ಡಿ.೨೧ರಂದು ನೈಜಿಲ್ ಸ್ಮರಣಾರ್ಥ ಕಾರುಣ್ಯ ವದ್ಧಾಶ್ರಮದಲ್ಲಿ ರಕ್ತದಾನ ಶಿಬಿರ…
ಶಿವಮೊಗ್ಗ : ನಗರದ ಕಾರುಣ್ಯ ಚಾರಿಟಬಲ್ ಟ್ರಸ್ಟ್ (ರಿ.)ನಿಂದ ಇತ್ತೀಚಿಗೆ ಅಕಾಲಿಕ ನಿಧನ ಹೊಂದಿರುವ ಉತ್ಸಾಹಿ ಯುವಕ ನೈಜಿಲ್ ಅಂಥೋಣಿ ಅವರ ಜನ್ಮದಿನಾಚರಣೆ ನಿಮಿತ್ತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಶಿವಮೊಗ್ಗದ ಗಾರ್ಡನ್ ಏರಿಯಾ ೧ನೇ ಕ್ರಾಸ್‌ನಲ್ಲಿರುವ ಕಾರುಣ್ಯ ವೃದ್ಧಾಶ್ರಮದಲ್ಲಿ ಡಿ.೨೧ರ ಭಾನುವಾರ ಬೆಳಿಗ್ಗೆ ೧೦.೩೦ಕ್ಕೆ ಈ ರಕ್ತದಾನ ಶಿಬಿರ ನಡೆಯಲಿದ್ದು, ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳು ಮನವಿ ಮಾಡಿ ದ್ದಾರೆ. ಹೆಚ್ಚಿನ ಮಾಹಿತಿಗೆ ಮೊ: ೯೭೩೯೧೨೧೮೦೩, ೮೦೮೮೮ ೯೬೫೬೬ರಲ್ಲಿ ಸಂಪರ್ಕಿಸಿ.




