ಆರೋಗ್ಯಉದ್ಯೋಗಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶ

ಎಚ್ಚರ…!! ದೇಶದಲ್ಲೀಗ ಸ್ಪಷ್ಟವಾಗಿ ಗೋಚರಿಸ ತೊಡಗಿದೆ ಕಾರ್ಪೊರೇಟ್ ಏಕಸ್ವಾಮ್ಯದ ಭಯ…!

Share Below Link

ಶಿವಮೊಗ್ಗ: ವಿಮಾನಯಾನದಲ್ಲಿ ಕಳೆದ ಕೆಲ ದಿನದಿಂದ ಇಡೀ ದೇಶದಲ್ಲಿ ಕೋಲಾಹಲ ಉಂಟಾಗಿದೆ. ಸಾವಿರಾರು ಜನ ದಿಕ್ಕೆಟ್ಟು ಕುಳಿತಿzರೆ. ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಸರಕಾರಕ್ಕೆ ಯಾವ ಜವಾಬ್ದಾರಿ ಇಲ್ಲವೇ? ಬಂದರು, ರೇಲ್ವೆ, ವಿಮಾನ ಅತ್ಯಂತ ಸೂಕ್ಷ್ಮ ಸಂಗತಿಗಳು. ಅಲ್ಲಿ ಇಂತಹ ಒಂದು ಸಮಸ್ಯೆ ಆದಾಗ ಸ್ವತಃ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಮಧ್ಯ ಪ್ರವೇಶಿಸಬೇಕು. ಆದರೆ ಯಾರೂ ಕೇಳುತ್ತಿಲ್ಲ ಅಂದರೆ ಏನರ್ಥ. ಖಾಸಗೀಕರಣ ವಿರೋಧ ಮಾಡಿದಾಗ ಈ ಖಾಸಗಿಯವರ ಮೇಲೆ ಎ ನಿಯಂತ್ರಣ ಇದೆ ಎಂದು ಸರ್ಕಾರ ಸಮಜಾಯಿಷಿ ನೀಡುತ್ತದೆ. ಇದು ಯುದ್ಧ ಅಥವಾ ಬೇರೆ ಯಾವುದೇ ಗಂಭೀರ ಪರಿಸ್ಥಿತಿಯಲ್ಲಿ ಉಂಟಾದರೆ ಏನಾದೀತು. ಈ ಅವ್ಯವಸ್ಥೆಯನ್ನು ಇಡೀ ಜಗತ್ತು ಇದನ್ನು ನೋಡುತ್ತಿದೆ. ಭಾರತವನ್ನು ವಿಶ್ವಗುರು ಮಾಡುತ್ತೇವೆ ಎನ್ನುವವರ ಆಡಳಿತ ಇದೇನಾ? ಇದು ಜಗತ್ತಿನ ಎದುರು ಭಾರತ ತಲೆತಗ್ಗಿಸಿ ನಿಲ್ಲುವಂತ ಪರಿಸ್ಥಿತಿ ಎಂದರೆ ತಪ್ಪಾಗಲಾರದು. ಆಡಳಿತ ವಿಫಲತೆಯಿಂದ, ಭಾರತದಲ್ಲಿ ಇಂತಹ ಸನ್ನಿವೇಶ ಸೃಷ್ಠಿಯಾದುದು ಇದೇ ಮೊದಲು. ಇನ್ನು ಪ್ರಯಾಣಿಕರ ಗೋಳಿನ ಕಥೆ ನೂರಾರು. ವಿಮಾನ ನಿಲ್ದಾಣದಲ್ಲಿ ಒಂದೆಡೆ ಸಿಸ್ಟರ್ ತನ್ನ ಮಗಳಿಗೆ ರಕ್ತಸ್ರಾವ ಆಗುತ್ತಿದೆ ದಯವಿಟ್ಟು ಪ್ಯಾಡ್ ಕೊಡಿ ಎಂದು ಅಂಗಲಾಚುತ್ತಿರುವ ತಂದೆ, ಮತ್ತೊಂದೆಡೆ ತಮ್ಮ ಲಗೇಜ್ ಬ್ಯಾಗ್‌ನಲ್ಲಿ ವಯಸ್ಸಾಗ ಪೋಷಕರ ಮೆಡಿಸಿನ್‌ಗಳಿವೆ ದಯವಿಟ್ಟು ನಮ್ಮ ಲಗೇಜ್ ಕೊಡಿ ಎಂದು ಗೋಗರೆಯುವ ದೃಶ್ಯ ಮನಕಲಕುವಂತಿದೆ. ಬ್ಯಾಂಕ್, ವೈದ್ಯಕೀಯ, ಶಿಕ್ಷಣ, ರೈಲ್ವೆ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳನ್ನು ಖಾಸಗಿಯವರಿಗೆ ವಹಿಸಿದರೆ ಮುಂದಿನ ದಿನಗಳಲ್ಲಿ ದೇಶದ ಜನತೆ ಕೆಲವೇ ವ್ಯಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಒದ್ದಾಡುವ ಸ್ಥಿತಿ ದೂರವಿಲ್ಲ.
