ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಭಗವದ್ಗೀತಾ ಅಭಿಯಾನ ಪ್ರಸ್ತುತ ದಿನಮಾನಕ್ಕೆ ಇದು ಅಗತ್ಯಗತ್ಯ : ಬಿಎಸ್‌ವೈ

Share Below Link

ಶಿವಮೊಗ್ಗ : ಭಗವದ್ಗೀತಾ ಅಭಿಯಾನವು ಒಂದು ಒಳ್ಳೆಯ ಕಾಯಕ್ರಮ ವಾಗಿದ್ದು ಪ್ರಸ್ತುತ ದಿನಮಾನಕ್ಕೆ ಅಗತ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಅವರು ಇಂದು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶ್ರೀ ಸರ್ವeಂದ್ರ ಸರಸ್ವತಿ ಪ್ರತಿಷ್ಠಾನ, ಶಿರಸಿ ಹಾಗೂ ಸ್ವರ್ಣರಶ್ಮಿ ಟ್ರಸ್ಟ್, ಶಿವಮೊಗ್ಗ ಇವರ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಭಗವದ್ಗೀತಾ ಅಭಿಯಾನ, ಕರ್ನಾಟಕ ೨೦೨೫ರ ರಾಜ್ಯಮಟ್ಟದ ಮಹಾಸಮರ್ಪಣಾ ಕಾರ್ಯಕ್ರಮವು ನ.೩೦ರಂದು ಶಿವಮೊಗ್ಗದಲ್ಲಿ ಆಯೋಜನೆ ಯಾಗಿದ್ದು ಅದಕ್ಕೆ ಮುಖ್ಯ ಅತಿಥಿಗಳನ್ನಾಗಿ ಅವರನ್ನು ಸ್ವಗೃಹದಲ್ಲಿ ಇಂದು ಅಭಿಯಾನದ ಕಾರ್ಯಾಧ್ಯಕ್ಷ ಅಶೋಕ ಜಿ.ಭಟ್ಟ ಆಹ್ವಾನಿಸಿದ ಸಂದರ್ಭದಲ್ಲಿ ಯಡಿಯೂರಪ್ಪ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳ ಮಾರ್ಗದರ್ಶನದಲ್ಲಿ ೨೦೦೭ರಿಂದ ರಾಜದ್ಯಂತ ಪ್ರತಿ ವರ್ಷ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಯುವಕ ಯುವತಿ ಮಂಡಳಿ, ಸಾರ್ವಜನಿಕ ಸಂಘ ಸಂಸ್ಥೆಗಳು ಎಲ್ಲರೂ ಇದರಲ್ಲಿ ಭಾಗಿಯಾಗಿ ಮಹಾಸಮರ್ಪಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸ ಬೇಕೆಂದು ಕರೆ ನೀಡಿದರು.