ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಅರ್ಥಪೂರ್ಣ ಗೋಷ್ಠಿಗಳು…
ಧಾರವಾಡ: ಕೆ.ಇ ಬೋರ್ಡ್ ಮಕ್ಕಳ ಶರಣ ಸಾಹಿತ್ಯ ಸಮ್ಮೇಳನದ ಪ್ರಾಥಃ ಸ್ಮರಣೀಯರು ಎಂಬ ಮೊದಲ ಗೊಷ್ಠಿಯ ಅಧ್ಯಕ್ಷತೆ ವಹಿಸಿದ ಕ ವಿ ವ ಕಾರ್ಯದರ್ಶಿ, ಮಕ್ಕಳ ಮಹರ್ಷಿ ಶಂಕರ ಹಲಗತ್ತಿ ಮಾತನಾಡಿದರು.
ಸೂರ್ಯ ಚಂದ್ರರು ನೋಡಲು ಚಿಕ್ಕದಾಗಿ ಕಂಡರೂ ಕೂಡಾ ಜಗತ್ತು ಬೆಳಗುತ್ತಿzರೆ ಹಾಗೆ ಮಕ್ಕಳು ಕಿರಿಯರಾದ ಅವರ ಪ್ರತಿಭಾ ಪ್ರಕಾಶದ ಶಕ್ತಿ ಪ್ರಕಾಂಡ ವಾಗಿರುತ್ತದೆ. ಆ ಮಕ್ಕಳು ಸದಾ ಚಲನಶೀಲ ಗುಣಗಳನ್ನು ಬೆಳೆಸಿ ಕೊಂಡು ಶರಣರ ಆದರ್ಶಗಳನ್ನು ಅನುಸರಿಸಿ ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.

ಅಭಿಷೇಕ ಕರ್ಕಿ, ದೀಕ್ಷಾ ಧನಿಗೊಂಡ, ಉನ್ನತಿ ಶೆಟ್ಟಿ, ಮಂಜುನಾಥ ಮುಮ್ಮಿಗಟ್ಟಿ ಗೋಷ್ಠಿಯಲ್ಲಿ ವಿಷಯ ಮಂಡಿಸಿದರು.
ಸಾವಿಲ್ಲದ ಶರಣರು ಎಂಬ ೨ನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಹಿರೇಮಲ್ಲೂರ ಕಾಲೇಝ್ ಪ್ರಚಾರ್ಯ ಡಾ. ಶಶಿಧರ ತೋಡಕರ ಮಾತನಾಡಿ ಸತ್ಯದ ಸಂದೇಶ ಸಾರಿದ ಶರಣರು ಸಾವಿಲ್ಲದವರು. ಕಾಯಕ ನಿಷ್ಠೆ ಬೆಲೆ ಬಾಳುವುದು. ವಚನಗಳಲ್ಲಿ ವಿeನವಿದೆಯೇ ಹೊರತು ಅeನವಿಲ್ಲ. ಅನುಭವಾಮೃತ ತತ್ವ ಸಾರಿದವರು ಶರಣರು ಹೀಗಾಗಿ ಶರಣರು ಇಂದಿಗೂ ಪ್ರಸ್ತುತ ಎಂದರು. ಗೌರಿ ಮುಧೋಳ, ಪೂರ್ವಿ ಭಾಗವತ, ಚೇತನಾ ಹೆಬ್ಬಾರೆ, ಸೃಷ್ಠಿ ಮಣ್ಣಿಕೇರಿ ಗೋಷ್ಠಿ ಯಲ್ಲಿ ವಿಷಯ ಮಂಡಿಸಿದರು.
೩ನೇ ಗೋಷ್ಠಿ ಅರಿವೇ ಗುರು ಸಮಾಜದ ವಿಕಾಸಕ್ಕೆ ನಾವು ಇಂದು ಮಾಡಬೇಕಾದದ್ದು ಶಿಕ್ಷಣ ಮತ್ತು ಸಂಸ್ಕಾರ ಮಕ್ಕಳ ಮನೋವಿಕಾಸಕ್ಕೆ ವಚನ ಚಿಂತನೆ ಇಂದು ಅಗತ್ಯವಾಗಿದೆ ಶರಣರ ವಚನಗಳು ಆಧುನಿಕ ವಿeನದ ಅನೇಕ ಕೌತುಗಳನ್ನು ತಿಳಿಸುತ್ತವೆ. ಗುರು ಪ್ರತಿಯೊಬ್ಬರ ಅರಿವಿನಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಪುಟಾಣಿಗಳಾದ ಭವಾನಿ ಅಸುಂಡಿ, ಸಮರ್ಥ ಕಮತಿ, ಯಮನೂರೇಶ ಬಳೂಟಗಿ, ಗಾಯತ್ರಿ ದೊಡ್ಡೂರ ಅವರು ವಿಷಯ ಮಂಡಿಸಿದರು.

