ಜಿಲ್ಲಾ ಪತ್ರಿಕಾ ಸಂಪಾದಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ…
ಶಿವಮೊಗ್ಗ : ಜಿಲ್ಲೆಯಿಂದ ದಿನನಿತ್ಯ ಪ್ರಕಟ ಗೊಳ್ಳುವ ದಿನ ಪತ್ರಿಕೆಗಳ ಸಂಪಾದಕರಗಳ ಒಕ್ಕೂಟವಾದ ಶಿವಮೊಗ್ಗ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ತುಂಗಾತರಂಗ ದಿನ ಪತ್ರಿಕೆಯ ಸಂಪಾದಕ ಎಸ್.ಕೆ. ಗಜೇಂದ್ರ ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು, ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸಹ್ಯಾದ್ರಿ ದಿನಪತ್ರಿಕೆಯ ಸಂಪಾದಕ ಮಂಜುನಾಥ್, ಖಜಾಂಚಿಯಾಗಿ ಹೊಸ ನಾವಿಕ ದಿನಪತ್ರಿಕೆಯ ಸಂಪಾದಕ ರಾಕೇಶ್ ಡಿಸೋಜಾ ಅವರನ್ನು ನೇಮಕ ಮಾಡಲಾಗಿದೆ.
ಶಿವಮೊಗ್ಗ ಪತ್ರಿಕಾ ಭವನದಲ್ಲಿ ಹಿರಿಯ ಪತ್ರಿಕಾ ಸಂಪಾದಕ ಜಿ. ಪದ್ಮನಾಭ್ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಈ ಮೂವರನ್ನು ಸರ್ವಾನುಮತದಂದ ಆಯ್ಕೆ ಮಾಡಲಾಗಿದೆ.

ಸಂಘದ ಉಪಾಧ್ಯಕ್ಷರಾಗಿ ರಂಜಿತ್ ರಂಗಸ್ವಾಮಿ, ಭರತೇಶ್, ಹಿತಕರ್ ಜೈನ್, ಸುಭಾಷ್ ಕಾರ್ಯದರ್ಶಿಗಳಾಗಿ ನಾಗರಾಜ್ ಶೆಣೈ, ಮೊಹಮದ್ ಲಿಯಾಕತ್, ರಾಘವೇಂದ್ರ, ಸಹ ಕಾರ್ಯದರ್ಶಿಗಳಾಗಿ ಜಿ. ಚಂದ್ರಶೇಖರ, ಹೆಚ್.ಎನ್. ಮಂಜುನಾಥ್ ಆಯ್ಕೆಯಾಗಿzರೆ.
ಸಭೆಯಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಂಘದ ಹಿರಿಯ ನಿರ್ದೇಶಕರಾದ ಎನ್. ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಖಜಾಂಚಿ ಜೇಸುದಾಸ್ ಅವರು ನೂತನ ಪದಾಧಿಕಾರಿಗಳಿಗೆ ಅಭಿನಂದಿಸಿ, ಸಂಘದ ಮೂಲಕ ಶಿವಮೊಗ್ಗ ಜಿ ಪತ್ರಿಕೆಗಳ ಒಳಿತಿಗಾಗಿ ಕಾರ್ಯ ನಿರ್ವಹಿಸಲು ನಿರ್ವಹಿಸಲು ಕೋರಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಯಿಂದ ಪ್ರಕಟವಾಗುವ ದಿನಪತ್ರಿಕೆಗಳ ೨೫ಕ್ಕೂ ಹೆಚ್ಚು ಸಂಪಾದಕರು ಉಪಸ್ಥಿತರಿದ್ದರು.
