ಭಕ್ತಿಯಿಂದ ಸಮಾನತೆ ಸಾರಿದ ಶ್ರೇಷ್ಠ ದಾರ್ಶನಿಕ ಕನಕದಾಸರು…
ಶಿವಮೊಗ್ಗ : ಕನಕದಾಸರು ಪ್ರಪಂಚ ಕಂಡ ಶ್ರೇಷ್ಠ ದಾರ್ಶನಿಕರಾಗಿದ್ದು, ಅವರು ಭಗವಂತನನನ್ನು ಸಾಕ್ಷಾತ್ಕರಿಸಿ ಕೊಂಡವರು. ಭಕ್ತಿಯ ಮೂಲಕ ಸಮಾನತೆ ಸಾರಿದವರು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ನುಡಿದರು.
ಜಿಡಳಿತ, ಜಿಪಂ, ನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿ ಕುರುಬರ ಸಂಘದ ಆಶ್ರಯದಲ್ಲಿ ಇಂದು ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿಶ್ವಮಾನವ, ಸಂತ ಹಾಗೂ ಶ್ರೇಷ್ಠಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತಿಯ ಸಾಕಾರಮೂರ್ತಿ ಯಾದ ಕನಕರು ಉಡುಪಿ ಶ್ರೀ ಕೃಷ್ಣರನ್ನು ಒಲಿಸಿಕೊಂಡ ಬಗೆ ಯನ್ನು ಸ್ಮರಿಸುವ ನಮ್ಮ ಸಮಾಜ, ಕನಕನ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಿದರೆ ಹೆಚ್ಚು ಪುಣ್ಯ ಲಭಿಸುತ್ತದೆ ಎಂದು ನಂಬಿದೆ ಎಂದರು.

೩೧೬ ಕೀರ್ತನೆಗಳನ್ನು ಸಂಗ್ರಹಿಸಿ ಪುಸ್ತಕ ಮಾಡಿ ತಲುಪಿ ಸುವ ಕೆಲಸ ಆಗಬೇಕು. ತಾವೂ ಸಹ ಈ ಕಾರ್ಯಕ್ಕೆ ಸಹಕರಿಸುವುದಾಗಿ ತಿಳಿಸಿದ ಅವರು, ಮುಂದಿನ ವರ್ಷದ ಜಯಂತಿಯಲ್ಲಿ ಎಲ್ಲರಿಗೂ ಈ ಪುಸ್ತಕ ಸಿಗುವಂತಾಗ ಬೇಕೆಂದು ಮನವಿ ಮಾಡಿದರು.
ಪುರುಂದರ ದಾಸರ ಹುಟ್ಟೂರು ನಮ್ಮ ಜಿಯ ತೀರ್ಥಹಳ್ಳಿ ತಾಲ್ಲೂಕಿನ ಆರಗ ಎಂದು ಇತ್ತೀಚೆಗೆ ತಿಳಿದು ಬಂದಿದ್ದು, ಇಂತಹ ಶ್ರೇಷ್ಠ ವ್ಯಕ್ತಿಯನ್ನು ನೀಡಿರುವ ಜಿ ನಮ್ಮದಾಗಿದೆ. ಇತ್ತೀಚೆಗೆ ಅಲ್ಲಿ ಪುರಂದರ ದಾಸರ ಕೀರ್ತನೋತ್ಸವ ನಡೆಯಿತು. ಅದೇ ರೀತಿಯಲ್ಲಿ ಕನಕದಾಸರ ಕೀರ್ತನೋತ್ಸವವನ್ನೂ ಶಿವಮೊಗ್ಗದಲ್ಲಿ ಮಾಡಿ ಜನರಿಗೆ ತಲುಪಿಸುವ ಕೆಲಸ ಮಾಡೋಣ ಎಂದರಲ್ಲದೇ, ಕನಕರು ಯಾವುದೇ ಜಾತಿಗೆ ಸೀಮಿತರಲ್ಲ. ಅವರು ಎಲ್ಲರಿಗೆ ಸೇರಿ ದವರು. ಕನಕ ಭವನ ಸರ್ವ ಸ್ಪರ್ಶಿ ಯಾಗಬೇಕು ಎಂದರು.
