ಅ.31: ಜೋಸೆಫ್ ನಗರದಲ್ಲಿ ಜಪಮಾಲೆ ರಾಣಿಯ ೧೧ನೇ ವಾರ್ಷಿಕೋತ್ಸವ
ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿರುವ ಜೋಸೆಫ್ ನಗರ ಬಡಾವಣೆಯ ನಿವಾಸಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೇವತಾಯಿ ಜಪಮಾಲೆ ರಾಣಿಯ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ.
ಅ.೩೧ರ ನಾಳೆ (ಶುಕ್ರವಾರ) ಜೋಸೆಫ್ ನಗರದ ಬಡಾವಣೆಯಲ್ಲಿ ಜಪಮಾಲೆ ರಾಣಿಯ ೧೧ನೇ ವರ್ಷದ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಅಂದು ಸಂಜೆ ೬ ಗಂಟೆಗೆ ಜಪಸರ ಪ್ರಾರ್ಥನೆ, ೬.೪೫ಕ್ಕೆ ಶಿವಮೊಗ್ಗ ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳಾದ ರೆ|ಫಾ| ಸ್ಟ್ಯಾನಿ ಡಿಸೋಜ ಅವರಿಗೆ ಬಡಾವಣೆ ನಿವಾಸಿಗಳಿಂದ ಸ್ವಾಗತ, ೭ ಗಂಟೆಗೆ ಪೂಜ್ಯ ಗುರುಗಳು ಭಕ್ತರಿಗೆ ಪ್ರಬೋಧನೆ ನೀಡಿ ನಂತರ ಆಶೀರ್ವದಿಸಲಿದ್ದಾರೆ.
ರಾತ್ರಿ ೮ ಗಂಟೆಗೆ ಸರಿಯಾಗಿ ಜಪಮಾಲೆ ರಾಣಿಯ ಅಲಂಕೃತ ತೇರಿನ ರಾಜಬೀದಿ ಉತ್ಸವ ಜರುಗಲಿದ್ದು, ನಂತರ ಅನ್ನಸಂತರ್ಪಣೆ ನೆರವೇರಲಿದೆ. ದೇವಮಾತೆಯ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಪ್ರಾರ್ಥನಾ ವಿಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮಾತೆಯ ಕೃಪೆಗೆ ಪಾತ್ರರಾಗುವಂತೆ ಬಡಾವಣೆ ನಿವಾಸಿಗಳ ಪರವಾಗಿ ಪ್ರಮುಖರಾದ ಕಿರಣ್ ಫರ್ನಾಂಡಿಸ್ ಅವರು ಕೋರಿದ್ದಾರೆ.



