ಜಿಲ್ಲಾ ಸುದ್ದಿತಾಜಾ ಸುದ್ದಿ

ರಾಜ್ಯಕ್ಕೆ ಮಾದರಿಯಾದ ಶಿವಮೊಗ್ಗ ಪ್ರೆಸ್ ಟ್ರಸ್ಟ್: ನೈಜ ಪತ್ರಕರ್ತರಿಗೆ ಮಾತ್ರ ಪ್ರವೇಶ – ಐಡಿ ಕಾರ್ಡ್ ಕಡ್ಡಾಯ…

Share Below Link

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಪ್ರತಿಷ್ಠಿತ ಪತ್ರಿಕಾ ಭವನವು ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆಯಲ್ಲಿ ಸಾಗುತಿದ್ದು, ನಿಯಮಾಸಾರ ಕಾರ್ಯ ಚಟುವಟಿಕೆ ನಡೆಸುತ್ತಿದೆ. ಇದರ ಆಡಳಿತದಲ್ಲಿ ಜಿಡಳಿತ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಜಿಧಿಕಾರಿಗಳು ಸ್ಪಷ್ಟನೆ ನೀಡಿzರೆ. ಆದಾಗ್ಯೂ ಕೆಲ ವ್ಯಕ್ತಿಗಳು ಪತ್ರಿಕಾ ಭವನ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಕುರಿತು ಅಪಪ್ರಚಾರ ಮಾಡುತ್ತಿzರೆ. ಪ್ರೆಸ್ ಟ್ರಸ್ಟ್ ಈ ವ್ಯಕ್ತಿಗಳ ವಿರುದ್ಧ ಈಗಾಗಲೇ ಕಾನೂನು ಹೋರಾಟ ಮಾಡುತ್ತಿದೆ ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆಯಲ್ಲಿ ನಡೆಯುತ್ತಿರುವ ಪತ್ರಿಕಾ ಭವನ ರಾಜ್ಯದಲ್ಲಿಯೇ ಮಾದರಿಯಾಗಿದೆ. ಇತ್ತೀಚೆಗೆ ಪತ್ರಿಕಾ ಸಂಘಟನೆಯೊಂದು ಪತ್ರಿಕಾ ಭವನಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕು ಮತ್ತು ಅಕ್ರಮ ತನಿಖೆ ಮಾಡಬೇಕೆಂದು ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಜಿಧಿಕಾರಿಗಳು ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿ ವರದಿ ನೀಡಲು ಸೂಚನೆ ನೀಡಿದ್ದರು. ಅದರಂತೆ ತನಿಖೆ ಮಾಡಿದ್ದ ನ್ಯಾಯಮೂರ್ತಿಗಳು ವಾದಿ ಮತ್ತು ಪ್ರತಿವಾದಿಗಳು ನೀಡಿದ್ದ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಿzರೆಂದರು.