ಹೆಚ್.ಎಸ್. ರುದ್ರಪ್ಪ ರಾಷ್ಟ್ರೀಯ ಪಪೂ ಕಾಲೇಜಿನ ನಿವೃತ್ತ ಉಪನ್ಯಾಸಕ ಕೆ.ಎನ್.ರೇವಣ್ಣ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನಕದಾಸ ಎಂದರೆ ಮಹಾನ್ ಕವಿ, ಸಂತ, ಕಲಿ, ಕೀರ್ತನಕಾರ, ಭಕ್ತ ಹಲವಾರು ಪ್ರತಿಭೆ ಒಳಗೊಂಡ ಮಹಾನ್ ಪುರುಷ. ಕನಕ ಕೇವಲ ಕುರುಬ ಜಾತಿಗೆ ಸೀಮಿತ ಅಲ್ಲ. ಅವರು ಭಾರತವೆಂಬ ಪುಣ್ಯಭೂಮಿಗೆ ಸೇರಿದ ಅಂಬೇಡ್ಕರ್, ಬುದ್ದ, ಬಸವನಂತಹ ವ್ಯಕ್ತಿ. ಅವರು ಸಮಾಜದ ಓರೆಕೋರೆ, ಅಂಕು ಡೊಂಕು, ತಾರತಮ್ಯಗಳನ್ನು ಕೇವಲ ತಮ್ಮ ಕೀರ್ತನೆಗಳು ಮಾತ್ರವಲ್ಲ ಭಕ್ತಿಯ ಮೂಲಕ ಹೋಗ ಲಾಡಿಸಲು ಹೋರಾಡಿದರು ಎಂದರು.

ಬಾಲ್ಯದಲ್ಲಿ ಕನಕರ ತಾಯಿ ಉತ್ತಮ ಶಿಕ್ಷಣ ಕೊಡಿಸಿ, ಧೈರ್ಯ, ಸ್ಥೈರ್ಯ ತುಂಬಿ ಧೈರ್ಯ ವಂತನನ್ನಾಗಿ ಮಾಡುತ್ತಾಳೆ. ತಾಳ್ಮೆ ಮತ್ತು eನ ಅವರ ವಿಶೇಷ ಗುಣ ವಾಗಿದ್ದು, ಕಷ್ಟ ಕೊಟ್ಟವರಿಗೆ ತಮ್ಮ ಬುದ್ದಿ ಮತ್ತು ತಾಳ್ಮೆಯಿಂದಲೇ ಉತ್ತರಿಸಿದ್ದರು. ಸಮಾಜದಲ್ಲಿನ ಪಿಡುಗು, ಸಮಸ್ಯೆಗಳ ಕುರಿತು ಜನರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ತಿಳಿಸುವ ಪ್ರಯತ್ನವನ್ನು ಕನಕ ಮತ್ತು ದಾಸಕೂಟ ಮಾಡುತ್ತಿದೆ ಎಂದು ತಿಳಿಸಿದ ಅವರು ಕನಕರ ಶ್ರೀನಿವಾಸನ ಕುರಿತಾದ ಭಕ್ತಿಯ ಶಕ್ತಿ ಕುರಿತು ತಿಳಿಸಿದರು.
ಸೂಡಾ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಮಾತನಾಡಿ, ಮಹಾನ್ ವ್ಯಕ್ತಿಗಳ ಜೀವನ, ಇತಿಹಾಸ, ವಿಚಾರಗಳು, ತತ್ವಗಳು, ಕೊಡುಗೆಗಳ ಕುರಿತು ತಿಳಿಸುವ ಉzಶದಿಂದ ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದ್ದು ಎಲ್ಲ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಜಿ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್ ಮಾತನಾಡಿ, ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿzವೆ ಎಂಬುದು ಮುಖ್ಯವಾಗಬೇಕು. ಕನಕರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು ಕುರುಬರ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ರೂ. ೫೦ ಲಕ್ಷ ನೀಡಲು ಒಪ್ಪಿದ್ದು ಅಭಿನಂದನೆ ತಿಳಿಸುತ್ತೇನೆಂದರು.
ರಾಜ್ಯ ಪರಿಶಿಷ್ಟ ಜತಿ ಮತ್ತು ಪರಿಶಿಷ್ಟ ವರ್ಗ ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ.ಜಿ., ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ , ಜಿ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ತಹಶೀಲ್ದಾರ್ ವಿ ರಾಜೀವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.
