ಯೋಗೀಶ್ ಅವರ ೭೫ನೇ ರಕ್ತದಾನಕ್ಕೆ ಸಾಥ್ ನೀಡಿದ ೯೦ ಮಂದಿ ರಕ್ತದಾನಿಗಳು…
ಶಿವಮೊಗ್ಗ : ೨೦೨೩ರ ವಿಧಾನಸಭಾ ಚುನಾವಣೆ ಯಲ್ಲಿ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಹೆಚ್.ಸಿ. ಯೋಗೀಶ್ ಅವರು ಇಂದು ಕರ್ನಾಟಕ ಸಂಘದಲ್ಲಿ ತಮ್ಮ ೭೫ನೇ ಬಾರಿಗೆ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅನಾರೋಗ್ಯ ಯಾರ ಕೈಯಲ್ಲೂ ಇಲ್ಲ. ರಕ್ತದ ಅನಿವಾರ್ಯತೆ ಬಂದಾಗ ರಕ್ತದಾನಿಗಳನ್ನು ನೆನಪಿಸಿ ಕೊಳ್ಳುವುದು ಅಗತ್ಯ. ನಾವು ಎಲ್ಲರೂ ಕೂಡ ರಕ್ತದಾನ ಮಾಡ ಬೇಕು. ರಕ್ತದಾನ ಶ್ರೇಷ್ಠದಾನವಾ ಗಿದ್ದು, ಒಂದು ಯೂನಿಟ್ ರಕ್ತ ನಾಲ್ಕು ಜೀವಗಳನ್ನು ಉಳಿಸಬಲ್ಲದು. ನಾವು ಅಗತ್ಯ ಸಂದರ್ಭದಲ್ಲಿ ರಕ್ತವನ್ನು ಪಡೆಯು ವಾಗಿ ರಕ್ತದಾನಿಗಳನ್ನು ನೆನಪಿಸಿಕೊಳ್ಳಬೇಕು ಎಂದರು.

ನಮಗೆಷ್ಟು ಅಗತ್ಯವೋ ಅದೇ ರೀತಿ ತುರ್ತು ಸಂದರ್ಭದಲ್ಲಿ ಅನೇಕ ರೋಗಿಗಳಿಗೆ ರಕ್ತದ ಅವಶ್ಯಕತೆ ಇರುತ್ತದೆ. ಇದನ್ನು ಮನಗಂಡು ಇಂದು ನನ್ನ ೭೫ನೇ ರಕ್ತದಾನದ ಸಂದರ್ಭದಲ್ಲಿ ೯೦ಕ್ಕೂ ಹೆಚ್ಚು ಸ್ನೇಹಿತರು ಬಂದು ರಕ್ತದಾನ ಮಾಡಿzರೆ. ಅವರೆಲ್ಲರಿಗೂ ಕೃತಜ್ಞತೆ ತಿಳಿಸುತ್ತೇನೆ ಮತ್ತು ಸಹಕಾರ ನೀಡಿದ ಸಂಜೀವಿನ ಬ್ಲಡ್ ಬ್ಯಾಂಕ್ ನವರಿಗೂ ಅಭಿನಂದಿಸುವುದಾಗಿ ತಿಳಿಸಿದರು.
೧೦೮ ಬಾರಿ ರಕ್ತದಾನ ಮಾಡಿದ ಮಧುಸೂದನ್ ಶೇಟ್, ೧೨೦ ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಮತ್ತು ೧೧೦ ಬಾರಿ ರಕ್ತದಾನ ಮಾಡಿದ ರಮೇಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