ಪಕ್ಷದ ಸತತ ಸೋಲುಗಳಿಂದ ದೇಶದ ರಾಜಕೀಯ ವಲಯದಲ್ಲಿ ಅನೇಕ ಬಾರಿ ಟೀಕೆ, ವ್ಯಂಗ್ಯಗಳಿಗೆ ಗುರಿಯಾಗಿದ್ದರೂ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕಳೆದೊಂದು ದಶಕದಿಂದ ನಿರಂತರವಾಗಿ ನೀಡುತ್ತಿದ್ದ ಎಚ್ಚರಿಕೆಗಳು ಇಂದಿನ ಭಾರತದಲ್ಲಿ ನಿಜವಾಗುತ್ತಿವೆ ಎಂಬ ಚರ್ಚೆಗಳು ಗಂಭೀರವಾಗಿ ಕೇಳಿ ಬರುತ್ತಿವೆ. ಒಂದು ಕಾಲದಲ್ಲಿ ಅವರ ರಾಜಕೀಯ ವಿರೋಧಿಗಳು ೞಪಪ್ಪು ಪ್ರಿಡಿಕ್ಶನ್‌ೞ ಎಂದು ಹಾಸ್ಯ ಮಾಡುತ್ತಿದ್ದ ಅನೇಕ ವಿಚಾರಗಳು ಇಂದು ದೇಶದ ಆರ್ಥಿಕ ಹಾಗೂ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ಸಂಕಷ್ಟದ ರೂಪ ತಾಳುತ್ತಿವೆ.
ಈ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿ ಜಾರಿ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸ್ವತಃ ಅವರೇ ಅಧಿಕಾರಕ್ಕೆ ಬಂದ ತಕ್ಷಣ ಜರಿಗೆ ತಂದ ಜಿಎಸ್‌ಟಿ, ಸಣ್ಣ ವ್ಯಾಪಾರಸ್ಥರ ಬೆನ್ನು ಮುರಿದಿದೆ ಎಂಬ ಟೀಕೆ ಸಾಮಾನ್ಯವಾಗಿ ಕೇಳಿಬರುತ್ತಿದೆ.
ಜಿಎಸ್‌ಟಿಯನ್ನು ರಾಹುಲ್ ಗಾಂಧಿ ಆರಂಭದಿಂದಲೇ ಗಬ್ಬರ್ ಸಿಂಗ್ ಟ್ಯಾಕ್ಸ್ ಅದು ಮಧ್ಯಮವರ್ಗ ಮತ್ತು ಸಣ್ಣ ವ್ಯಾಪಾರಗಳನ್ನು ನಾಶ ಮಾಡುತ್ತದೆ ಎಂದು ಕೂಗಿ ಹೇಳಿzರೆ. ಇದರಿಂದ ಇಂದು ಪರೋಕ್ಷವಾಗಿ ದೇಶದ ಮಾರುಕಟ್ಟೆಗಳಲ್ಲಿ ಸಣ್ಣ-ಮಧ್ಯಮ ಉದ್ಯಮಗಳು ಕುಗ್ಗಿ, ಕಾರ್ಪೊರೇಟ್ ಸಂಸ್ಥೆಗಳ ಏಕಾಧಿಪತ್ಯ ಬೆಳೆದಿದ್ದು, ರಾಹುಲ್ ಅವರ ಮಾತುಗಳನ್ನು ಪುನಃ ನೆನಪಿಸುತ್ತದೆ.
