ಮೇ 1, ಕಾರ್ಮಿಕರ ದಿನಾಚರಣೆ …
ವಿಶ್ವದ ಬಹುತೇಕ ರಾಷ್ಟ್ರ ಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳ ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ (ಲೇಬರ್ ಡೇ). ಮೇ ದಿನ ಅಥವಾ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷದ ಮೇ ೧ನೇ ತಾರೀಖು ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ.
ಹಿನ್ನೆಲೆ ಮತ್ತು ಇತಿಹಾಸ:
೧೮೮೬ರ ಮೇ ೪ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆ ಯನ್ನು ಈ ಆಚರಣೆ ಹಿನ್ನೆಲೆಯಾಗಿ ಇಟ್ಟುಕೊಂಡಿವೆ.
ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ ೧ರಂದು ಉತ್ಸವ ಆಚರಣೆ ಮಾಡಬೇ ಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಆದರೆ ವಾಸ್ತವವಾಗಿ ೧೮೮೯ಕ್ಕಿಂತ ಮುಂಚೆ ಮೇ ದಿನಾಚರಣೆ ಮಾಡಿದ್ದಕ್ಕೆ ಆಧಾರಗಳು ದೊರಕುವುದಿಲ್ಲ. ಆ ವರ್ಷ ಪ್ಯಾರಿಸ್ ನಲ್ಲಿ ಸಮಾ ವೇಶಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯದ ಪ್ರಥಮ ಅಧಿವೇಶನದಲ್ಲಿ ಮೇ ೧ನೆಯ ದಿನಾಂಕವನ್ನು ವಾರ್ಷಿಕ ಅಂತರ ರಾಷ್ಟ್ರೀಯ ಉತ್ಸವದಿನ ವೆಂದು ಆಚರಿಸಬೇಕೆಂದು ನಿರ್ಧರಿಸಲಾ ಯಿತು. ಮೇ ೧ರಂದು ಸಾರ್ವಜನಿಕ ರಜದಿನವೆಂದು ಘೋಷಿಸಬೇಕೆಂದು ನಿರ್ಣಯಿಸಲಾಯಿತು.
ದೇಶ-ವಿದೇಶಗಳಲ್ಲಿ ಆಚರಣೆ:
ಬಹುತೇಕ ರಾಷ್ಟ್ರಗಳಲ್ಲಿ ಕಾರ್ಮಿಕ ದಿನವನ್ನು ಮೇ ತಿಂಗಳ ಮೊದಲ ದಿನದಂದು ಆಚರಿಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಕೆನಡಗಳಲ್ಲಿ ಅಂದು ಈ ದಿನವನ್ನು ಆಚರಿಸುವುದಿಲ್ಲ. ಇಟಲಿಯಲ್ಲಿ ಮೇ ದಿನಾಚರಣೆಯನ್ನು ನಿಷೇಧಿಸಲಾಗಿ ತ್ತಲ್ಲದೆ, ಅದರ ಬದಲು ರೋಮಿನ ಸ್ಥಾಪನೆಯ ದಿನವನ್ನಾಗಿ ಆಚರಿಸುವ ಏರ್ಪಾಡು ಮಾಡಲಾಗಿತ್ತು. ಸೋವಿಯತ್ ದೇಶದಲ್ಲಿ ಮೇ ೧ ಸಾರ್ವಜನಿಕ ರಜ ದಿನ. ೧೮೯೦ ರ ದಶಕದಿಂದ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಮೇ ತಿಂಗಳ ೧ರಂದು ಕಾರ್ಮಿಕ ದಿನವನ್ನಾಗಿ ಆಚರಿಸ ಲಾಗುತ್ತಿದೆ. ಅಂದು ಸಾಮಾನ್ಯವಾಗಿ ಕಾರ್ಮಿಕ ರಜದಿನ, ಸೋವಿಯತ್ ದೇಶ ಮುಂತಾದ ಕಮ್ಯೂನಿಸ್ಟ್ ರಾಷ್ಟ್ರಗಳಲ್ಲಿ ಈ ದಿನಾಚರಣೆ ವಿಶಿಷ್ಟವಾದದ್ದು. ಮಾಸ್ಕೋದಲ್ಲಿ ನಡೆಯುವ ಮೇ ದಿನದ ಉತ್ಸವ- ಕವಾಯಿತು ವಿಶ್ವವಿಖ್ಯಾತವಾದದ್ದು. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಮೇ ದಿನದ ಅನಂತರದ ಪ್ರಥಮ ಭಾನುವಾರದಂದು ಆಚರಿಸುವುದು ಸಾಮಾನ್ಯ. ಲಂಡನಿನಲ್ಲಿ ಹೈಡ್ ಪಾರ್ಕಿನಲ್ಲಿ ಉತ್ಸವ ಸಭೆ ಸೇರುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಬ್ರಿಟನಿನಲ್ಲಿ ಕಾರ್ಮಿಕ ದಿನವನ್ನು ಪ್ರಥಮ ಬಾರಿಗೆ ಆಚರಿಸಿದ್ದು ೧೮೯೨ ರಲ್ಲಿ.
