಲ್ಲಿ ನರಳುತ್ತಿದ್ದ ಕಾಲವದು. ಸಾವಿತ್ರಿಬಾಯಿಗೆ ಬಾಲ್ಯದ ಸಮಾಜದ ಹಲವಾರು ಸಮಸ್ಯೆಗಳು ಚಿಂತನೆಗಳಾಗಿ ಕಾಡತೊಡಗಿದವು. ಹೆಣ್ಣು ಮಕ್ಕಳು ಏಕೆ ಅಕ್ಷರ ಕಲಿಯಬಾರದು? ಶಾಲೆಗೆ ಏಕೆ ಹೋಗುವಂತಿಲ್ಲ? ಹೆಣ್ಣು ಮಕ್ಕಳು ಶಾಲೆಗೆ ಹೋಗುವುದರಿಂದ ಯಾರಿಗಾದರೂ ತೊಂದರೆಯಾಗುತ್ತದೆಯೇ? ಹೆಣ್ಣು ಮಕ್ಕಳಿಗೆ ಮಾತ್ರ ಈ ನಿರ್ಬಂಧವೇಕೆ? ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯ ಸಮಾನತೆ ಇರಬಾರದೆ? ಹೆಣ್ಣನ್ನು ಆದಿಶಕ್ತಿಯೆಂದು ಪೂಜಿಸಿ ಮನೆಯ ಮೂಲೆಯೊಂದರಲ್ಲಿ ನಿರ್ಬಂಧಿಸುವುದು ಎಷ್ಟು ಸರಿ? ಎಂದೆ ಚಿಂತಿಸುತ್ತಿದಳು.
ಚಿಕ್ಕ ಮುಗ್ಧ ಬಾಲಕಿ ಸಾವಿತ್ರಿಬಾಯಿ ೧೦ನೇ ವಯಸ್ಸಿನಲ್ಲಿ ೧೩ ವರ್ಷ ವಯಸ್ಸಿನ ಜ್ಯೋತಿ ಬಾ ಫುಲೆ ಅವರನ್ನು ವಿವಾಹ ವಾದರು. ಅಂದಿನಿಂದ ಸಾವಿತ್ರಿಬಾಯಿ ಫುಲೆಯಾದರು. ಜ್ಯೋತಿ ಬಾ ಫುಲೆ ಯವರೇ ತಮ್ಮ ಪತ್ನಿ ಸಾವಿತ್ರಿ ಬಾಯಿ ಫುಲೆಯವರಿಗೆ ಶಿಕ್ಷಣ ಕಲಿಸಲು ಪ್ರಥಮ ಗುರುವಾದರು. ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಕಲಿತರು. ಮುಂದಿನ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಸಾವಿತ್ರಿಗೆ ಧೈರ್ಯ ತುಂಬಿ ವಿದ್ಯಾಭ್ಯಾಸಕ್ಕೆ ಪ್ರತಿಷ್ಠಿತ ಸ್ಕಾಟಿಷ್ ಮಿಷನರಿ ಶಾಲೆಗೆ ಸೇರಿಸಿದರು. ಅಲ್ಲಿ ಅವರು ೭ನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. ಸಾವಿತ್ರಿಬಾಯಿ ಫುಲೆಯವರ ಮುಂದಿನ ವಿದ್ಯಾಭ್ಯಾಸದ ಜವಾಬ್ದಾರಿ ಜ್ಯೋತಿ ಬಾ ಫುಲೆಯವರ ಗೆಳೆಯರಾದ ಸಖಾರಾಮ್ ಯಶವಂತ ಪರಾಂಜಪೆ ಮತ್ತು ಕೇಶವ ಶಿವರಾಮ ಭಾವಲ್ಕರ್ ಅವರ ಮೇಲಿದ್ದು, ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಾವಿತ್ರಿಬಾಯಿ ಫುಲೆ ಅವರು ಉತ್ತಮವಾಗಿ ವಿದ್ಯಾಭ್ಯಾಸ ಮಾಡಿದರು. ಅವರು ಎರಡು ಶಿಕ್ಷಕರ ತರಬೇತಿ ಕಾರ್ಯಕ್ರಮಗಳಿಗೆ ಸೇರಿ ಕೊಂಡರು. ಮೊದಲನೆಯ ಕೋರ್ಸ್‌ನ್ನು ಅಹ್ಮದ್‌ನಗರದಲ್ಲಿರುವ ಸಿಂಥಿಯಾ ಫರಾರ್ ಎಂಬ ಅಮೇರಿಕನ್ ಮಿಷನರಿ ನಡೆಸುತ್ತಿದ್ದ ಸಂಸ್ಥೆಯಲ್ಲಿ ಪೂರೈಸಿದರು. ಎರಡನೇ ಕೋರ್ಸನ್ನು ಪುಣೆಯ ಸಾಮಾನ್ಯ ಶಾಲೆಯಲ್ಲಿ ಪೂರ್ಣಗೊಳಿಸಿದರು. ಸರ್ಕಾರಿ ದಾಖಲೆಗಳ ಪ್ರಕಾರ ಅವರ ತರಬೇತಿಯನ್ನು ಗಮನಿಸಿದರೆ, ಸಾವಿತ್ರಿ ಬಾಯಿ ಮೊದಲ ಭಾರತೀಯ ಮಹಿಳಾ ಶಿಕ್ಷಕಿ ಮತ್ತು ಮುಖ್ಯೋಪಾಧ್ಯಾಯಿನಿ ಯಾಗಿರಬಹುದು ಎಂದು ತಿಳಿದು ಬರುತ್ತದೆ. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ಮಹಾರಾಷ್ಟ್ರದಲ್ಲಿ ಬಾಲಿಕಾ ದಿನ್ ಎಂದು ಆಚರಿಸಲಾಗುತ್ತದೆ.
ಸಾವಿತ್ರಿಬಾಯಿ ಪುಲೆಯವರು ಆ ಸಮಯದಲ್ಲಿ ಕ್ರಾಂತಿಕಾರಿ ಸ್ತ್ರೀವಾದಿಗಳಲ್ಲಿ ಒಬ್ಬರಾಗಿದ್ದ ಸಗುಣಾಬಾಯಿ ಅವರೊಂದಿಗೆ ಪುಣೆಯ ಮರಾಠವಾಡದಲ್ಲಿ ಬಾಲಕಿಯರ ಶಾಲೆಯಲ್ಲಿ ಕಲಿಸಲು ಪ್ರಾರಂಭಿಸಿದರು. ೧೮೫೧ರಲ್ಲಿ ಸಾವಿತ್ರಿ ಬಾಯಿ ಫುಲೆ ಮತ್ತು ಜೋತಿಬಾ ಫುಲೆಯವರು ಪುಣೆಯಲ್ಲಿ ಹೆಣ್ಣುಮಕ್ಕಳಿ ಗಾಗಿ ೩ ವಿಭಿನ್ನ ಶಾಲೆಗಳನ್ನು ಪ್ರಾರಂಭಿಸಿ ನಡೆಸುತ್ತಿದ್ದರು. ಮೂರು ಶಾಲೆಗಳಿಂದ ಸೇರಿ ಸುಮಾರು ೧೫೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ದಾಖಲಾಗಿದ್ದರು. ಮುಂದಿನ ದಿನಗಳಲ್ಲಿ ಸಾವಿತ್ರಿಬಾಯಿ ಫುಲೆಯವರು ೧೮ ಶಾಲೆಗಳನ್ನು ತೆರೆದು ವಿವಿಧ ಜತಿಗಳ ಮಕ್ಕಳಿಗೆ ಅವಕಾಶ ಕಲ್ಪಿಸಿ ಅವರಿಗೆ ವಿದ್ಯೆ ಕಲಿಸಿದರು.
ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರು ಮಹಿಳೆಯರಿಗೆ ಮತ್ತು ದೀನದಲಿತ ಜಾತಿಗಳ ಇತರ ಜನರಿಗೆ ಕಲಿಸಲು ಪ್ರಾರಂಭಿಸಿದರು. ದಲಿತರ ಶಿಕ್ಷಣದ ವಿರುದ್ಧ ವಿಶೇಷವಾಗಿ ಪುಣೆಯ ಮೇಲ್ಟಾತಿಯವರು ಇದನ್ನು ಅನೇಕರು ಸರಿಯಾಗಿ ಸ್ವೀಕರಿಸಲಿಲ್ಲ. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರನ್ನು ಸ್ಥಳೀಯರು ಬೆದರಿಕೆ ಹಾಕಿದರು ಮತ್ತು ಸಾಮಾಜಿಕವಾಗಿ ಕಿರುಕುಳ ಮತ್ತು ಅವಮಾನ ಮಾಡಿದರು. ಸಾವಿತ್ರಿಬಾಯಿ ಫುಲೆ ಶಾಲೆಯತ್ತ ಹೆಜ್ಜೆ ಹಾಕಿದಾಗ ಅವರ ಮೇಲೆ ಹಸುವಿನ ಸಗಣಿ ಮತ್ತು ಗಂಜಲ, ಮಣ್ಣು, ಕಲ್ಲುಗಳನ್ನು ಎಸೆದರು. ಅಂತಹ ದೌರ್ಜನ್ಯಗಳನ್ನು ಅನುಭವಿಸಿದಾಗ್ಯೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ತನ್ನ ಗುರಿಯಿಂದ ಅವರು ಹಿಂದೆ ಸರಿಯಲಿಲ್ಲ. ದೃಢನಿಶ್ಚಯದ ಸಾವಿತ್ರಿಬಾಯಿ ಪುಲೆಯ ವರನ್ನು ಇದಾವ ಅವಮಾನಗಳೂ ನಿರುತ್ಸಾಹಗೊಳಿಸಲಾರವು ಏಕೆಂದರೆ ಅವರ ನಿರ್ಧಾರ ದೃಢವಾಗಿತ್ತು. ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಖ್ ಅವರೊಂದಿಗೆ ಸಗುಣಾಬಾಯಿ ಸೇರಿಕೊಂಡರು, ಸಾವಿತ್ರಿ ಬಾಯಿ ಫುಲೆಯವರು ಅಂತಿಮವಾಗಿ ಶಿಕ್ಷಣ ಚಳವಳಿಯಲ್ಲಿ ನಾಯಕರಾದರು.
ಅಂದಿನ ಕಾಲದ ಅಸ್ಪೃಶ್ಯತೆ ಮತ್ತು ಜತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಪ್ರಯತ್ನಿಸಿದರು. ಕೆಳವರ್ಗದ ಜನರಿಗೆ ಸಮಾನ ಹಕ್ಕುಗಳನ್ನು ದೊರಕಿಸಿ ಕೊಡಲು ಪ್ರಯತ್ನ ಮಾಡಿದರು. ಹಿಂದೂ ಕೌಟುಂಬಿಕ ಜೀವನದ ಸುಧಾರಣೆ ಯಲ್ಲಿ ಅವರು ತಮ್ಮ ಪತಿಯೊಂದಿಗೆ ಅವರ ಪ್ರಯತ್ನಗಳಲ್ಲಿ ಜೊತೆಯಾಗಿ ಕೆಲಸ ಮಾಡಿದರು. ಸೆ.೨೪, ೧೮೭೩ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜ್ಯೋತಿ ಬಾ ಫುಲೆ ‘ಸತ್ಯಶೋಧಕ ಸಮಾಜ’ವನ್ನು ಸ್ಥಾಪಿಸಿದರು.
ಈ ಸಮಾಜ ಸುಧಾರಣಾ ಸಂಸ್ಥೆ ಯೊಂದಿಗೆ ಸಾವಿತ್ರಿಬಾಯಿ ಫುಲೆಯವರು ಸಂಬಂಧ ಹೊಂದಿದ್ದರು. ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳನ್ನು ಬಯಸುವ ಎ ಜನರನ್ನು ಮತ್ತು ಸರ್ಕಾರಿ ಅಧಿಕಾರಿಗಳನ್ನು ಸದಸ್ಯರನ್ನಾಗಿ ಒಳಗೊಂಡಿತ್ತು ಸತ್ಯ ಶೋಧಕ ಸಮಾಜದ ಉzಶವು ಮಹಿಳೆಯರು, ಶೂದ್ರರು, ದಲಿತರು ಮತ್ತು ಸೌಲಭ್ಯ ವಂಚಿತರ ಏಳಿಗಯನ್ನು ಬಯಸುವುದೇ ಆಗಿದೆ. ಪುಲೆ ದಂಪತಿಗಳು ಯಾವುದೇ ಪುರೋಹಿತರು ಅಥವಾ ಯಾವುದೇ ವರದಕ್ಷಿಣೆಯಿಲ್ಲದೆ ಸಮಾಜದಲ್ಲಿ ಕನಿಷ್ಠ ವೆಚ್ಚದ ವಿವಾಹಗಳನ್ನು ಏರ್ಪಡಿಸಿದರು. ವಧು-ವರರಿಬ್ಬರೂ ತಮ್ಮ ವಿವಾಹದ ಸಮಯದಲ್ಲಿ ಸಮಾನವಾಗಿ ಪ್ರತಿeಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡುತ್ತಿದ್ದರು.
