ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಅ.31 ರಿಂದ ನ.26ರವರೆಗೆ ಏಕತಾಯಾತ್ರೆ: ಡಿ.ಎಸ್. ಅರುಣ್

Share Below Link

ಶಿವಮೊಗ್ಗ : ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ್ ವಲ್ಲಭ ಬಾಯ್ ಪಟೇ ಲ್ ಅವರ ೧೫೦ನೇ ಜನ್ಮದಿನೋತ್ಸ ವದ ಅಂಗವಾಗಿ ಅ.೩೧ರಿಂದ ನ.೨೬ರವರೆಗೆ ಏಕತಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಹೇಳಿzರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ನಾಲ್ಕು ಬೇರೆ ಬೇರೆ ವಿಭಾಗಗಳಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳುವುದರ ಮೂಲಕ ಪಟೇಲ್ ಅವರ ಏಕತಾ ಯಾತ್ರೆಯನ್ನು ಮಾಡಲಿದ್ದೇವೆ ಎಂದರು.


ಉತ್ತಮ ಆಡಳಿತದ ಸಂಕಲ್ಪ ತೊಟ್ಟು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ (ಮಂಡಲದಲ್ಲಿ) ಜಿ ಬಿಜೆಪಿ ವತಿಯಿಂದ ವಿದ್ಯಾರ್ಥಿ ಗಳು ಮತ್ತು ಕಾರ್ಯಕರ್ತರನ್ನು ಒಳ ಗೊಂಡು ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು ಕೊಂಡು ೮ರಿಂದ ೧೦ ಕಿ.ಮೀ. ನಡಿಗೆ ಹಮ್ಮಿಕೊಂಡಿದ್ದೇವೆ. ಎಲ್ಲೂ ಬಿಜೆಪಿ ಧ್ವಜವನ್ನು ಉಪಯೋಗಿಸು ವುದಿಲ್ಲ. ದೇಶಾದ್ಯಂತ ಈ ಏಕತಾ ಯಾತ್ರೆ ನಡೆಯಲಿದ್ದು, ಶಿವಮೊಗ್ಗ ದಲ್ಲಿ ಗಿಡಗಳನ್ನು ನೆಟ್ಟು ಗೋಪೂಜೆ ಮಾಡುವುದರ ಮೂಲಕ ಪಾದ ಯಾತ್ರೆಗೆ ಚಾಲನೆ ಸಿಗಲಿದೆ. ಮೋದಿ ