ಶಾಸಕ ವಿಜಯೇಂದ್ರರಿಂದ ಸ್ವಕ್ಷೇತ್ರದ ರೈತರ ನಿರ್ಲಕ್ಷ್ಯ ಖಂಡನೀಯ…
ಶಿಕಾರಿಪುರ: ಕ್ಷೇತ್ರದ ಶಾಸಕ ವಿಜಯೇಂದ್ರ ಕಬ್ಬು ಬೆಳೆಗಾರ ರೈತರ ಸಮಸ್ಯೆ ಪರವಾಗಿ ಹೋರಾಟದಲ್ಲಿ ಭಾಗಿಯಾಗಿದ್ದು, ಸ್ವಕ್ಷೇತ್ರದಲ್ಲಿನ ರೈತರ ಸಮಸ್ಯೆ ಆಲಿಸಿ ಪರಿಹರಿಸುವಲ್ಲಿ ವಹಿಸಿರುವ ನಿರ್ಲಕ್ಷ್ಯ ಅತ್ಯಂತ ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿ ಸಂಚಾಲಕ ಸಂತೋಷ ಈಸೂರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೭ ದಿನದಿಂದ ಬೆಳಗಾಂ ಜಿಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಧಾರವಾಡ, ಹುಬ್ಬಳ್ಳಿ, ನರಗುಂದ, ಚಿಕ್ಕೋಡಿ, ಬೆಳಗಾಂ, ಬಾಗಲಕೋಟೆ ಮತ್ತಿತರ ಭಾಗದ ಲಕ್ಷಾಂತರ ಕಬ್ಬು ಬೆಳೆಗಾರರು ಟನ್ ಕಬ್ಬಿಗೆ ೩.೫ ಸಾವಿರ ಬೆಂಬಲ ಬೆಲೆ ನೀಡುವಂತೆ ಹಮ್ಮಿಕೊಂಡಿರುವ ಹೋರಾಟ ದಿನದಿಂದ ದಿನಕ್ಕೆ ಕಾವು ಹೆಚ್ಚಾಗುತ್ತಿದ್ದು ಬಿಸಿಲ ಬೇಗೆಯಿಂದ ರೈತರು ಬೆಂದು ಹೋಗುತ್ತಿzರೆ ಸಮಸ್ಯೆ ಆಲಿಸಿ ಪರಿಹರಿಸಬೇಕಾದ ಸರ್ಕಾರ ಸತ್ತುಹೋದ ರೀತಿ ಭಾಸವಾಗುತ್ತಿದೆ ಎಂದು ತಿಳಿಸಿದರು.

ರಾಜದ್ಯಂತ ರೈತರು ಕಬ್ಬು ಜತೆಗೆ ಭತ್ತ, ಜೋಳ ಸಹಿತ ಹಲವು ಬೆಳೆಯ ದರ ಕುಸಿತದಿಂದ ಕಂಗಾಲಾಗಿದ್ದು ಸರ್ಕಾರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಮಿಥೆನಾಲ್, ಕಾಕಂಬಿ,ಸಕ್ಕರೆ ಮತ್ತಿತರ ಉಪ ಉತ್ಪನ್ನಗಳ ಪ್ರಯೋಜನ ಪಡೆಯುವ ಕಾರ್ಖಾನೆ ಮಾಲೀಕರು ಕಬ್ಬು ಟನ್ಗೆ ರೂ.೩.೫ ಸಾವಿರ ನೀಡಲು ಹಿಂದೇಟು ಹಾಕುತ್ತಿzರೆ ಬಹುತೇಕ ಸಚಿವರು ಶಾಸಕರ ಒಡೆತನದ ಖಾಸಗಿ ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರ ವನ್ನು ನಿಯಂತ್ರಿಸುತ್ತಿzರೆ ಎಲ್ಲ ಸಚಿವರು, ಶಾಸಕರು ಕಬ್ಬು ಬೆಳೆಗಾರರ ವಿರುದ್ದವಾಗಿದ್ದು ರೈತ ಪರವಾಗಿ ಏಕೈಕ ಶಾಸಕ ದ್ವನಿ ಎತ್ತುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕ, ಬಿಜೆಪಿ ರಾಜಧ್ಯಕ್ಷ ವಿಜಯೇಂದ್ರ ಕಬ್ಬು ಬೆಳೆಗಾರರ ಪರವಾಗಿ ಹೋರಾಟ ದಲ್ಲಿ ಪಾಲ್ಗೊಳ್ಳಲು ಹುಟ್ಟುಹಬ್ಬ ಆಚರಣೆ ತೊರೆದು ತೆರಳಿದ್ದು ಈ ದಿಸೆಯಲ್ಲಿ ಶಾಸಕರನ್ನು ಅಭಿನಂದಿಸುವುದಾಗಿ ತಿಳಿಸಿದ ಅವರು, ಕಬ್ಬು ಬೆಳೆಗಾರರ ಕಣ್ಣೀರು ಒರೆಸಲು ತೆರಳಿದ ಶಾಸಕರು ರೈತರ ಪರ ಹೋರಾಟಗಾರ ಯಡಿಯೂರಪ್ಪನವರ ಮಗನಾಗಿ ಪಾಲ್ಗೊಂಡಿzಗಿ ತಿಳಿಸಿದ್ದು ಸ್ವಕ್ಷೇತ್ರದಲ್ಲಿ ರೈತರು ಹಲವು ಸಮಸ್ಯೆಯಿಂದ ಬಳಲುತ್ತಿzರೆ ರೈತರ ಜಮೀನಿನಲ್ಲಿ ಅಕ್ರಮವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಎಳೆಯುತ್ತಿರುವ ಮೆಸ್ಕಾಂ ವಿರುದ್ದ ಕಳೆದ ಫೆಬ್ರವರಿಯಲ್ಲಿ ಸತತ ೩ ದಿನ ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ನಡೆದ ಧರಣಿ ಸತ್ಯಾಗ್ರಹದ ಬಗ್ಗೆ ಗಮನಕ್ಕೆ ಬಂದಿಲ್ಲ ಎಂದ ಶಾಸಕರಿಗೆ ಸ್ಥಳೀಯ ರೈತರ ಕಣ್ಣೀರು ಒರೆಸಲು ನಿರ್ಲಕ್ಷ್ಯ ವಹಿಸಿರುವುದು ಅತ್ಯಂತ ವಿಷಾಧನೀಯ ಎಂದು ತಿಳಿಸಿದರು.
ಸ್ವಕ್ಷೇತ್ರದಲ್ಲಿನ ರೈತರ ಸಮಸ್ಯೆ ಪರಿಹರಿಸಲು ಪ್ರಥಮ ಆದ್ಯತೆ ನೀಡಿದಲ್ಲಿ ರಾಜ್ಯದ ರೈತರು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ ತಪ್ಪಿದಲ್ಲಿ ದ್ವಂದ್ವ ನೀತಿ ಬಗ್ಗೆ ರೈತರು ಜಗೃತರಾಗ ಲಿzರೆ ಎಂದು ತಿಳಿಸಿದರು.
ವೇತನ, ಮನೆ ಭತ್ಯೆ, ಸಾರಿಗೆ ಭತ್ಯೆ ಏಕಾಏಕಿ ವಿರೋಧವಿಲ್ಲದೆ ಹೆಚ್ಚಿಸಿಕೊಳ್ಳುವ ಶಾಸಕರು ರೈತರ ಬೆಳೆಗೆ ಬೆಂಬಲ ಬೆಲೆ ನೀಡುವ ಬಗ್ಗೆ ಮಾತ್ರ ಚಕಾರ ಎತ್ತುತ್ತಿಲ್ಲ ಕೂಡಲೇ ಸರ್ಕಾರ ಸಮಸ್ಯೆ ಪರಿಹರಿಸದಿದ್ದಲ್ಲಿ ರಾಜದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿ ರೈತ ಸಂಘದ ಗೌರವಾದ್ಯಕ್ಷ ಈರಣ್ಣ ಪ್ಯಾಟಿ, ತಾ.ಸಂಘದ ಸಂಚಾಲಕ ಸುಬಾಷಚಂದ್ರ ಚಿಕ್ಕಜೋಗಿಹಳ್ಳಿ, ಪ್ರ.ಕಾ ರಾಜಣ್ಣ ತಾಳಗುಂದ, ಲೋಕೇಶಪ್ಪ ಹೊಸೂರು, ಪುಟ್ಟಣ್ಣಗೌಡ್ರು ಉಪಸ್ಥಿತರಿದ್ದರು.


