ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಅಧ್ಯಾತ್ಮಿಕ – ಸಾಹಿತ್ಯ – ಸಂಸ್ಕೃತಿಯ ಪ್ರವರ್ತಕ ಅಗಸ್ತ ಮಹರ್ಷಿ…

Share Below Link

ಮಾರ್ಪಳ್ಳಿ ಆರ್. ಮಂಜುನಾಥ್, ಶಿವಮೊಗ್ಗ.
ವೈದಿಕ ಯುಗದ ಗೌರವಾನ್ವಿತ ಮಹರ್ಷಿಯಾಗಿ ವೈದಿಕ ಸಂಪ್ರದಾಯವನ್ನು ಅಧ್ಯಾತ್ಮಿಕ ಸಾಹಿತ್ಯವನ್ನು ಲೋಕದಲ್ಲಿ ಹರಡಿ ನೀರಾವರಿ ಕೃಷಿಯ ಜೊತೆಗೆ ವೈದ್ಯಕೀಯದಲ್ಲಿ ಅಪಾರ eನ ಸಂಪತ್ತನ್ನು ಲೋಕಕಲ್ಯಾಣಕ್ಕಾಗಿ ಸಲ್ಲಿಸಿದ ಅಗಸ್ತ್ಯಮಹರ್ಷಿಗಳ ಕಥೆ ವಿಶಿಷ್ಟವೆನಿಸಿದೆ.
ಉಪನಿಷತ್ತು, ಅರಣ್ಯಕ, ಬ್ರಾಹ್ಮಣ ಪುರಾಣಗಳಲ್ಲಿ ಅಗಸ್ಯ್ತರ ಸಾಧನೆ ಶ್ರೇಷ್ಠತೆಯನ್ನು ಉಖಿಸ ಲಾಗಿದೆ. ಅಗಸ್ತ್ಯರು ಋಗ್ವೇದದ ೧೭೯ರ ಸ್ತುತಿ ಗೀತೆಗಳು, ಅಗಸ್ತ್ಯ ಗೀತೆ , ಅಗಸ್ತ್ಯಸಂಹಿತೆ, ಹಾಗೂ ನಿರ್ಣಯ ತಂತ್ರ ಪಠ್ಯ ಮೊದಲಾದ ಸಂಸ್ಕೃತ ಗ್ರಂಥಗಳನ್ನು ರಚಿಸಿzರೆ. ಅಗಸ್ತ್ಯರ ಜನನದ ಬಗ್ಗೆಯೂ ಪೌರಾಣಿಕ ಕಥೆ ಇದೆ. ಮಿತ್ರ ಮತ್ತು ವರುಣ ಯಮಳ ದೇವತೆಗಳು ಯಜ್ಞ ಮಾಡುವಾಗ ಅಲ್ಲಿಗೆ ಬಂದ ಊರ್ವಶಿಯ ಸೌಂದರ್ಯ ನೋಡಿ ಅವರ ವೀರ್ಯಸ್ಕಲನ ವಾಗಿ ಅದನ್ನು ಕುಂಭದಲ್ಲಿ ರಕ್ಷಣೆ ಮಾಡಿದ ಮೇರೆಗೆ ಅಗಸ್ಯರ ಜನನವಾಗುತ್ತದೆ. ಇನ್ನೊಂದು ಪುರಾಣದ ಪ್ರಕಾರ ಇವರ ತಂದೆ ಪುಲಸ್ಯ, ತಾಯಿ ಹವಿರ್ಭು ಎನ್ನಲಾಗಿದೆ .
ಋಷಿಮೂಲ ನದಿಮೂಲವು ತರ್ಕಕ್ಕೆ ನಿಲುಕದ್ದು. ಲೋಕ ಕಲ್ಯಾಣವೇ ಇವರಿಬ್ಬರ ಉದ್ಧೇಶ ಮತ್ತು ಗುರಿಯಾಗಿರುತ್ತದೆ. ಅಗಸ್ತ್ಯರು ಮಹಾ ತಪಸ್ವಿಗಳು eನಿಗಳು ಜೊತೆಗೆ ಮಹಾ ಮಹಿಮರು ಎನ್ನುವುದಕ್ಕೆ ಸಾಕ್ಷಿ ಯಾಗಿ ಶಿವ ಗಿರಿಜೆಯ ಕಲ್ಯಾಣದ ಕಾಲದಲ್ಲಿ ದೇವಾನು ದೇವತೆ ಗಳೆಲ್ಲರೂ ಹಾಗೂ ಋಷಿ ಮುನಿಗಳು ಹಿಮಾಲಯದಲ್ಲಿ ಸೇರುತ್ತಾರೆ. ತ್ರೀಮೂರ್ತಿಗಳು ಮತ್ತು ದೇವತೆಗಳು ಸೇರಿದ್ದರಿಂದ ಹಿಮಾಲಯದಲ್ಲಿ ಭೂಮಿಯ ಭಾರ ಜಾಸ್ತಿಯಾಗಿ ದಕ್ಷಿಣದ ಪ್ರದೇಶಗಳ ತೂಕ ಕಡಿಮೆಯಾಗಿ ಸಮತೋಲನ ತಪ್ಪುವುದನ್ನು ಕಂಡ ಶಿವನು ಅಗಸ್ತ್ಯರಿಗೆ ನೀವು ದಕ್ಷಿಣಕ್ಕೆ ಹೋಗಿ ಎಂದು ಬಿನ್ನವಿಸಿಕೊಳ್ಳು ತ್ತಾನೆ. ಅಗಸ್ತ್ಯರು ಶಿವನ ಕೋರಿಕೆ ಯಂತೆ ದಕ್ಷಿಣದ ಪ್ರದೇಶಕ್ಕೆ ಬಂದಾಗ ಉತ್ತರದ ಹಿಮಾಲಯ ದಲ್ಲಿನ ಭಾರ ಮತ್ತು ದಕ್ಷಿಣದ ಭಾರ ಎರಡು ಕಡೆ ಭೂಮಿ ಸಮತೋಲನ ವಾಗುತ್ತದೆ ಉತ್ತರದಲ್ಲಿ ಎ ದೇವತೆಗಳ ಋಷಿಮುನಿಗಳ ತೂಕ ಒಂದಾದರೆ ದಕ್ಷಿಣದಲ್ಲಿ ಅಗಸ್ತ್ಯ ರೊಬ್ಬರ ತಪಶಕ್ತಿಯ ತೂಕ ಹೇಗಿತ್ತೆಂಬುದನ್ನು ಅರಿಯಬಹುದಾಗಿದೆ .


ಅಗಸ್ತ್ಯರು ಸಾಕ್ಷಾತ್ ಶ್ರೀರಾಮ ಚಂದ್ರನಿಗೆ ರಾವಣನನ್ನು ಸಂಹಾರ ಮಾಡುವಾಗ ಆದಿತ್ಯ ಹೃದಯ ಸ್ತೋತ್ರವನ್ನು ಉಪದೇಶಿಸಿದ ಮೇಲೆಯೇ ಶ್ರೀರಾಮಚಂದ್ರನು ರಾವಣನನ್ನು ಸಂಹಾರ ಮಾಡಿದ ನೆಂಬುದು ರಾಮಾಯಣ ಮಹಾ ಕಾವ್ಯದಲ್ಲಿ ಉಖಿಸಲ್ಪಟ್ಟಿದೆ. ಇಲ್ವಲಾ ಮತ್ತು ವಾತಾಪಿ ಎಂಬ ಮಹಾ ರಾಕ್ಷಸರು ಗಳು ಬ್ರಾಹ್ಮಣ ವೇಷದಲ್ಲಿ ಬಂದಂತಹ ಅತಿಥಿಗಳಿಗೆ ಸತ್ಕಾರ ಮಾಡುವ ನೆಪದಲ್ಲಿ ವಾತಾಪಿ ಯನ್ನು ಆಹಾರದ ರೂಪದಲ್ಲಿ ಅತಿಥಿಗೆ ಉಣಬಡಿಸಿ ಹೊಟ್ಟೆಯಲ್ಲಿ ಸೇರಿದ ನಂತರ ಇಲ್ವಲಾನು ವಾತಾಪಿಯನ್ನು ಹೊರಗೆ ಬಾ ಎಂದು ಕರೆಯುತ್ತಿದ್ದ. ಆಗ ವಾತಾಪಿಯು ಅತಿಥಿಯ ಹೊಟ್ಟೆ ಯನ್ನು ಸೀಳಿಕೊಂಡು ಹೊರಗೆ ಬರುತ್ತಿದ್ದನು. ನಂತರ ಅವರಿಬ್ಬರು ಸೇರಿ ಅತಿಥಿಯನ್ನು ತಿನ್ನುತ್ತಿದ್ದರು. ಇದನ್ನು ತಿಳಿದೇ ಅಲ್ಲಿಗೆ ಬಂದ ಅಗಸ್ತ್ಯರಿಗೆ ವಾತಾಪಿಯನ್ನು ಆಹಾರ ಮಾಡಿ ಉಣಬಡಿಸಿದ ಮೇಲೆ ಇಲ್ವಲಾನು ವಾತಾಪಿ ಬಾ ಎಂದು ಕರೆಯುತ್ತಿದ್ದಂತೆ ಅಗಸ್ತ್ಯರು ಹೊಟ್ಟೆಯಲ್ಲಿದ್ದ ವಾತಾಪಿಯನ್ನು ವಾತಾಪಿ ಜೀರ್ಣೋಭವ ಎಂದು ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡರು. ಕೂಡಲೇ ವಾತಾಪಿಯು ಅಗಸ್ತ್ಯರ ಹೊಟ್ಟೆ ಯಲ್ಲಿಯೇ ಜೀರ್ಣವಾಗಿ ಹೋದನು. ನಂತರ ಇಲ್ವಲಾನನ್ನು ತಮ್ಮ ತಪಶಕ್ತಿಯಿಂದ ನಾಶ ಮಾಡಿದರು.
