ಜಿಲ್ಲಾ ಸುದ್ದಿತಾಜಾ ಸುದ್ದಿಸಿನಿಮಾ

ಡಿ. ೬ : ಕುವೆಂಪು ರಂಗಮಂದಿರದಲ್ಲಿ ಸಂಗೀತ ಸ್ವರ ಧಾರೆ…

Share Below Link

ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಡಿ.೬ರ ನಾಳೆ ಸಂಜೆ ೫.೩೦ಕ್ಕೆ ಸಂಗೀತ್ ಸಮರ್ಪಣ್ ಟ್ರಸ್ಟ್ ವತಿಯಿಂದ ಸಂಗೀತ ಸ್ವರ ಧಾರೆ ಎಂಬ ವಿಶಿಷ್ಟವಾದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ನಾಡಿನ ಪ್ರಖ್ಯಾತ ಸುಗಮ ಸಂಗೀತ ಗಾಯಕಿ ಹಾಗೂ ಟ್ರಸ್ಟ್ ನ ಅಧ್ಯಕ್ಷೆ ಶ್ರೀಮತಿ ಸುರೇಖಾ ಹೆಗಡೆ ಮತ್ತು ಅವರ ತಂಡದಿಂದ ನಡೆಯುವ ಈ ಸಂಗೀತ ಕಾರ್ಯ ಕ್ರಮದಲ್ಲಿ ಹಳೆಯ ಸುಮಧುರ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಆಯ್ದ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಲಿzರೆ.
ಕಾರ್ಯಕ್ರಮವನ್ನು ಜಿ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಆಗಮಿಸಲಿzರೆ.
ನಂತರ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಸುರೇಖಾ ಹೆಗಡೆ, ರಮೇಶ್ ಚಂದ್ರ, ನಿತಿನ್ ರಾಜರಾಮ ಶಾಸ್ತ್ರಿ ಯವರುಗಳು ಹಳೆಯ ಸುಮಧುರ ಕನ್ನಡ ಮತ್ತು ಹಿಂದಿ ಚಲನಚಿತ್ರಗಳ ಆಯ್ದ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಲಿzರೆ.
ಕಾರ್ಯಕ್ರಮದಲ್ಲಿ ಮೆಲ್ವಿನ್ ಮತ್ತು ಬಸವರಾಜ್ (ಕೀಬೋರ್ಡ್), ರಾಮರಾವ್ ರಂಗಧೋಳ್ (ರಿದಂ ಪ್ಯಾಡ್), ವಿಠಲ್ ರಂಗಧೋಳ್ (ತಬಲಾ) ರವರು ಗಾಯಕರಿಗೆ ಸಹ ಕಲಾವಿದರಾಗಿ ಸಾಥ್ ನೀಡಲಿzರೆ.
ಸಾರ್ವಜನಿಕರಿಗೆ ಹಾಗೂ ಸಂಗೀತ ಪ್ರೇಮಿಗಳಿಗೆ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಸುರೇಖಾ ಹೆಗಡೆ ಕೋರಿzರೆ.