ನ್ಯಾ.ರವೀಂದ್ರನಾಥ್ ಅವರು, ಪತ್ರಿಕಾ ಭವನ ನಿರ್ವಹಣೆ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ದೇ ಆಗಿದೆ. ಕಾಲಕಾಲಕ್ಕೆ ಸಭೆ, ಆಡಿಟ್ ಎಲ್ಲವನ್ನೂ ಕ್ರಮಬದ್ಧವಾಗಿ ನಡೆಸುತ್ತಿದೆ. ಇಲ್ಲಿ ಯಾವುದೇ ಹಣಕಾಸು ಲೋಪವಿಲ್ಲ ಎಂದು ವರದಿ ನೀಡಿzರೆ. ನ್ಯಾಯಮೂರ್ತಿಗಳ ವರದಿಯನ್ನು ಆಧರಿಸಿ ಜಿಧಿಕಾರಿಗಳು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಬೈಲಾದಂತೆ ಪತ್ರಿಕಾ ಭವನ ನಿರ್ವಹಣೆ ಮಾಡುತ್ತಿದೆ. ಇದರ ಆಡಳಿತದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಆದೇಶ ನೀಡಿzರೆ. ಮಾನ್ಯತೆ ಪಡೆದ ಪತ್ರಕರ್ತರು ಮತ್ತು ವೃತ್ತಿಗೆ ಸಂಬಂಧಿಸಿದ ಚಟುವಟಿಕೆ ನಡೆಸಲು ಅವರz ಆದ ಸಂವಿಧಾನ ರಚಿಸಿಕೊಂಡು ಹೋಗಲು ಯಾವುದೇ ಅಡ್ಡಿಯಿಲ್ಲ ಎಂದು ಆದೇಶದಲ್ಲಿ ತಿಳಿಸಿzರೆ ಎಂದು ವಿವರಿಸಿದರು.
ವಾಸ್ತವ ಸ್ಥಿತಿ ಹೀಗಿರುವಾಗ ಪತ್ರಿಕೆಯನ್ನೇ ಮಾಡದೆ, ಪತ್ರಿಕಾ ಭವನಕ್ಕೆ ಅಕ್ರಮ ಪ್ರವೇಶ ಮಾಡಿ ನೈಜ ಪತ್ರಕರ್ತರಿಗೆ ತೊಂದರೆ ನೀಡುವವರ ವಿರುದ್ಧ ಪ್ರೆಸ್ ಟ್ರಸ್ಟ್ ಕಾನೂನು ಕ್ರಮ ಕೈಗೊಳ್ಳಲಿದೆ. ಟ್ರಸ್ಟ್ ನಿಯಮ ಹಾಗೂ ವಾರ್ತಾ ಇಲಾಖೆಯ ನಿಯಮಗಳ ಅನುಸಾರ ನಿತ್ಯದ ಪತ್ರಿಕಾ ಗೋಷ್ಠಿಗಳಿಗೆ ಯಾರಿಗೆ ಪ್ರವೇಶ ಇದೆ ಎಂಬ ನಿಯಮ ರೂಪಿಸಲಾಗಿದೆ. ಅದರಂತೆ ಗುರುತಿನ ಚೀಟಿ ನೀಡಲಾಗುವುದು. ನಿಯಮಿತ ವಾಗಿ ಪ್ರಕಟವಾಗುವ ಪತ್ರಿಕೆಗಳ ಪ್ರತಿನಿಧಿಗಳು, ರಾಜ್ಯ ಮಟ್ಟದ ಪತ್ರಿಕೆಗಳು, ದೃಶ್ಯ ಮಾದ್ಯಮಗಳ ಪ್ರತಿನಿಧಿಗಳು ಸೇರಿದಂತೆ ಸಕ್ರಿಯ ಪತ್ರಕರ್ತರಿಗೆ ಭವದಲ್ಲಿ ಪ್ರವೇಶವಿದೆ. ಪತ್ರಕರ್ತರು ಎಂದು ಹೇಳಿಕೊಂಡು ಅನ್ಯಕೃತ್ಯ ಮಾಡುವ ಯಾರಿಗೂ ಪ್ರವೇಶವಿಲ್ಲ ಎಂದು ಮಂಜುನಾಥ್ ಹೇಳಿದರು.
ಪತ್ರಿಕಾಗೋಷ್ಠಿ, ಪತ್ರಿಕಾ ಸಂವಾದಗಳಿಗೆ ವರದಿ ಮಾಡಲು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಸದಸ್ಯತ್ವ ಇದ್ದವರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಅವರು, ಮಾಧ್ಯಮ ಪಟ್ಟಿಯಲ್ಲಿದ್ದು, ದಿನಪತ್ರಿಕೆಯಾದರೂ ಪ್ರತಿದಿನ ಪತ್ರಿಕೆ ಅಚ್ಚು ಹಾಕುವವರಿಗೆ ಮಾತ್ರ ಪ್ರೆಸ್ ಟ್ರಸ್ಟ್ ಐಡಿ ಕಾರ್ಡ್ ನೀಡುವುದು. ಆದ್ದರಿಂದ ಸಂಬಂಧಿಸಿದ ಪತ್ರಿಕಾ ಸಂಪಾದಕರು ಪ್ರೆಸ್ ಟ್ರಸ್ಟ್ ಕಾರ್‍ಯಾಲಯ ದಿಂದ ಅರ್ಜಿ ನಮೂನೆಗಳನ್ನು ಪಡೆದು ಅರ್ಜಿ ಸಲ್ಲಿಸಬಹುದು ಎಂದ ಅವರು, ಇನ್ನುಮುಂದೆ ಯಾವುದೇ ಕಾರಣಕ್ಕೂ ಪ್ರೆಸ್ ಟ್ರಸ್ಟ್ ನ ಐಡಿ ಕಾರ್ಡ್ ಹೊಂದಿರದ ಪತ್ರಕರ್ತರಿಗೆ ಪತ್ರಿಕಾ ಗೋಷ್ಠಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ಪುನರುಚ್ಛರಿಸಿದರು.
ಪ್ರೆಸ್ ಟ್ರಸ್ಟ್ ಪದಾಧಿಕಾರಿಗಳು, ಟ್ರಸ್ಟಿಗಳು, ಶಿವಮೊಗ್ಗ ಜಿ ಪತ್ರಿಕಾ ಸಂಪಾದಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.