ಪ್ರಪಂಚದ ಹಲವೆಡೆ ಮೇ ೧ ರಂದು ಸರ್ಕಾರಿ ರಜೆಯನ್ನು ಘೋಷಿ ಸಲಾಗಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ,
ಅಲ್ಬೇನಿಯ, ಅರ್ಜೆಂಟೀನಾ, ಅರೂಬ, ಆಸ್ಟ್ರಿಯ,ಬಾಂಗ್ಲಾದೇಶ, ಬೆಲಾರುಸ್, ಬೆಲ್ಜಿಯಂ, ಚಿಲಿ, ಬೊಲಿವಿಯ, ಬೋಸ್ನಿಯ ಮತ್ತು ಹೆರ್ಝೆಗೋವಿನ,
ಬ್ರೆಜಿಲ್, ಬಲ್ಗೇರಿಯ, ಕ್ಯಾಮರೂನ್, ಕೊಲಂಬಿಯ, ಕೋಸ್ಟರಿಕ, ಚೀನ, ಕ್ರೊಯೇಷಿಯ, ಕ್ಯೂಬ, ಗ್ರೀಸ್, ಸಿಪ್ರಸ್, ಡೆನ್ಮಾರ್ಕ್, ಈಕ್ವೆಡಾರ್, ಈಜಿಪ್ಟ್, ಹೈತಿ,ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಗ್ವಾಟೆಮಾಲ, ಹೊಂಡುರಾಸ್, ಹಾಂಗ್ ಕಾಂಗ್, ಹಂಗರಿ, ಇಟಲಿ, ಐಸ್ಲೆಂಡ್, ಭಾರತ, ಇಂಡೋನೇಷ್ಯ, ಜೋರ್ಡನ್, ಕೀನ್ಯ, ಲ್ಯಾಟ್ವಿಯ, ಲಿಥುವೇನಿಯ, ಲೆಬನಾನ್, ಟರ್ಕಿ, ಮೆಸಿಡೋ ನಿಯ, ಮಲೇಶಿಯ, ಮಾಲ್ಟ, ಮಾರಿಷಸ್, ಮೆಕ್ಸಿಕೋ, ಮೊರಾಕೊ, ಮಯನ್ಮಾರ್, ನೈಜೀರಿಯ, ಉತ್ತರ ಕೊರಿಯ, ನಾರ್ವೆ, ಪಾಕಿಸ್ತಾನ, ಪೆರಗ್ವೆ, ಪೆರು, ಪೋಲೆಂಡ್, ಫಿಲಿಫೀನ್ಸ್, ಪೋರ್ಚುಗಲ್, ರೊಮೇನಿಯ, ರಷ್ಯ, ಸಿಂಗಾಪುರ, ಸ್ಲೊವಾಕಿಯ, ಸ್ಲೊವೇನಿಯ, ದಕ್ಷಿಣ ಕೊರಿಯ, ದಕ್ಷಿಣ ಆಫ್ರಿಕ, ಸ್ಪೇನ್, ಶ್ರೀಲಂಕ, ಸರ್ಬಿಯ, ಸ್ವೀಡನ್, ಸಿರಿಯ, ಥೈಲ್ಯಾಂಡ್, ಉಕ್ರೇನ್, ಉರುಗ್ವೆ, ಜಿಂಬಾಬ್ವೆ, ವೆನಿಜುವೆಲಾ, ವಿಯೆಟ್ನಾಂ, ಜಂಬಿಯ.
ಭಾರತದಲ್ಲಿ: ಭಾರತದಲ್ಲಿ ಮೇ ದಿನವೇ ಕಾರ್ಮಿಕ ದಿನ. ೨೦ ನೆಯ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ-ಕಾರ್ಮಿಕ ಸಂಘ ಚಳವಳಿಯ ಪ್ರಭಾವ ಹೆಚ್ಚಿದಾಗಿ ನಿಂದ-ಇದರ ಆಚರಣೆ ಆರಂಭ ವಾಯಿತು. ಮೇ ದಿನಾಚರಣೆಯಲ್ಲಿ ಭಾಗವಹಿಸಿದ್ದ ಮೊಟ್ಟ ಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡ್ ನಲ್ಲಿದ್ದ ಭಾರತೀಯ ನಾವಿಕರು, ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂಬ ಘೋಷಣೆಯನ್ನು ಒಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು (೧೯೨೫). ಭಾರತದಲ್ಲಿ ೧೯೨೭ ರಿಂದ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಗಿ ಆಚರಿಸುತ್ತಿzರೆ.
ಭಾರತದಲ್ಲಿ ಈ ಉತ್ಸವದಲ್ಲಿ ಭಾಗವಹಿಸುವವರು ಕಾರ್ಮಿಕ ಸಂಘಗಳವರು, ಸಮಾಜವಾದಿಗಳು ಮತ್ತು ಕೆಲವು ಬುದ್ಧಿ ಜೀವಿಗಳು ಮಾತ್ರ. ೧೯೨೭ ರಲ್ಲಿ ಮುಂಬ ಯಿಯಲ್ಲಿ ನಡೆದ ಉತ್ಸವದಲ್ಲಿ ಅನೇಕ ಕಾರ್ಮಿಕ ಮುಖಂಡರು ಭಾಗವಹಿಸಿದ್ದರು. ಅದೇ ವರ್ಷ ಕಲ್ಕತ್ತದಲ್ಲಿ ಬಂಗಾಳ ಪ್ರದೇಶ ಕಾರ್ಮಿಕ ಸಂಘ ಕಾಂಗ್ರೆಸ್ ಮೇ ದಿನವನ್ನಾಗಿ ಆಚರಿಸಿದಾಗ, ಪೊಲೀ ಸರು ಅನೇಕ ನಿರ್ಬಂಧಕಾeಗಳನ್ನು ವಿಧಿಸಿದರೆಂದು ತಿಳಿದು ಬರುತ್ತದೆ.
೧೯೨೮ ರಿಂದ ೧೯೩೪ರ ವರೆಗೆ ಆ ಉತ್ಸವ ಆಚರಣೆಯ ದಿನದಂದು ದಿನಾಚರಣೆಯ ಕಾರ್ಮಿಕರ ಅನೇಕ ಮುಷ್ಕರಗಳು ನಡೆದವು. ಎರಡನೆಯ ಮಹಾಯುದ್ಧದ ನಂತರ, ಆ ದಿನ ವನ್ನು ಹೆಚ್ಚು ವ್ಯಾಪಕವಾಗಿ ಆಚರಿ ಸಲು ಪ್ರಾರಂಭವಾಯಿತು. ಕಾರ್ಮಿ ಕರೂ, ಕಾರ್ಮಿಕ ಸಂಘಗಳೂ ಅಧಿಕ ಸಂಖ್ಯೆಯಲ್ಲಿ ಭಾಗವಹಿಸತೊಡಗಿ ದವು. ೧೯೬೯ ರಲ್ಲಿ ಭಾರತ ರಾಷ್ಟ್ರೀಯ ಕಾರ್ಮಿಕ ಸಂಘಗಳ ಕಾಂಗ್ರೆಸ್ ಒಂದನ್ನು ಬಿಟ್ಟು ಉಳಿದೆಲ್ಲ ಕಾರ್ಮಿಕ ಸಂಘಗಳೂ ಒಟ್ಟಾಗಿ, ತಮ್ಮ ಹಕ್ಕುಗಳನ್ನು ಸಾಧಿಸಲು ಭಾರಿ ಮೆರವಣಿಗೆಯಲ್ಲಿ ಪಾರ್ಲಿಮೆಂಟ್ ಭವನದ ಬಳಿಗೆ ಮೆರವಣಿಗೆಯಲ್ಲಿ ಹೋಗಿ ಪ್ರದರ್ಶನ ನಡೆಸಿದವು.