ಪುರಾಣದ ಕಾಲದಲ್ಲಿ ಇಂದ್ರ ಮತ್ತು ವ್ರತಾ ರಾಕ್ಷಸರ ನಡುವೆ ಘೋರ ಯುದ್ಧ ನಡೆಯುತ್ತದೆ. ಕಾಲಕೇಯ ಎಂಬ ರಾಕ್ಷಸನು ಮತ್ತು ಇತರ ರಾಕ್ಷಸರು ಸಮುದ್ರದಲ್ಲಿ ಹೋಗಿ ಅಡಗಿ ಕೊಳ್ಳುತ್ತಾರೆ . ಆಗ ದೇವತೆಗಳಿಗೆ ಸಮುದ್ರದ ಒಳಗೆ ಪ್ರವೇಶಿಸಿ ರಾಕ್ಷಸರನ್ನು ಹುಡುಕಿ ಸಂಹರಿಸಲು ಸಾಧ್ಯವಾಗುವುದೇ ಇರುವುದರಿಂದ ಅಗಸ್ತ್ಯರನ್ನು ಬೇಡಿಕೊಳ್ಳುತ್ತಾರೆ. ಆಗ ಅಗಸ್ತ್ಯರು ಇಡೀ ಸಮುದ್ರದ ನೀರನ್ನೆಲ್ಲ ಆಪೋಷಣೆ ತೆಗೆದುಕೊಳ್ಳುತ್ತಾರೆ. ಸಮುದ್ರವು ಬರಿದಾದಾಗ ದೇವೇಂದ್ರನು ರಾಕ್ಷಸರನ್ನು ಸಂಹಾರ ಮಾಡುತ್ತಾನೆ .
ಇನ್ನೊಂದು ಪುರಾಣದ ಪ್ರಕಾರ ವಿಂದ್ಯಾಚಲ ಪರ್ವತವು ತಾನು ಹಿಮಾಲಯಕ್ಕಿಂತಲೂ ಎತ್ತರವಾಗಿ ಬೆಳೆಯಬೇಕೆಂದು ದಿನದಿನಕ್ಕೂ ಆಕಾಶ ಮುಟ್ಟಲು ಹೊರಟಿರುತ್ತದೆ. ಅದನ್ನು ಕಂಡ ದೇವಾನುದೇವತೆಗಳು ಲೋಕ ಹಿತಕ್ಕಾಗಿ ಉತ್ತರ ಮತ್ತು ದಕ್ಷಿಣ ಪ್ರದೇಶಗಳ ಮಧ್ಯ, ಪ್ರವೇಶ ಅಡ್ಡವಾಗಿ ವ್ಯವಹಾರ ಬಾಂಧವ್ಯಕ್ಕೆ ತೊಡಕ್ಕಾಗುತ್ತದೆಯೆಂದು ಅಗಸ್ತ್ಯರನ್ನು ಬೇಡಿಕೊಳ್ಳುತ್ತಾರೆ. ಅಗಸ್ತ್ಯರು ದಕ್ಷಿಣದ ಕಡೆ ಬರುವಾಗ ಶಿಷ್ಯನಾಗಿದ್ದ ವಿಂಧ್ಯಾ ಪರ್ವತವು ಅಗಸ್ತ್ಯರಿಗೆ ನಮಸ್ಕಾರ ಮಾಡಲು ಬಗ್ಗಿದಾಗ ಅಗಸ್ತ್ಯರು ನಾನು ಹಿಂದಿರುಗಿ ಬರುವ ತನಕ ನೀನು ಹೀಗೆ ಇರಬೇಕೆಂದು ಹೇಳುತ್ತಾರೆ. ಗುರುವಿನ ಚರಣಕ್ಕೆ ಬಗ್ಗಿದ ವಿಂಧ್ಯಾ ಪರ್ವತವು ಗುರುವಿನ ಮಾತಿಗೆ ಬಗ್ಗಿ ಬಾಗುತ್ತದೆ. ಅಗಸ್ತ್ಯರು ನಂತರ ಉತ್ತರದ ಕಡೆಗೆ ಹೋಗುವುದೇ ಇಲ್ಲ. ಹೀಗಾಗಿ ವಿಂದ್ಯ ಪರ್ವತವು ಎತ್ತರವಾಗದೆ ಬಗ್ಗಿಕೊಂಡೆ ಇದ್ದುದರಿಂದ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಸಂಚಾರ ವಿನಿಮಯಕ್ಕೆ ತೊಂದರೆಯಾಗಲಿಲ್ಲ.
