ಕ್ರೈಂಜಿಲ್ಲಾ ಸುದ್ದಿ

ಭದ್ರಾವತಿಯಲ್ಲಿ ಡಬಲ್ ಮರ್ಡರ್…

Share Below Link

ಶಿವಮೊಗ್ಗ: ಪ್ರೇಮಿಗಳಿಗೆ ಸಹಕರಿಸಿದ ಇಬ್ಬರನ್ನು ಯುವತಿಯ ಸಹೋದರ ಹಾಗೂ ಸ್ನೇಹಿತರು ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಭದ್ರಾವತಿಯ ಜೈಭೀಮ್ ಬಡಾವಣೆಯಲ್ಲಿ ನಡೆದಿದೆ.
ನಗರದ ಕಿರಣ್ (೨೫), ಮಂಜುನಾಥ್ (೪೫) ಹತ್ಯೆಯಾದ ಯುವಕರು. ಕಳೆದೆರಡು ದಿನಗಳ ಹಿಂದೆ ಮನೆ ತೊರೆದಿದ್ದ ಪ್ರೇಮಿಗಳು ಶುಕ್ರವಾರ ಸಂಜೆ ಹಳೆ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಹುಡುಗನ ಸ್ನೇಹಿತರ ಮೇಲೆ ಯುವತಿಯ ಸಹೋದರ ಹಾಗೂ ಆತನ ಸ್ನೇಹಿತರು ದಾಳಿ ಮಾಡಿ zರೆ. ಜಗಳ ನಿಲ್ಲಿಸಲು ಹೋದಾಗ ಇಬ್ಬರಿಗೂ ಚಾಕುವಿನಿಂದ ಇರಿದಿzರೆ.
ಹುಡುಗಿ ಹುಡುಗನ ಜೊತೆ ಓಡಿ ಹೋಗುವಾಗ ಇವರಿಬ್ಬರು ಬೆಂಬಲ ನೀಡಿzರೆಂದು ದಾಳಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿzರೆ