ಸಂಘ ಸಂಸ್ಥೆಗಳು ಮಾಡುವ ಸೇವಾ ಕಾರ್ಯಗಳು ಪುಣ್ಯದ ಕೆಲಸ:ಫಾ| ವಿನುತ್
ಸಾಗರ: ಸಂಘ ಸಂಸ್ಥೆಗಳು ಮಾಡುವ ಸೇವಾ ಕಾರ್ಯಗಳು ಪುಣ್ಯದ ಕೆಲಸ. ಲಯನ್ಸ್ ಸಂಸ್ಥೆಯ ಈ ಕಾರ್ಯವೂ ಪುಣ್ಯದ ಕೆಲಸ ಎಂದು ಇಲ್ಲಿನ ಚರ್ಚ್ ಫಾದರ್ ವಿನುತ್ ಬಾಲರಾಜ್ ಹೇಳಿದರು.
ಇಲ್ಲಿನ ಸಂತ ಜೋಸೆಫ್ ಚರ್ಚ್‌ನಲ್ಲಿ ವಿಶ್ವ ಸೇವಾ ದಿನದ ಅಂಗವಾಗಿ ಲಯನ್ಸ್ ಕ್ಲಬ್ ವತಿ ಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಚರ್ಚ್‌ಗೆ ವೀಲ್‌ಚೇರ್ ಕೊಡುಗೆ ಕಾರ್ಯಕ್ರಮದಲ್ಲಿ ಅವರು ವೀಲ್ ಚೇರ್ ಸ್ವೀಕರಿಸಿ ಮಾತನಾಡಿದರು.

ತೊಟ್ಟಿಲಿನಿಂದ ಪೆಟ್ಟಿಗೆಯವರೆಗೆ ಹೋಗುವ ಮೊದಲು ಬಟ್ಟಲಲ್ಲಿ ಸ್ವಲ್ಪವಾದರೂ ಪುಣ್ಯವನ್ನು ಕಟ್ಟಿ ಕೊಳ್ಳಬೇಕು. ಈ ಕೆಲಸವನ್ನು ಲಯನ್ಸ್ ಸಂಸ್ಥೆ ಮಾಡಿದೆ. ನಮ್ಮ ನಡೆ, ನುಡಿ ಯೋಚನೆಗಳು ಪರರಿಗೆ ಹಿತವಾಗಿರಬೇಕು. ಕೊಡಲು ನಮ್ಮ ಲ್ಲಿ ಏನೂ ಇಲ್ಲದಿದ್ದರೂ ತೊಂದರೆ ಯಿಲ್ಲ. ಕೊಡುವ ಮನಸ್ಸು ಇರದಿ ದ್ದರೂ ಪರರ ಮನಸ್ಸನ್ನು ನೋಯಿಸ ಬಾರದು ಎಂದು ಸಲಹೆ ನೀಡಿ ದರು.
ಲಯನ್ಸ್ ಕ್ಲಬ್ ನಿರ್ದೇಶಕ ಆಲ್ಬರ್ಟ್ ಫರ್ನಾಂಡಿಸ್ ಮಾತ ನಾಡಿ, ಚರ್ಚ್‌ಗೆ ವೀಲ್‌ಚೇರ್ ಅಗತ್ಯವಿದೆ. ಅಶಕ್ತರಿಗೆ, ವೃದ್ಧರಿಗೆ ಇದು ಉಪಯುಕ್ತವಾಗಿದೆ. ಲಯನ್ಸ್ ಸಂಸ್ಥೆ ಸಮಾಜದಲ್ಲಿ ಹತ್ತು ಹಲವಾರು ಸೇವಾ ಕಾರ್ಯಗಳನ್ನು ನಡೆಸುತ್ತ ಬಂದಿದೆ. ಶಾಲೆ, ಆಸ್ಪತ್ರೆ, ಆಶ್ರಮಗಳನ್ನು ನಡೆಸುವ ಮೂಲಕ ಜನಮುಖಿಯಾಗಿ ಸೇವೆ ಸಲ್ಲಿಸು ತ್ತಿದೆ. ಉಚಿತ ನೇತ್ರ ತಪಾಸಣೆ, ಶಸ್ತ್ರ ಚಿಕಿತ್ಸೆ ಮೂಲಕ ಜನರ ವಿಶ್ವಾಸ ಗಳಿಸಿದೆ. ಚರ್ಚ್‌ಗೆ ವೀಲ್‌ಚೇರ್ ನೀಡಿರುವುದು ಕೂಡ ಸೇವೆಯ ಒಂದು ಭಾಗ ಎಂದರು.

ವೀಲ್‌ಚೇರ್ ಪ್ರಾಯೋಜಕ ರಾದ ಎಂ.ನಾಗರಾಜ್ ಮಾತನಾಡಿ, ಈ ಚರ್ಚ್‌ನ ಪರಿಸರದ ಬೆಳೆದು ಬಂದ ನಾವು ಇಲ್ಲಿನ ಚಟು ವಟಿಕೆಗಳಲ್ಲಿ ಭಾಗಿಯಾಗುತ್ತಿzವೆ. ಜತಿ, ಮತ, ಧರ್ಮದ ಭೇದವಿ ಲ್ಲದೆ ಚರ್ಚ್‌ನೊಂದಿಗೆ ಸೌಹಾರ್ದ ಸಂಬಂಧವಿದೆ. ಶತಮಾನ ಕಂಡಿ ರುವ ಈ ಚರ್ಚ್‌ನ ಹೊಸ ಕಟ್ಟಡ ಊರಿಗೊಂದು ಹೆಮ್ಮೆ. ಅಗತ್ಯವುಳ್ಳ ವರಿಗೆ ನೆರವು ನೀಡಬೇಕೆಂಬ ಹಿನ್ನೆಲೆ ಯಲ್ಲಿ ಲಯನ್ಸ್ ಕ್ಲಬ್ ಮೂಲಕ ವೀಲ್‌ಚೇರ್ ನೀಡಲಾಗಿದೆ ಎಂದರು.
ಚರ್ಚ್‌ನ ಕಾರ್‍ಯದರ್ಶಿ ಮೈಖ ಲ್ ಡಿಸೋಜ ಮಾತನಾಡಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಪ್ರಸನ್ನ ಟಿ. ಅಧ್ಯಕ್ಷತೆ ವಹಿಸಿ ಮಾತ ನಾಡಿ, ಒಂದು ವೀಲ್‌ಚೇರ್‌ನ್ನು ಚರ್ಚ್‌ಗ ಕೊಡು ಗೆಯಾಗಿ ನೀಡಿದ್ದರೆ, ಮತ್ತೊಂದನ್ನು ರೈಲ್ವೆ ಸ್ಟೇಷನ್‌ಗೆ ಕೊಡಲಾಗುವುದು. ಸೇವಾ ಕಾರ್ಯಗಳಿಗಾಗಿಯೇ ಇರುವ ಲಯನ್ಸ್ ಕ್ಲಬ್ ಅಗತ್ಯವುಳ್ಳ ಸಂಸ್ಥೆಗಳಿಗೆ ಸೇವಾ ನೆರವನ್ನು ನೀಡುತ್ತ ಬಂದಿದೆ. ಕ್ಲಬ್ ವತಿಯಿಂದ ಇಂದು ಲಯನ್ಸ್ ಸಂಸ್ಥೆಯ ಉಪಾಧ್ಯಕ್ಷ ನಾಗರಾಜ್ ಈಶ್ವರಪ್ಪ ನಾಯಕ್ ಅವರ ಪ್ರಾಯೋಜಕತ್ವದಲ್ಲಿ ಸಿರಿವಂತೆಯಲ್ಲಿ ನೇತ್ರ ತಪಾಸಣೆ ನಡೆಸಲಾಗಿದ್ದು, ೬೨ ಜನರಿಗೆ ಉಚಿತ ಕನ್ನಡಕ ನೀಡಲಾಗಿದ್ದು, ಮುಂದೆ ೩೧೦ ಕನ್ನಡಕ ವಿತರಿಸುವ ಯೋಜನೆಯಿದೆ ಎಂದರು.
ಲಯನ್ಸ್ ಸಂಸ್ಥೆಯ ಅಶ್ವಿನಿಕುಮಾರ್, ನಾಗರಾಜ್ ಇ., ಇ.ಡಿ.ಶ್ರೀಧರ್, ಪ್ರಭಾ ಶ್ರೀಧರ್, ವಿ.ಸಿ.ಪಾಟೀಲ್, ಸುಧೀರಕುಮಾರ್ ಶೆಟ್ಟಿ, ಗೋಮ್ಸ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಎಸ್. ಸ್ವಾಗತಿಸಿದರು. ವಿನಯಕುಮಾರ್ ಎಂ. ವಂದಿಸಿದರು.

