ನ್ಯಾಯಸುಧಾ ಗ್ರಂಥವು ಪವಿತ್ರ ಗಂಗಾಜಲದಂತೆ: ಸ್ವಾಮೀಜಿ
ಭದ್ರಾವತಿ: ದ್ವೈತಸಿದ್ಧಾಂತದ ಪ್ರತಿಪಾದಕರಾದ ಗುರುಮಧ್ವರ ಗ್ರಂಥಗಳಿಗೆ ಟೀಕಾಕೃತ್ಪಾದರು ರಚಿಸಿದ ನ್ಯಾಯಸುಧಾ ಗ್ರಂಥವು ಪವಿತ್ರ ಗಂಗಾಜಲದಂತೆ ಎಂದು ಉಡುಪಿಯ ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥರು ಹೇಳಿದರು.
ಅವರು ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದ ಮಹಿಳಾ ಸಮಾಜದ ಅವರಣದಲ್ಲಿ ಉತ್ತರಾದಿಮಠದ ಜಯತೀರ್ಥ ವಿದ್ಯಾಪೀಠ ಏರ್ಪಡಿಸಿರುವ ಶ್ರೀಮನ್ಯಾಯಸುಧಾಮ ಮಂಗಳ ಮಹೋತ್ಸವದ ಎರಡನೇ ದಿನ ರಾತ್ರಿ ನಡೆದ ವಿದ್ಯಾರ್ಥಿಗಳ ಪರೀಕ್ಷಾ ಅನುವಾದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಅನುಗ್ರಹ ಸಂದೇಶನೀಡಿ ಮಾತನಾಡಿದರು.

ಭದ್ರಾವತಿಯಲ್ಲಿ ಹರಿಯುತ್ತಿರುವ ಭದ್ರಾನದಿ ಜಲವು ಗಂಗಾಜಲವೆಂದೆ ನಾವು ಅನುಸಂಧಾನ ಮಾಡುತ್ತೇವೆ. ಬಾಯಾರಿಕೆಯನ್ನು ನಾವು ಜಲಪಾನ ಮಾಡಿ ನಮ್ಮ ಜಲದಾಹವನ್ನು ತೀರಿಸಿಕೊಳ್ಳ ಬಹುದು. ಆದರೆ eನ ಜಿeಸುಗಳ eನದಾಹವನ್ನು ತಣಿಸಲು ನ್ಯಾಯಸುಧಾ ಸಹಕಾರಿ. ಈ ಗ್ರಂಥದ ಅಧ್ಯಯನವನ್ನು ಮಾಡಿದಷ್ಟೂ ಮತ್ತಷ್ಟು ಅಧ್ಯಯನ ಮಾಡುತ್ತಾ eನಗಂಗೆಯಲ್ಲಿ ಮುಳುಗೆಳುತ್ತಲಿರಬೇಕು ಅದರ ಸ್ವಾಧವನ್ನು ಸವಿಯುತ್ತಲೆ ಯಿರಬೇಕು ಎನಿಸುತ್ತದೆ. ಇದಕ್ಕೆ ಕಾರಣ ನ್ಯಾಯಸುಧಾ ಗ್ರಂಥದಲ್ಲಿ . ಎ ರೀತಿಯ ಧಾರ್ಮಿಕ ವಿಚಾರ ಧಾರೆಗಳ ಕುರಿತಂತೆ ಮನಸಿನಲ್ಲಿ ಮೂಡಬಹುದಾದ ಎ ಗೊಂದಲಗಳಿಗೂ ಅನುಮಾನಕ್ಕೆ ಆಸ್ಪದವಿಲ್ಲದ ರೀತಿಯಲ್ಲಿ ಸಮಂಜಸವಾಗಿ ಉತ್ತರವನ್ನು ನಾವು ಕಂಡುಕೋಳ್ಳಬಹುದಾಗಿದೆ. ಆದ್ದರಿಂದಲೇ ನ್ಯಾಯಸುಧಾ ಗ್ರಂಥವನ್ನು ಅಧ್ಯಯನ ಮಾಡಿದಷ್ಟು ಮತ್ತಷ್ಟು ಅದರಲ್ಲಿ ಮೀಯ ಬೇಕೆನಿಸುತ್ತದೆ. ಇಂತಹ ನ್ಯಾಯಸುಧಾಮಂಗಳ ಮಹೋತ್ಸವ ಹಾಗೂ ಗುರುಗಳ ಪಾದುಕಾ ಸಮಾರಾಧನೆಯನ್ನು ಏರ್ಪಡಿಸಿರುವ ಶ್ರೀಸತ್ಯಾತ್ಮ ತೀರ್ಥರ eನಯಜ್ಞ ಕಾರ್ಯ ಇದೇರೀತಿ ನಿರಂತರವಾಗಿ ನಡೆಯುತ್ತಿರಲಿ ಎಂದರು.
ಉತ್ತರಾದಿಮಠದ ಶ್ರೀಗಳಾದ ಶ್ರೀಸತ್ಯಾತ್ಮತೀರ್ಥರು ಮಾತನಾಡಿ, ಭಗವಂತನ ಭಕ್ತರಲ್ಲಿ ಎರಡು ರೀತಿಯ ಭಕ್ತರಿದ್ದು,ಒಂದು ಭಗವಂತನ ಏಕಾಂತಭಕ್ತರು ಮತ್ತೊಂದು ಮೋಕ್ಷಾಂಕ್ಷಿ ಭಕ್ತರು. ಯಾರು ಭಗವಂಗತನ ಪ್ರೀತ್ಯರ್ಥ ವಾಗಿ ಅವನ ಆರಾಧನೆ ಮಾಡುತ್ತಾ ಅವನ ಧ್ಯಾನ ಸೇವೆಯಲ್ಲಿ ರುತ್ತಾರೋ ಅವರು ಭಗವಂತನ ಏಕಾಂತ ಭಕ್ತರು, ಮತ್ತೊಂದು ವರ್ಗದವರೂ ಭಗವಂತನ ಆರಾಧನೆ ಮಾಡುವುದು ಭಗಂವಂತ ಅವರಿಗೆ ಮೋಕ್ಷದಯ ಪಾಲಿಸಲಿ ಎಂದು ಆಶಿಸಿ, ಅದಕ್ಕಾಗಿ ಹಂಬಲಿಸಿ ಭಗವಂತನ ಆರಾಧನೆ ಮಾಡುತ್ತಾರೆ. ಈರಿತಿ ಇಬ್ಬರು ಭಕ್ತರಿಗೂ ಸಹ ಭಗವಂತ ಒಲಿಯುತ್ತಾನೆ ಆದರೆ ನಿಷ್ಕಾಮಕರ್ಮದಿಂದ ಭಗವಂತನ ಪ್ರೀತ್ಯರ್ಥವಾಗಿ ಅವನನ್ನು ಆರಾಧಿಸುವ ಏಕಾಂತಭಕ್ತರನ್ನು ಭಗವಂತ ಹೆಚ್ಚು ಮೆಚ್ಚುತ್ತಾನೆ . ಭಗವಂತನಲ್ಲಿ ನಮ್ಮ ಭಕ್ತಿ ಅಂತಹ ಭಕ್ತಿಯಾಗಿರಲಿ ಎಂದರು.