ಫುಲೆ ದಂಪತಿಗಳಿಗೆ ಮಕ್ಕಳಿಲ್ಲದ ಕಾರಣ ಅವರು ಯಶವಂತರಾವ್ ಎಂಬ ಮಗು ವನ್ನು ದತ್ತು ಸ್ವೀಕಾರ ಮಾಡಿದರು. ಆ ದತ್ತುಪುತ್ರ ಯಶವಂತರಾವ್ ಮುಂದೆ ಓದಿ ವೈದ್ಯರಾಗಿ ತಮ್ಮ ಪ್ರದೇಶದ ಜನರಿಗೆ ಸೇವೆ ಸಲ್ಲಿಸಿದರು.
೧೮೭೬ರ ಸಂದರ್ಭದಲ್ಲಿ ಮಹಾರಾಷ್ಟ್ರ ದಲ್ಲಿ ಭೀಕರ ಬರಗಾಲ ಬಂದಿತು. ಸಾವಿತ್ರಿಬಾಯಿ ಫುಲೆ ಮತ್ತು ಅವರ ಪತಿ ೧೮೭೬ ರಿಂದ ಪ್ರಾರಂಭವಾದ ಬರಗಾಲದ ಸಮಯದಲ್ಲಿ ಬಿಡುವಿಲ್ಲದೆ ಕೆಲಸ ಮಾಡಿದರು. ಅವರು ಊರೂರು ಸುತ್ತಾಡಿ ಸಂತ್ರಸ್ತರಿಗಾಗಿ ಧನ ಸಂಗ್ರಹ ಮಾಡಿದರು. ನಿರಾಶ್ರಿತರಿಗೆ ಬಾಲಾಶ್ರಮವನ್ನು ಪ್ರಾರಂಭಿಸಿದರು. ಬೇರೆ ಮಹಿಳೆಯ ಸಹಕಾರದೊಂದಿಗೆ ಹಸಿವಿನಿಂದ ಬಳಲುತ್ತಿ ರುವವರಿಗೆ ಆಹಾರ ನೀಡುವ ವ್ಯವಸ್ಥೆ ಮಾಡಿದರು. ವಿವಿಧ ಪ್ರದೇಶಗಳಲ್ಲಿ ಉಚಿತ ಆಹಾರವನ್ನು ವಿತರಿಸಿದರು ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ ೫೨ ಉಚಿತ ಆಹಾರ ವಸತಿಗೃಹಗಳನ್ನು ಪ್ರಾರಂಭಿಸಿದರು. ೧೮೯೭ ರ ಸಮಯದಲ್ಲಿ ಪರಿಹಾರ ಕಾರ್ಯವನ್ನು ಪ್ರಾರಂಭಿಸಲು ಸಾವಿತ್ರಿಬಾಯಿ ಬ್ರಿಟಿಷ್ ಸರ್ಕಾರವನ್ನು ಮನವೊಲಿಸಿದರು.
೧೮೯೭ರಲ್ಲಿ ಮಹಾರಾಷ್ಟ್ರದ ಸುತ್ತಮುತ್ತಲಿನ ಪ್ರದೇಶವನ್ನು ವ್ಯಾಪಕ ಸಾಂಕ್ರಾಮಿಕ ಪ್ಲೇಗ್ ರೋಗವು ಹರಡಿತು. ವಿಶ್ವದಾದ್ಯಂತ ೩ನೇ ಅಲೆಯಾಗಿ ಪ್ಲೇಗ್ ಸಾಂಕ್ರಾಮಿಕ ರೋಗವು ಕೆಟ್ಟದಾಗಿ ಬಾಧಿಸಿದಾಗ, ಧೈರ್ಯಶಾಲಿ ಸಾವಿತ್ರಿಬಾಯಿ ಮತ್ತು ಯಶವಂತರಾವ್ ರೋಗದಿಂದ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಪುಣೆಯ ಹೊರವಲಯದಲ್ಲಿ ಚಿಕಿತ್ಸಾಲಯಗಳನ್ನು ತೆರೆದರು. ರೋಗಿಗಳನ್ನು ಚಿಕಿತ್ಸಾಲಯಕ್ಕೆ ಕರೆತಂದರು. ಅಲ್ಲಿ ಅವರನ್ನು ಶುಕ್ರೂಷೆ ಮಾಡುತ್ತಿದ್ದರು. ಹೀಗೆ ಸೇವೆ ಮಾಡುತ್ತಿರುವಾಗ ಸ್ವತಃ ಇವರೇ ಪ್ಲೇಗ್ ರೋಗಕ್ಕೆ ತುತ್ತಾಗಿದರು. ಅದರಿಂದ ಚೇತರಿಸಿಕೊಳ್ಳಲಾಗದೆ ಮಾ.೧೦, ೧೮೯೭ ರಂದು ಬಲಿಯಾದರು.
ಸಾವಿತ್ರಿಬಾಯಿ ಫುಲೆಯವರು ಓರ್ವ ಕವಯಿತ್ರಿಯಾಗಿಯೂ ಕಾಣಿಸಿ ಕೊಂಡಿದ್ದು ಕಾವ್ಯ ಫುಲೆ ಎಂಬ ಗೀತೆಯನ್ನು ಬರೆದಿzರೆ. ತನ್ನ ಪತಿ ಜ್ಯೋತಿಬಾ ಪುಲೆ ಮರಣ ಹೊಂದಿದಾಗ ತನ್ನ ತಂದೆಗೆ ಅಗ್ನಿ ಸ್ಪರ್ಷ ಮಾಡುವ ಹಕ್ಕು ದತ್ತುಪುತ್ರನಿಗೆ ಇಲ್ಲವೆಂದು ಸಮಾಜವು ಟೀಕಿಸಿತು. ಆಗ ಈ ಸಮಾಜದ ಕಟ್ಟುಪಾಡನ್ನು ಪ್ರತಿರೋಧಿಸಿದ ಸಾವಿತ್ರಿ ಬಾಯಿ ಫುಲೆಯವರು ತಾನೇ ಸ್ವತಃ ತನ್ನ ಪತಿಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂದಿನ ಕಾಲದ ಸಮಾಜದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹಗಳನ್ನು ತಡೆಯಲು ಶ್ರಮಿಸಿದರು. ಒಟ್ಟಾರೆಯಾಗಿ ಹೇಳುವುದಾದರೆ ಸಾವಿತ್ರಿ ಬಾಯಿ ಫುಲೆಯವರು ಭಾರತದ ಓರ್ವ ಧೀರೋದಾತ್ತ ಮಹಿಳೆಯಾಗಿ ಕಂಡು ಬರುತ್ತಾರೆ. ಸಮಾಜ ಸುಧಾರಕಿಯಾಗಿ, ಶಿಕ್ಷಣ ತeಯಾಗಿ, Sಏಉ ಊಐಖS ಔಅಈ Sಉಅಇಏಉ uಊ Sಏಉ ಆಐSಐಖಏ ಐಘೆಈಐಅ ಆಗಿ ಸಾವಿತ್ರಿಬಾಯಿ ಪುಲೆಯವರು ಶ್ರಮಿಸಿzರೆ.
ಇಂದು ಹೆಣ್ಣುಮಕ್ಕಳು ಸ್ವತಂತ್ರವಾಗಿ ಸಮಾನವಾಗಿ ಶಿಕ್ಷಣ ಪಡೆಯುತ್ತಿzರೆಂದರೆ ಇದರ ಹಿಂದಿನ ಪರಿಶ್ರಮ ಸಾವಿತ್ರಿಬಾಯಿ ಪುಲೆಯವರದೇ ಆಗಿದೆ. ಇವರ ಪರಿಶ್ರಮವನ್ನು ಸಾರ್ಥಕ್ಯಗೊಳಿಸಲು ಸರ್ವ ಭಾರತೀಯರೂ ಶ್ರಮಿಸಬೇಕಾದದ್ದು ಬಹಳ ಗಂಭೀರವಾದ ಜವಾಬ್ದಾರಿಯಾಗಿದೆ. ಶಿಕ್ಷಣವೇ ಶಕ್ತಿ ಶಿಕ್ಷಣವೇ ಮುಕ್ತಿ ಎಂದರಿತು ಬಾಳೋಣ.
ಕೆ.ಎನ್. ಚಿದಾನಂದ, ಹಾಸನ