ತಮಿಳು ಕಾವ್ಯದಲ್ಲಿ ಸಾಹಿತ್ಯ ದಲ್ಲಿ ಅಗಸ್ತ್ಯರ ವಿಚಾರವು ಬಹಳಷ್ಟು ಉಖವಾಗಿದೆ. ಅಗಸ್ತ್ಯರು ತಮಿಳನ್ನು ಮುರುಗನಿಂದ ಕಲಿತು ತಮಿಳು ಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿರುವುದಾಗಿ ತಮಿಳು ಸಾಹಿತ್ಯ ದಲ್ಲಿ ಉಖವಾಗಿದೆ. ತಮಿಳು ಸಾಹಿತ್ಯಕ್ಕೆ ತಮಿಳು ಭಾಷೆಗೆ ಅಗತ್ಯ ವೆನಿಸಿದ ತಮಿಳು ವ್ಯಾಕರಣವನ್ನು ಅಗಸ್ತ್ಯರು ನೀಡಿದ್ದು ತಮಿಳು ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದೆ.
ತಮಿಳುನಾಡಿನ ಪೊದಿಯಲ್ ಬೆಟ್ಟದಲ್ಲಿ ಅಗಸ್ತ್ಯರು ನೆಲೆಸಿದ್ದು ಅಲ್ಲಿ ಅವರ ಆಶ್ರಮವಿತ್ತೆಂದು ಹಾಗೆಯೇ ಕೇರಳ ರಾಜ್ಯದ ಪಶ್ಚಿಮ ಘಟ್ಟದ ಅಗಸ್ತ್ಯ ಮಲೈ ಎಂಬ ಶಿಖರರಲ್ಲಿ ಅವರು ವಾಸವಾಗಿದ್ದು ಅಲ್ಲಿ ಅವರ ಆಶ್ರಮವಿತ್ತೆಂಬ ನಂಬಿಕೆಯೂ ಇದೆ. ಇಲ್ಲಿ ಎರಡು ನದಿಗಳಾದ ತಾಮ್ರಪರ್ಣಿ ನದಿಯು ಪೂರ್ವಕ್ಕೆ ಹರಿಯುವಂತೆಯೂ ಮತ್ತು ನೈಯ್ಯಾರ್ ನದಿಯು ಪಶ್ಚಿಮಕ್ಕೆ ಹರಿಯುವಂತೆ ಮಾಡಿzರೆ ಎನ್ನಲಾಗಿದೆ. ತಿರುವನಂತಾಪುರದಲ್ಲಿ ಅಗಸ್ತ್ಯರ ಅಂತಿಮ ವಿಶ್ರಾಂತಿ ಪಡೆದ ಸ್ಥಳವೆನ್ನಲಾಗಿದೆ. ಕಲರಿ ಪಯಟ್ಟು ಸಮರ ಕಲೆಯಾಗಿದ್ದು ಇದು ಅಗಸ್ತ್ಯರಿಂದ ಹುಟ್ಟಿತೆಂದು ಅಲ್ಲದೆ ಸಿದ್ಧ ವೈದ್ಯಕೀಯದ ಪಿತಾಮಹ ನೆಂದು ಅಗಸ್ತ್ಯರನ್ನು ಕರೆಯಲಾಗಿದೆ . ತಾಮ್ರಪರ್ಣಿಯನ್ ಔಷಧ ಹಾಗೂ ಆಧ್ಯಾತ್ಮಿಕ ಕಥೆಯ ಅಭಿವೃದ್ಧಿಯ ಪ್ರವರ್ತಕರು ಅಗಸ್ತ್ಯರಾಗಿzರೆ .