ಅದೇರೀತಿ ರಾಹುಲ್ ಗಾಂಧಿ ಅವರು ಅಗ್ನಿಪಥ್ ಯೋಜನೆ ಯುವಕರ ಭವಿಷ್ಯಕ್ಕೆ ಅಪಾಯಕಾರಿಯೆಂದು ಎಚ್ಚರಿಸಿದ್ದರು. ಇಂದು ದೇಶದಲ್ಲಿ ಉದ್ಯೋಗಾವಕಾಶಗಳು ಕುಸಿಯು ತ್ತಿದ್ದು, ಕಾರ್ಪೊರೇಟ್ ಏಕಸ್ವಾಮ್ಯದಿಂದ ಉದ್ಯೋಗ ಮಾರುಕಟ್ಟೆ ಕಾನ್ಟ್ರಾಕ್ಟ್ ಮಾದರಿಯತ್ತ ತಳ್ಳಲ್ಪಟ್ಟಿದೆ ಎಂಬುದು ರಾಹುಲ್ ಅವರ ಮಾತುಗಳನ್ನು ಸಮರ್ಥಿ ಸುವಂತೆ ಮಾಡಿದ್ದು, ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್‌ಗಳ ತೀವ್ರ ಕೊರತೆ, ಅನಿಯಂತ್ರಿತ ಕೆಲಸದ ಒತ್ತಡ ಮತ್ತು ನಿಯಮ ಬದಲಾವಣೆಗಳಿಂದ ಉಂಟಾದ ಅವ್ಯವಸ್ಥೆ ಇದಕ್ಕೆ ತಾಜಾ ಉದಾಹರಣೆಯಂತಿದೆ.
ರಾಹುಲ್ ಗಾಂಧಿ ಅವರು ಸಿಎಎ ಹಾಗೂ ಡೇಟಾ ಗೌಪ್ಯತೆ ಕುರಿತು ಪ್ರಾರಂಭ ದಿಂದಲೇ ಎಚ್ಚರಿಸಿದ್ದರು. ಇಂದಿಗೆ ದೆಶದ ಅನೇಕ ಸ್ಟ್ರಾಟರ್ಜಿಕ್ ಸರ್ವಿಸ್‌ಗಳು, ಮೂಲ ಸೌಕರ್ಯ, ಡೇಟಾ ಮತ್ತು ಸಂಪನ್ಮೂಲಗಳು ಕೆಲವೇ ಕಾರ್ಪೊರೇಟ್ ದೈತ್ಯರ ಕೈಗಳಲ್ಲಿ ಸಿಲುಕಿರುವುದು ಭವಿಷ್ಯಕ್ಕಾಗಿ ಆತಂಕಕಾರಿ ಎನ್ನಬಹುದಾಗಿದೆ.
ಅದಾನಿ ಏಕಸ್ವಾಮ್ಯದ ಕುರಿತು ರಾಹುಲ್ ಎಚ್ಚರಿಕೆ ಇಂದು ಏರ್‌ಪೋರ್ಟ್‌ಗಳಲ್ಲಿ ನಗ್ನ ಸತ್ಯವಾಗಿದೆ. ಕಳೆದ ದಶಕದಲ್ಲಿ ರಾಹುಲ್ ಗಾಂಧಿ ನಿರಂತರವಾಗಿ ಅದಾನಿ ಗ್ರೂಪ್‌ಗೆ ದೊರೆಯುತ್ತಿರುವ ರಾಜಕೀಯ ಆಶ್ರಯ ಹಾಗೂ ಆ ಮೂಲಕ ಉಂಟಾಗುತ್ತಿರುವ ಏಕಸ್ವಾಮ್ಯ ಕುರಿತು ಧ್ವನಿ ಎತ್ತಿದ್ದರು. ಆದರೆ ಅವರ ಮಾತುಗಳನ್ನು ಅವರ ರಾಜಕೀಯ ವಿರೋಧಿಗಳು ಅಭಿವೃದ್ಧಿಯ ವಿರೋಧಿ ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಚಿತ್ರಿಸಿದರು.
ಆದರೆ ಇಂದು ದೇಶದ ಪ್ರಮುಖ ವಿಮಾನ ನಿಲ್ದಾಣಗಳ ನಿರ್ವಹಣೆ ಒಂದೇ ಬಣದ ಕೈಗಳಲ್ಲಿ ಕೇಂದ್ರೀಕರಿಸಿರುವುದು, ಮತ್ತು ಕೆಲ ವಿಮಾನ ಸಂಸ್ಥೆಗಳಿಗೆ ಅತಿಯಾದ ಮಾರುಕಟ್ಟೆ ಹಂಚಿಕೆ ದೊರಕಿರುವುದು, ಆ ಎಚ್ಚರಿಕೆಯನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡುತ್ತಿದೆ.
ಇತ್ತೀಚಿನ ಪೈಲಟ್ ರೆಸ್ಟ್ ರೂಲ್ಸ್ ಬದಲಾವಣೆ ಮತ್ತು ನಿರ್ವಹಣಾ ಸಮಸ್ಯೆಗಳ ಹಿನ್ನೆಲೆಯಲ್ಲಿ ೧೦೦೦ಕ್ಕೂ ಹೆಚ್ಚು ವಿಮಾನಗಳು ಹಾರಾಟ ರದ್ದು ಮಾಡಿರುವುದು ಲಕ್ಷಾಂತರ ಪ್ರಯಾಣಿಕರನ್ನು ಸಂಕಷ್ಟಕ್ಕೆ ತಳ್ಳಿದೆ.
ವಿಮಾನ ನಿಲ್ದಾಣಗಳಲ್ಲಿ ಗಂಟೆಗಳ ಗಂಟೆಗಳು ಕಾಯುವ ಪ್ರಯಾಣಿಕರು, ಮತ್ತೊಂದೆಡೆ ಹೆಚ್ಚುತ್ತಿರುವ ಕಾರ್ಪೊರೇಟ್ ಲಾಭ, ಇದು ರಾಹುಲ್ ಗಾಂಧಿ ಹೇಳಿದರು ಎನ್ನಲಾದ ೞಮೋನೊಪಲಿ ಮಾಡೆಲ್‌ೞನ ನೈಜ ಚಿತ್ರವಾಗಿ ಪರಿಣಮಿಸಿದೆ. ಖಾಸಗಿ ವಿಮಾನ ಸಂಸ್ಥೆಯೊಂದು ಮಾರುಕಟ್ಟೆಯ ಶೇ.೬೦ ಹಂಚಿಕೆಯನ್ನು ಹಿಡಿದಿಟ್ಟಿರುವುದು, ಉಳಿದ ಸಣ್ಣ ಏರ್‌ಲೈನ್‌ಗಳಿಗೆ ಉಸಿರಾಡಲು ಅವಕಾಶವಿಲ್ಲದಂತೆ ಮಾಡಿದೆ ಎನ್ನುವ ಗಂಭೀರ ಆರೋಪಗಳು ಕೂಡ ಕೇಳಿಬರುತ್ತಿವೆ.
ಮಾರುಕಟ್ಟೆಯ ಏಕಸ್ವಾಮ್ಯ, ನಿಯಮ ಬದಲಾವಣೆ, ಉದ್ಯೋಗ ಒತ್ತಡ, ಮನಬಂದಂತೆ ಬೆಲೆ ಏರಿಕೆ, ಸೇವಾ ಅಸ್ತವ್ಯಸ್ತತೆಯು ಸಾರ್ವಜನಿಕ ಜೀವನವನ್ನು ಸಂಕಷ್ಟದೆಡೆಗೆ ತಳ್ಳುತ್ತಿದೆ. ಈ ಸರಪಳಿ ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ರಾಹುಲ್ ಗಾಂಧಿ ಅವರು ಶ್ರಮ ಕಾಯ್ದೆ ಸುಧಾರಣೆಗಳು ಕಾರ್ಮಿಕರ ಹಕ್ಕುಗಳನ್ನು ಕುಗ್ಗಿಸುತ್ತವೆ ಎಂದು ಆರೋಪಿಸಿದ್ದರು. ಪೈಲಟ್‌ಗಳ ರೆಸ್ಟ್ ನಿಯಮ ಬದಲಾವಣೆ, ಸುರಕ್ಷತೆಗಿಂತ ಲಾಭಕ್ಕೆ ಆದ್ಯತೆ ಮತ್ತು ನಿರ್ವಹಣಾ ಒತ್ತಡ ಇವುಗಳು ಕಾರ್ಪೊರೇಟ್ ಕೇಂದ್ರಿತ ನೀತಿಗಳ ದುಷ್ಪರಿಣಾಮ ಎನ್ನಬಹುದಾಗಿದೆ.
