ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಿದ್ಲಿಪುರ ಕಟ್ಟಡ ಕುಸಿತ: ನೊಂದ ಕುಟಂಬಕ್ಕೆ ತಕ್ಷಣ ಪರಿಹಾರ ನೀಡಿ: ಶಾಸಕಿ ಶಾರದಾ ಪೂರ್ಯನಾಯ್ಕ

Share Below Link

ಶಿವಮೊಗ್ಗ : ಸಿದ್ಲಿಪುರದಲ್ಲಿ ನಡೆದ ಕಟ್ಟಡ ಕುಸಿತ ದಿಂದ ಕಾರ್ಮಿಕನೊರ್ವ ಸಾವನ್ನ ಪ್ಪಿದ್ದು, ಕಾರ್ಮಿಕ ಇಲಾಖೆಯು ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನೊಂದ ಕಾರ್ಮಿಕ ಕುಟುಂಬಕ್ಕೆ ಪರಿಹಾರ ಒದಗಿಸಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ ಸೂಚಿಸಿದರು.
ನಗರದ ತಾಲ್ಲೂಕು ಪಂಚಾಯತಿಯಲ್ಲಿ ಇಂದು ಏರ್ಪಡಿಸಿದ್ದ ೨೦೨೫-೨೬ನೇ ಸಾಲಿನ ಮೊದಲನೇ ಮತ್ತು ಎರಡನೇ ತಾಲ್ಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆಯು ಜಿಯಲ್ಲಿ ಇಂತಹ ಘಟನೆಯ ಮುಂದೆಂದು ನಡೆಯ ದಂತೆ ಜಗೃತಿ ವಹಿಸಬೇಕು. ಸಾವನ್ನಪ್ಪಿರುವ ವ್ಯಕ್ತಿಗೆ ಕಾರ್ಮಿಕ ಕಾರ್ಡ್ ನಿಂದ ಸಿಗುವ ಸೌಲಭ್ಯವನ್ನು ತಕ್ಷಣ ನೀಡಬೇಕು ಎಂದರು.
ಕಾರ್ಮಿಕ ಇಲಾಖೆಯ ಅಧೀನದಲ್ಲಿ ಬರುವ ವಿವಿಧ ಮಂಡಳಿಗಳ ಯೋಜನೆ ಬಗ್ಗೆ ಕಾರ್ಮಿಕರಿಗೆ ಅರಿವು ಮೂಡಿಸ ಬೇಕು. ವಾಹನ ಬ್ರಾಂಡಿಂಗ್ ಹಾಗೂ ಆಟೋ ಪ್ರಚಾರ ಮೂಲಕ ಜಿದ್ಯಂತ ಈ ಬಗ್ಗೆ ವ್ಯಾಪಕ ಪ್ರಚಾರ ಮಾಡಬೇಕು. ಮಿಷನ್ ಸುರಕ್ಷ ಅಭಿಯಾನಕ್ಕೆ ಆಯನೂರು, ಕುಂಸಿ, ಚೋರಡಿ ಮತ್ತು ತುಪ್ಪೂರು ಗ್ರಾಮ ಪಂಚಾಯಿತಿಗಳಿಗೆ ಕಾರ್ಮಿಕ ನಿರೀಕ್ಷಕರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಲಾಗಿದ್ದು, ಕಾರ್ಮಿಕ ಯೋಜನೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಶಾಲಾ ಶಿಕ್ಷಣ ಇಲಾಖೆ ಕುರಿತು ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆಯಿಂದ ಅತಿಥಿ ಉಪನ್ಯಾಸಕ ಆಯ್ಕೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರದ ನೀಡುವ ಸೌಲಭ್ಯ ಸರಿಯಾದ ನಿಟ್ಟಿನಲ್ಲಿ ದೊರಕಬೇಕು. ಗ್ರಾಮೀಣ ಹಾಗೂ ನಗರದ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿ ರುವ ಮಕ್ಕಳು ಇದರಿಂದ ವಂಚಿತ ರಾಗಬಾರದು ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ೧೨೪ ಅತಿಥಿ ಶಿಕ್ಷಕರ ಹುz ಖಾಲಿ ಇದ್ದು, ೧೧೪ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ಹುz ಭರ್ತಿ ಮಾಡುತ್ತೇವೆ. ಸರ್ಕಾರದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ನೀಡುತ್ತಿರುವ ಸೌಲಭ್ಯ ವನ್ನು ವ್ಯರ್ಥ ಮಾಡದೆ ಸರಿಯಾದ ಕ್ರಮದಲ್ಲಿ ತಲುಪಿಸಲಾಗುತ್ತಿದೆ. ೨೦,೧೪೬ ಮಕ್ಕಳಿಗೆ ಉಚಿತ ಪುಸ್ತಕ, ೨೨,೧೪೪ ಮಕ್ಕಳಿಗೆ ಉಚಿತ ಬ್ಯಾಗ್, ೨೨,೧೪೬ ಮಕ್ಕಳಿಗೆ ಉಚಿತ ಶೂ ಹಾಗೂ ಸಾಕ್ಸ್ ನೀಡಲಾಗಿದ್ದು, ೩೨,೦೨೮ ಮಕ್ಕಳು ಕ್ಷೀರಭಾಗ್ಯ ಹಾಗೂ ೩೨,೦೨೮ ಮಕ್ಕಳು ಬಿಸಿ ಊಟ ಯೋಜನೆ ಫಲಾನುಭವಿ ಗಳಾಗಿzರೆ. ಇದರೊಂದಿಗೆ ವಾರದಲ್ಲಿ ೫ ದಿನ ಹಾಲಿನೊಂದಿಗೆ ರಾಗಿ ಮಾಲ್ಟ್ ನೀಡಲಾಗುತ್ತಿದೆ. ಶಾಲಾ ಅಡುಗೆ ಸಿಬ್ಬಂದಿಗೆ ಜೂನ್- ೨೦೨೫ ರಿಂದ ರೂ.೧,೦೦೦ ಸಂಭಾವನೆ ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮೀ ಯೋಜನೆ ಸಂಬಂಧಿಸಿದಂತೆ ಜುಲೈ ಮಾಹೆ ವರೆಗೂ ಜಿಯಲ್ಲಿ ೧೪೦೦ ಖಾತೆಗೆ ಹಣವನ್ನು ಬಿಡುಗಡೆ ಮಾಡಲಾ ಗಿದೆ. ಇನ್ನೂ ಉಳಿದಂತೆ ಐಟಿ ಹಾಗೂ ಜಿಎಸ್‌ಟಿ ಇರುವುದರಿಂದ ಸರ್ಕಾರ ಆದೇಶದಂತೆ ಪಾಲನೆ ಮಾಡುತ್ತಿzವೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ಮಧು, ನಾಮ ನಿರ್ದೇಶಿತ ಸದಸ್ಯರುಗಳು, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಗಳು, ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಹಾಗೂ ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.