ಭಾರತದಲ್ಲಿ ಮಾತ್ರವಲ್ಲದೆ ಇಂಡೋನೇಷಿಯಾ, ಜಾವಾ, ಕಾಂಬೋಡಿಯಾದಲ್ಲಿಯೂ ಅಗಸ್ತ್ಯರ ಪ್ರತಿಮೆಗಳು ಉಬ್ಬು ಶಿಲ್ಪಗಳಿವೆ. ಆ ಕಾಲದಲ್ಲಿ ದೇಶದ ನಾನಾ ಕಡೆಗಳಲ್ಲಿ ಮಾತ್ರವಲ್ಲದೆ ಹೊರದೇಶಗಳಲ್ಲಿಯೂ ಅಗಸ್ಯ್ತರ ಮಹತ್ವ ಹರಡಿರುವುದಕ್ಕೆ ಸಾಕ್ಷಿಯಾಗಿದೆ .
ಲಲಿತಾ ಸಹಸ್ರನಾಮ ಮತ್ತು ತ್ರಿಶತಿ ನಾಮಗಳಲ್ಲಿಯೂ ಸಾಕ್ಷಾತ್ ವಿಷ್ಣುವಿನ ರೂಪಿಯಾದ ಹಯಗ್ರೀವರು ಅಗಸ್ತ್ಯರ ಸಂವಾದ ದೊಂದಿಗೆ ಈ ಸಹಸ್ರನಾಮದ ಮಹತ್ವವನ್ನು ಲೋಕಾರ್ಪಣೆ ಗೊಳಿಸಲಾಗಿದೆ. ಅಗಸ್ತ್ಯರ ಪತ್ನಿ ಲೋಪಮುದ್ರಳು ವಿದರ್ಭ ರಾಜಕುಮಾರಿ ಎಂದು ಇವಳು ಸಹ ಮಹಾ eನಿಯಾಗಿದ್ದು ಲೋಪ ಮುದ್ರೆಯೇ ಕಾವೇರಿ ನದಿಯಾಗಿ ಹರಿದು ಕೃಷಿಗೆ ನೀರಾವರಿಗೆ ಜೀವದಾತೆಯಾಗಿzಳೆ. ಲೋಪ ಮುದ್ರೆಯು ಒಂದು ರೂಪದಲ್ಲಿ ಕಾವೇರಿ ನದಿಯಾಗಿಯೂ ಇನ್ನೊಂದು ರೂಪವು ಅಗಸ್ತ್ಯರ ಪತ್ನಿಯಾಗಿಯೂ eನ ಸಂಪನ್ನೆ ಮಾತ್ರವಲ್ಲದೆ ಅಗಸ್ತ್ಯರ ಜೊತೆಗೆ ಆಧ್ಯಾತ್ಮಿಕತೆಯ ಚರ್ಚೆ ವಾದಗಳಲ್ಲು ಭಾಗಿಯಾಗಿ ಪ್ರಸಿದ್ಧಿಯನ್ನು ಪಡೆದಿzಳೆ.
ಅಗಸ್ತ್ಯರು ನಕ್ಷತ್ರ ಮಂಡಲ ದಲ್ಲಿ ಭೂಮಿಯಿಂದ ದೂರ ೬೫೦ ಜ್ಯೋತಿವರ್ಷವಿದ್ದ ಅತ್ಯಂತ ಪ್ರಕಾಶಮಾನವಾದ ಎರಡನೆಯ ಅಧ್ಭುತ ವೆನಿಸಿದ ನಕ್ಷತ್ರವಾಗಿ ಶಾಶ್ವತವಾಗಿ ಮಿನುಗುತ್ತಿದ್ದರೆಂದು ನಂಬಲಾಗಿದೆ . ಅಗಸ್ತ್ಯರಿಗೆ ಮನ, ಕಳಸಜ, ಕುಂಭಜ ,ಕುಂಭಯೋನಿ, ಮೈತ್ರಾ ವರುಣಿ ,ಎನ್ನುವ ನಾಮದೇಯವು ಇದೆ.
ಮಹಾರಾಷ್ಟ್ರ, ಕರ್ನಾಟಕ ತಮಿಳುನಾಡು , ಕೇರಳ ಹೀಗೆ ಎಡೆ ಅಗಸ್ತ್ಯರ ಆಶ್ರಮವಿತ್ತೆಂದು ಹಾಗೂ ವೈದಿಕ ಸಂಸ್ಕೃತಿ ಕೃಷಿ ನಿರಾವರಿ ವೈದ್ಯಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅಗಸ್ತ್ಯ ಮಹರ್ಷಿಯು ನೀಡಿದ ಕೊಡುಗೆ ಅಪಾರ ಅನನ್ಯವೆನಿಸಿದೆ .