ಏಕಸ್ವಾಮ್ಯದ ವಿಕಸಿತ ಭಾರತ ಯಾರಿಗಾಗಿ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬರತೊಡಗಿದೆ. ಕಳೆದ ಕೆಲ ದಿನಗಳಿಂದ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಹೈರಾಣಾಗಿರುವ ಪ್ರಯಾಣಿಕರು, ಮತ್ತೊಂದೆಡೆ ನೂರಾರು ಕೋಟಿ ಲಾಭ ಗಳಿಸುತ್ತಿರುವ ಕಾರ್ಪೊರೇಟ್ ದೈತ್ಯರು. ಈ ವ್ಯತ್ಯಾಸ ವಿಕಸಿತ ಭಾರತದ ನೈಜ ಮುಖವೋ ಎಂಬ ಪ್ರಶ್ನೆ ಉದಯಿಸುತ್ತದೆ.
ದೇಶದಲ್ಲಿ ಬಲಿಷ್ಠವಾಗಿದ್ದ ಕಾಂಗ್ರೆಸ್ ಪಕ್ಷದ ಸೋಲಿನಿಂದ ಕಂಗೆಟ್ಟಿದ್ದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ದೇಶದ ಮೂಲೆ ಮೂಲೆಗೆ ಸಂಚರಿಸಿ ಎಲ್ಲಾ ವರ್ಗದ ಜನರೊಂದಿಗೆ ಬೆರೆಯುವ ಮೂಲಕ ರಾಜಕೀಯವಾಗಿ ಅತ್ಯಂತ ಪ್ರಬುದ್ಧರಾಗುವ ಮೂಲಕ ದೇಶದ ಬಲಿಷ್ಠ ರಾಜಕೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶದ ರಾಜಕೀಯ ವಲಯದಲ್ಲಿ ಮೋದಿ ಹವಾ ಆರಂಭವಾದಾಗಿನಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಮೂದಲಿಸುತ್ತಿದ್ದ ಅವರ ರಾಜಕೀಯ ವಿರೋಧಿಗಳು ಟೀಕಿಸಿದ ರಾಹುಲ್ ಅವರ ಭವಿಷ್ಯವಾಣಿಗಳು ಇಂದು ದೇಶದ ಮೂಲಸೌಕರ್ಯಗಳ ಬೊಗಸೆಯ ಸ್ಪಷ್ಟವಾಗಿ ಪ್ರತಿಧ್ವನಿಸುತ್ತಿರುವಂತಿದೆ. ರಾಹುಲ್ ಮಾಡಿದ ಅನೇಕ ಎಚ್ಚರಿಕೆಗಳು ಆ ಕಾಲದಲ್ಲಿ ರಾಜಕೀಯ ನಾಟಕವೆಂದು ತಳ್ಳಿಹಾಕಲ್ಪಟ್ಟಿದ್ದರೂ, ಇಂದಿನ ವಿಮಾನಯಾನ ಕ್ಷೇತ್ರದ ಗೊಂದಲ, ಕಾರ್ಪೊರೇಟ್ ಏಕಸ್ವಾಮ್ಯ ಮತ್ತು ಸರ್ಕಾರದ ನೀತಿ ವೈಫಲ್ಯ ಈ ಎಲ್ಲವೂ ಅಂದು ಹೇಳಿದ ಮಾತು ಇಂದು ನಿಜವಾದ ಘಟನೆ ಎಂಬ ವಿಶ್ಲೇಷಣೆಗೆ ಕಾರಣವಾಗುತ್ತಿದೆ.