ಜಿಲ್ಲಾ ಸುದ್ದಿತಾಜಾ ಸುದ್ದಿ

ನ.೨೩: ಸಾಧನಕರಿಗೆ ಸನ್ಮಾನ – ಪ್ರತಿಭಾ ಪುರಸ್ಕಾರ…

Share Below Link

ಶಿವಮೊಗ್ಗ: ರಾಜ್ಯ ಕನ್ನಡ ದೈವಜ್ಞ ಬ್ರಾಹ್ಮಣ ಸಂಘದಿಂದ ನ. ೨೩ರಂದು ವಾಜಪೇಯಿ ಬಡಾವಣೆಯಲ್ಲಿರುವ ಸಮಾಜದ ನಿವೇಶನದಲ್ಲಿ ಸಂಘದ ೨೦ನೇ ವರ್ಷದ ವಾರ್ಷಿಕೋತ್ಸವ, ಶ್ರೀ ಸತ್ಯನಾರಾಯಣ ಪೂಜೆ, ಮಹಾ ಸಭೆ, ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾ ಗಿದೆ ಎಂದು ಸಂಘದ ಅಧ್ಯಕ್ಷ ಎನ್. ಕೃಷ್ಣಮೂರ್ತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಗಳಲ್ಲಿ ನೆಲೆಸಿರುವ ನಮ್ಮ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಲಿ zರೆ ಎಂದರಲ್ಲದೇ, ಸರ್ಕಾರದ ಯಾವುದೇ ಸಹಾಯವಿಲ್ಲದೇ ಸುಮಾರು ೩೫ ಲಕ್ಷ ರೂ. ಪಾವತಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಎ ನಿವೇಶನ ಪಡೆದು ೧೨ ವರ್ಷ ವಾಗಿದ್ದು, ಸಮುದಾಯದ ಭವನ ನಿರ್ಮಿಸಲು ೭ ಕೋಟಿ ರೂ. ತಗುಲಲಿದ್ದು, ಸಮಾಜ ಬಾಂಧ ವರು ಉದಾರವಾಗಿ ಸಹಾಯ ಮಾಡಿ ಸರ್ಕಾರದ ಮೇಲೆ ಹೆಚ್ಚು ಅವಲಂಬನೆಯಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ನ.೨೩ರಂದು ಬೆಳಗ್ಗೆ ೮.೩೦ರಿಂದ ೧೦.೩೦ರವರೆಗೆ ಪೂಜ ಕಾರ್ಯಕ್ರಮ ನಡೆಯಲಿದ್ದು, ನಂತರ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಕಾರವಾರದ ಮಾಜಿ ಶಾಸಕ ಗಂಗಾಧರಭಟ್ ಉದ್ಘಾಟಿಸಲಿದ್ದು, ಸಚಿವ ಮಧು ಬಂಗಾರಪ್ಪ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷಥ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಡಿ.ಎಸ್. ಅರುಣ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿzರೆ. ಈ ಸಂದರ್ಭದಲ್ಲಿ ಶಿರಾಳಕೊಪ್ಪದ ಡಾ. ಶ್ರೀನಾಥ್ ಹಾಗೂ ಸಾಗರದ ಡಾ. ವಾಸುದೇವ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಡಿ. ರಾಮಚಂದ್ರ, ಎನ್. ವಿನಾಯಕ್, ಎಸ್. ಮಾರುತಿ, ಸಿ. ರಂಗನಾಥ್ ಉಪಸ್ಥಿತರಿದ್ದರು.