ರಾಜ್ಯಾದ್ಯಂತ ಮತಗಳ್ಳತನ ವಿರುದ್ಧ ಬೃಹತ್ ಹೋರಾಟ: ಭಂಡಾರಿ
ಶಿವಮೊಗ್ಗ : ಮತಗಳ್ಳತನದ ವಿರುದ್ಧ ಬೃಹತ್ ಹೋರಾಟದ ಜತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ನಾಳೆಯಿಂದಲೇ ರಾಜದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಗಳ್ಳತನದಿಂದ ಹಿಡಿದ ಗದ್ದುಗೆ ಯನ್ನು ಬಿಡಿ ಎಂಬ ಘೋಷ ವಾಕ್ಯದ ಹಿನ್ನೆಲೆಯಲ್ಲಿ ಇದರ ವಿರುದ್ಧ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರು ರಾಷ್ಟ್ರಾದ್ಯಂತ ಹೋರಾಟ ಹಮ್ಮಿಕೊಂಡಿzರೆ. ನಾಳೆಗೆ ಈ ಹೋರಾಟಕ್ಕೆ ೧ ವರ್ಷ ಪೂರೈಸು ತ್ತದೆ. ಈ ಹಿನ್ನೆಲೆಯಲ್ಲಿ ಮತಗಳ್ಳತನ ವಿರುದ್ಧ ಮತ್ತಷ್ಟು ಹೋರಾಟ, ಅಭಿಯಾನವನ್ನು, ಸಹಿ ಸಂಗ್ರಹ ವಿಸ್ತರಿಸಲಾಗುವುದು ಎಂದರು.

ಜಿಯಲ್ಲಿ ಮತ್ತು ರಾಜ್ಯದಲ್ಲಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ಆರಂಭವಾಗಿದೆ. ಜಿಯಲ್ಲಿ ಸುಮಾರು ೧.೨೫ ಲಕ್ಷ ಸಹಿಸಂಗ್ರಹವಾಗಿದ್ದು, ಇದು ನಾಳೆಗೆ ೧.೪೦ ಲಕ್ಷ ತಲುಪಲಿದೆ. ನಾಳೆ ಜಿಯಲ್ಲಿ ಈ ಅಭಿಯಾನ ಮುಂದುವರೆಯಲಿದ್ದು, ನ.೧೧ರಂದು ರಾಜದ್ಯಂತ ಮುಂದುವರೆಯುತ್ತದೆ. ರಾಜ್ಯದಲ್ಲಿ ಈಗಾಗಲೇ ೧ ಕೋಟಿಗೂ ಹೆಚ್ಚು ಸಹಿ ಸಂಗ್ರಹ ಆಗಿದೆ. ರಾಜ್ಯದಲ್ಲಿ ೧,೧೧,೧೧,೧೧೧ ಸಹಿ ಸಂಗ್ರಹ ಆಗುವ ನಿರೀಕ್ಷೆ ಇದೆ. ಈ ಎ ಸಹಿ ಸಂಗ್ರಹದ ವಿವರಗಳನ್ನು ರಾಷ್ಟ್ರಪತಿಗಳಿಗೆ ನೀಡಿ ಮತಗಳ್ಳತನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗುವುದು ಎಂದರು.
ಇಡೀ ದೇಶದಲ್ಲಿ ಮತಗಳ್ಳತನ ಮೂಲಕ ಪ್ರಜಪ್ರಭುತ್ವವೇ ಕಗ್ಗೊಲೆಯಾಗುತ್ತಿದೆ. ನಮ್ಮ ಮತ ವನ್ನು ನಾವೇ ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ. ಹರಿಯಾಣ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಮತಗಳ್ಳತನ ಆಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಾವು ದೂರು ಕೊಡಬೇಕು. ಆದರೆ, ಚುನಾವಣಾ ಆಯೋಗವೇ ಕೇಂದ್ರದ ಜತೆ ಶಾಮೀಲಾಗಿದೆ. ಕಳ್ಳನ ಕೈಗೆ ಬೀಗ ಕೊಟ್ಟ ಹಾಗಿದೆ. ಹಾಗಾಗಿ ಕಾನೂನಿನ ಮೊರೆ ಹೋಗಲಾಗುವುದು ಎಂದರು.

ವ್ಯವಸ್ಥಿತವಾಗಿ ಮತಗಳನ್ನು ಡಿಲಿಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಟ್ಟು ಕೊಂಡೇ ಈ ಕೆಲಸ ಮಾಡಲಾಗು ತ್ತಿದೆ. ಅನೇಕ ಕಡೆ ಕಾಂಗ್ರೆಸಿಗರ ಮತ ಡಿಲಿಟ್ ಆಗಿರುವುದು ಕಂಡು ಬಂದಿದೆ. ಬೂತ್ ಮಟ್ಟದಿಂದ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಈ ಬಗ್ಗೆ ಜಗೃತರಾಗಬೇಕು. ಈ ಹಿನ್ನಲೆಯಲ್ಲಿ ಯುವಕರ ಗಮನಸೆಳೆಯಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚುನಾವಣಾ ಆಯೋಗಕ್ಕೆ ಸುಧಾರಣೆ ತರಬೇಕೆನ್ನುವುದು ಕೂಡ ನಮ್ಮ ಉzಶವಾಗಿದೆ ಎಂದರು.
ಮಾಜಿ ಸ್ಪೀಕರ್ ಕಾಗೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬ್ರಿಟೀಷರ ಸ್ವಾಗತಕ್ಕೆ ಜನಗಣಮನ ರಾಷ್ಟ್ರ ಗೀತೆ ಬರೆಯಲಾಗಿತ್ತು ಎಂಬ ಕಾಗೇರಿ ಹೇಳಿಕೆ ಸರಿಯಲ್ಲ. ಬಿಜೆಪಿಯವರು ರಾಷ್ಟ್ರಗೀತೆ, ರಾಷ್ಟ್ರಧ್ವಜ ಏನನ್ನೂ ಒಪ್ಪುವುದಿಲ್ಲ. ನ್ಯಾಯಮೂರ್ತಿ ಗಳ ಮೇಲೆಯೇ ಶೂ ಎಸೆಯುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಿzರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಟಿ. ಹಾಲಪ್ಪ, ದೇವಿ ಕುಮಾರ್, ಲಕ್ಷ್ಮಿಕಾಂತ್ ಇದ್ದರು.