ಕಾರ್ಮಿಕ ಕಾನೂನುಗಳು :
ಇತರರ ಅಧೀನದಲ್ಲಿ ಎಂದರೆ ತಮ್ಮ ನೇಮಕದಾರರ, ಉದ್ಯೋಗ ದಾತರ, ಧಣಿಗಳ ಅಥವಾ ಯಜ ಮಾನರ ಕೈ ಕೆಳಗೆ, ದುಡಿಯುವ ಜನರ ಕೆಲಸಕ್ಕೆ ಸಂಬಂಧಿಸಿದಂತೆ ರಚಿತವಾದ ಎಲ್ಲ ಕಾನೂನುಗಳು (ಲೇಬರ್ ಲಾಸ್). ಇವನ್ನು ಕೈಗಾರಿಕಾ ಕಾನೂನುಗಳು ಅಥವಾ ಕೈಗಾರಿಕಾ ನ್ಯಾಯ ಎಂದೂ ಕರೆಯುತ್ತಾರೆ. ಆದರೆ ಕೈಗಾರಿ ಕೋದ್ಯಮಗಳಲ್ಲಿ ದುಡಿಯುವವರು ಮಾತ್ರವೇ ಈ ಕಾನೂನುಗಳ ಪರಿಮಿತಿಯೊಳಕ್ಕೆ ಬರುವುದಿಲ್ಲವಾ ದ್ದರಿಂದ ಇವನ್ನು ಕಾರ್ಮಿಕ ಕಾನೂನುಗಳು ಎಂದು ಕರೆಯುವುದೇ ಸೂಕ್ತ. ಉದ್ಯೋಗದಾತನಿಗೂ ಅವನ ಅಧೀನದಲ್ಲಿ ಕೆಲಸ ಮಾಡುವವನಿಗೂ ಏರ್ಪಡುವ ಸಂಬಂಧವನ್ನು ಕಾನೂ ನಿನ ನಿಯಂತ್ರಣಕ್ಕೆ ಒಳಪಡಿಸುವುದು ಅವಶ್ಯ. ಯಜಮಾನ-ಕಾರ್ಮಿಕರ ನಡುವಣ ಸಂಬಂಧ ವಾಸ್ತವವಾಗಿರಲಿ ಅಥವಾ ಮುಂದೆ ಉದ್ಭವಿಸು ವಂಥzಗಿರಲಿ, ಕಾರ್ಮಿಕನ ದುಡಿಮೆ ದೈಹಿಕವಾzದಾಗಿರಲಿ, ಮಾನಸಿಕವಾzದಾಗಿರಲಿ ಇಂಥ ಎಲ್ಲ ಸಂದರ್ಭಗಳಿಗೂ ಕಾರ್ಮಿಕ ಕಾನೂನುಗಳು ಅನ್ವಯಿಸುತ್ತವೆ. ಕೆಲಸಗಾರ ನೇಮಕದಾರನಿಗೆ ಅಧೀನನೇ ಅಲ್ಲವೇ-ಎಂಬುದೇ ಪರಿಗಣಿಸಬೇಕಾದ ಅಂಶ. ಸ್ವತಂತ್ರ ವಾಗಿ ದುಡಿಯುವವನಿಗೆ ಕಾರ್ಮಿಕ ಕಾನೂನುಗಳು ಅನ್ವಯಿಸುವುದಿಲ್ಲ. ಆದರೆ ಅಧೀನವರ್ತಿ ಕೆಲಸಗಾರ ಯಾರು, ಸ್ವತಂತ್ರ ಗುತ್ತಿಗೆದಾರ ಯಾರು ಎಂಬುದನ್ನು ನಿರ್ಣಯಿಸು ವುದು ಸುಲಭವಲ್ಲ. ವೃತ್ತಿ ಪರಿಣತರ ದುಡಿಮೆಯ ಲಕ್ಷಣವನ್ನು ಕೂಡ ಅನೇಕ ವೇಳೆ ಖಚಿತವಾಗಿ ನಿರ್ಣ ಯಿಸುವುದು ಕಷ್ಟ . ಕೆಲಸಗಾರನ ಕೆಲಸದ ವಿಧಾನ, ಗುಣ ಮತ್ತು ಪರಿ ಮಾಣಗಳ ಮೇಲೆ ಯಜಮಾನನ ಹತೋಟಿ ಇರುವಡೆಗಳೆಲ್ಲ ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಒಳಪ ಡುತ್ತವೆ. ಈ ವ್ಯಾಪಕವಾದ ಅರ್ಥದಲ್ಲಿ ಪರಿಗಣಿಸಿದಾಗ, ಕಾರ್ಮಿಕರ ಸಂಘಟನೆ, ನಿರುದ್ಯೋಗ ನಿವಾರಣೆ, ಕೈಗಾರಿಕಾ ಸಂಬಂಧಗಳು, ಮುಷ್ಕರ ಗಳು, ಕಾರ್ಖಾನೆಗಳ ಬೀಗಮುದ್ರೆ ಮುಂತಾದವಕ್ಕೆ ಸಂಬಂಧಿಸಿದ ಕಾನೂನುಗಳನ್ನೂ ಈ ಶೀರ್ಷಿಕೆಯ ಅಡಿಯ ಪರಿಶೀಲಿಸಬೇಕಾ ಗುತ್ತದೆ. ಕಾರ್ಮಿಕರ ಕೆಲಸಕ್ಕೆ ಸಂಬಂಧಿಸಿದ ಸಾಮಾನ್ಯ ಕಾನೂನುಗಳನ್ನು ಇಲ್ಲಿ ವಿವೇಚಿಸಲಾಗಿದೆ. ದೇಶದ ಉತ್ಪಾ ದನಾ ಕಾರ್ಯದಲ್ಲಿ ನಿರತರಾದ ಮಾಲೀಕರೂ, ಕಾರ್ಮಿಕರೂ ಸಹವರ್ತಿಸಿ ನಡೆಯುವಂತೆ ಮಾಡುವುದು ಸರ್ಕಾರದ ಕರ್ತವ್ಯ. ಈ ಉದ್ದೇಶದಿಂದಲೇ ಕಾರ್ಮಿಕ ಕಾನೂನುಗಳು ಜರಿಗೆ ಬಂದಿವೆ. ನಿಷ್ಪಕ್ಷದೃಷ್ಟಿ, ನೀತಿಪಾಲನೆ, ಅಂತರ ರಾಷ್ಟ್ರೀಯ ಏಕರೂಪತೆ, ಜನತೆಯ ಆರ್ಥಿಕ ಆಡಳಿತ ಇವು ಕಾರ್ಮಿಕ ಕಾನೂನುಗಳಿಗೆ ಆಧಾರಭೂತವಾದ ತತ್ತ್ವಗಳು.ರಷ್ಯಾದ ಸಾಮ್ರಾಜ್ಯದ ಮೊದಲ ಕಾರ್ಖಾನೆ ತನಿಖಾಧಿಕಾರಿ ಇವಾನ್ ಯಾನ್ ಜುಲ್ ೧೮೮೨ ರ ಉದಾರವಾದಿ ಕಾರ್ಮಿಕ ಸಂಹಿತೆಯನ್ನು ಜರಿಗೆ ತರಲು ಸಹಾಯ ಮಾಡಿದರು.
ಕಾರ್ಖಾನೆಗಳ ಕಾಯಿದೆ : ಕಾರ್ಖಾನೆಗಳಲ್ಲಿ ಎರಡು ವಿಧ. ಕಾರ್ಮಿಕರ ನಷ್ಟ ಪರಿಹಾರ ಕಾಯಿದೆ , ಕೂಲಿ ಪಾವತಿ ಕಾಯಿದೆ (೧೯೩೬), ಕನಿಷ್ಠ ಕೂಲಿ ಕಾಯಿದೆ (೧೯೪೮) , ಉದ್ಯೋಗಿಗಳ ರಾಜ್ಯ ವಿಮಾ ಕಾಯಿದೆ (೧೯೪೮) , ಉದ್ಯೋಗಿ ಗಳ ಭವಿಷ್ಯ ನಿಧಿಗಳ ಕಾಯಿದೆ (೧೯೫೨) , ಕೈಗಾರಿಕಾ ವಿವಾದಗಳ ಕಾಯಿದೆ (೧೯೪೭),
ಕಾರ್ಮಿಕರ ಹಿತರಕ್ಷಣೆ : ಕಾರ್ಮಿಕರ ಹಿತರಕ್ಷಣೆಗಾಗಿ ಇನ್ನೂ ಅನೇಕ ಕಾಯಿದೆಗಳು ಜರಿಯಲ್ಲಿದೆ. ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿಯ ಕಾಲದಲ್ಲಿ ಸಂಬಳ ಸಹಿತ ರಜ ನೀಡಿಕೆ, ಹಡಗು ಕಟ್ಟೆಗಳಲ್ಲಿ ಕೆಲಸ ಮಾಡುವವರ ಉದ್ಯೋಗ ನಿಯಂತ್ರಣ, ವ್ಯಾಪಾರ ನೌಕೆಗಳ ಕಲಾಪಗಳಿಗೆ ಸಂಬಂಧಿಸಿದಂತೆ ನಿಬಂಧನೆಗಳ ರಚನೆ ಮುಂತಾದ ಕಾಯಿದೆಗಳು ಜರಿಯಲ್ಲಿದೆ.
- ಮುರುಳೀಧರ್ ಹೆಚ್ ಸಿ, ಶಿವಮೊಗ್ಗ.