ಉತ್ಸಾಹಿ ಯುವಕ ನೈಜಿಲ್ ಸ್ಮರಣಾರ್ಥ ಕಾರುಣ್ಯ ಟ್ರಸ್ಟ್‌ನಿಂದ ಯಶಸ್ವಿ ರಕ್ತದಾನ ಶಿಬಿರ
ಶಿವಮೊಗ್ಗ: ಕಾರುಣ್ಯ ಚಾರಿಟಬಲ್ ಟ್ರಸ್ಟ್ (ರಿ.) ಸಂಸ್ಥೆಯ ವತಿಯಿಂದ ಇತ್ತೀಚೆಗೆ ನಿಧನರಾದ ಉತ್ಸಾಹಿ ಯುವಕ ನೈಜಿಲ್ ಅಂತೋಣಿ ಅವರ ಜನ್ಮದಿನ ನಿಮಿತ್ತ ಡಿ ನಗರದ ಕಾರುಣ್ಯ ವೃದ್ಧಾಶ್ರಮದಲ್ಲಿ ಮೆಗ್ಗಾನ್ ಜಿ ಬೋಧನಾ ಆಸ್ಪತ್ರೆ ಮೆಗ್ಗಾನ್ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು.
ರಕ್ತದಾನ ಶಿಬಿರಕ್ಕೆ ನಗರದ ಉತ್ಸಾಹಿ ಯುವಕರು, ಸಮಾಜ ಸೇವಕರು ಹಾಗೂ ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆಯ ಬದ್ಧತೆಯನ್ನು ತೋರಿದರು.
ಯುವಕ ನೈರ್ಜಿಲ್ ಅಂತೋಣಿ ಅವರ ಸೇವಾ ಮನೋ ಭಾವ ಮತ್ತು ಸಮಾಜದ ಮೇಲಿನ ಪ್ರೀತಿಯನ್ನು ಸದಾ ಜೀವಂತವಾಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿತ್ತು.
ಟ್ರಸ್ಟ್‌ನ ಅಧ್ಯಕ್ಷರು ಸದಾಶಿವಪ್ಪ ಅವರು ಶಿಬಿರದಲ್ಲಿ ಭಾಗವಹಿಸಿದ ಎ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿ, ಮುಂಬರುವ ದಿನಗಳಲ್ಲಿ ನಮ್ಮ ಟ್ರಸ್ಟ್‌ನಿಂದ ಇಂತಹ ಸಮಾಜಮುಖಿ ಕಾರ್ಯಕ್ರಮಗ ಳನ್ನು ಮತ್ತಷ್ಟು ಆಯೋಜಿಸ ಲಾಗುವುದು ತಿಳಿಸಿದರು.
ಮೆಗ್ಗಾನ್ ಮೆಡಿಕಲ್ ಸೂಪರಿಂಡೆಂಟ್ ಡಾ| ತಿಮ್ಮಪ್ಪ, ರಕ್ತನಿಧಿ ಕೇಂದ್ರದ ಹನುಮಂತಪ್ಪ, ಸಂಸ್ಥೆಯ ಪ್ರಮುಖರಾದ ಕಿರಣ್ ಫೆರ್ನಾಂಡಿಸ್, ವಿನ್ಸೆಂಟ್ ರೋಡ್ರಿಗಸ್, ರಾಬರ್ಟ್ ಡಿಸೋಜ, ನವೀನ್ ಅಂಥೋನಿ, ಪ್ರದೀಪ್ ಕಾವಡ್, ವೆಂಕಟೇಶ್ ಸೇರಿದಂತೆ ಅಧಿಕ ಸಂಖ್ಯೆಯ ಯುವಕರು ಪಾಲ್ಗೊಂಡಿದ್ದರು.


