ಜಿಲ್ಲಾ ಸುದ್ದಿತಾಜಾ ಸುದ್ದಿ

ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ವಂದೇ ಮಾತರಂ ಗೀತೆ…

Share Below Link

ಶಿವಮೊಗ್ಗ:ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ದೇಶಪ್ರೇಮದ ಕಿಚ್ಚಿಗೆ ಪ್ರೇರಣೆ ನೀಡಿದ ಗೀತೆ ವಂದೇ ಮಾತರಂ ಗೀತೆಯಾಗಿದ್ದು, ಆ ಗೀತೆಗೆ ೧೫೦ ವರ್ಷ ತುಂಬಿದ ಹಿನ್ನೆಲೆಯಲ್ಲಿ ಇಂದಿನಿಂದ ೧ ವರ್ಷ ಕಾಲ ದೇಶದೆಡೆ ಸಂಭ್ರಮಾಚರಣೆ ನಡೆಯಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿzರೆ.
ನಗರದ ಜಿ ಬಿಜೆಪಿ ಕಾರ್ಯಾಲಯ ಮುಂಭಾಗದಲ್ಲಿ ನಡೆದ ವಂದೇ ಮಾತರಂ ಸಾಮೂಹಿಕ ಗೀತೆ ಗಾಯನ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಜನತೆಗೆ ಇದೊಂದು ಭಾವನಾತ್ಮಕ ಕಾರ್ಯಕ್ರಮವಾಗಿದ್ದು, ಸ್ವಾತಂತ್ರ್ಯದ ಕಿಚ್ಚಿಗೆ ಶಕ್ತಿ ತುಂಬಿದ ಈ ಗೀತೆ ಕೇವಲ ಗೀತೆ ಅಲ್ಲ, ದೇಶದ ಸಾಂಸ್ಕೃತಿಕ ಪರಂಪರೆಯ ರಾಯಭಾರಿಯಾಗಿ ಪ್ರಪಂಚಕ್ಕೆ ನಮ್ಮ ಇತಿಹಾಸ ತಲುಪಿಸಿದೆ ಎಂದರು.
ಹೆತ್ತ ತಾಯಿ ಬೇರೆ ಅಲ್ಲ, ಜನ್ಮ ಭೂಮಿ ಬೇರೆ ಅಲ್ಲ, ಎರಡೂ ಒಂದೇ. ನಮಗೆಲ್ಲರಿಗೂ ಜೀವನ ನಡೆಸುವ ಶಕ್ತಿಯನ್ನು ಈ ಭೂಮಿ ನೀಡಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಹರಿಸಿ ಹುತಾತ್ಮರಾದವರ ಚರಿತ್ರೆಯೆ ಬಗ್ಗೆ ತಿಳಿಯುವ ಅವಶ್ಯಕತೆ ಇದೆ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ೧೮೭೫ ನ. ೭ರಂದು ಬಂಕಿಮಚಂದ್ರ ಚಟರ್ಜಿ ಅವರು ವಂದೇ ಮಾತರಂ ಗೀತೆ ರಚಿಸಿ ದೇಶವನ್ನು ಒಗ್ಗೂಡಿಸು ವಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚುವಲ್ಲಿ ಅಮೂಲ್ಯ ಕೊಡುಗೆ ನೀಡಿದರು. ೧೮೫೭ರಲ್ಲಿ ಮೊಟ್ಟ ಮೊದಲ ಸ್ವಾತಂತ್ರ್ಯ ಹೋರಾಟ ಸಿಪಾಯಿ ದಂಗೆ ನಡೆದಾಗ ವೀರ ಸಾವರ್ಕರ್ ಅವರು ಇದು ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದರು.
ಜನರ ಮನಸ್ಸನ್ನು ಜೋಡಿಸುವ ಕೆಲಸವನ್ನು ವಂದೇ ಮಾತರಂ ಮಾಡಿದೆ. ವರ್ಷಪೂರ್ತಿ ಈ ಗೀತ ಗಾಯನ ಸಂಭ್ರಮ ನಡೆಯಲಿದೆ. ಕೆಲವರಿಗೆ ಈ ಗೀತೆ ಹಾಡಿದರೆ ದೇಶದ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ ಎಂಬ ಭಾವನೆ ಇದೆ. ವಂದೇ ಮಾತರಂ ರಾಷ್ಟ್ರಗೀತೆಯಾಗಿದ್ದು, ಈ ದೇಶದ ಎ ಸಂಗತಿಗಳು ಉದಾತ್ತ ಧ್ಯೇಯಗಳು ಈ ಹಾಡಿನಲ್ಲಿ ಅಡಕವಾಗಿವೆ ಎಂದರು.
ಬಿಜೆಪಿ ಜಿಧ್ಯಕ್ಷ ಎನ್.ಕೆ. ಜಗದೀಶ್, ಪ್ರಮುಖರಾದ ಜ್ಯೋತಿಪ್ರಕಾಶ್, ಟಿ.ಡಿ. ಮೇಘರಾಜ್, ಮೋಹನ್ ರೆಡ್ಡಿ, eನೇಶ್ವರ್, ನಾಗರಾಜ್, ಮಾಲತೇಶ್, ಹರಿಕೃಷ್ಣ, ಸುರೇಶ್, ಶಿವರಾಜ್, ವಿನ್ಸೆಂಟ್ ರೋಡ್ರಿಗಸ್ ಇನ್ನಿತರರಿದ್ದರು.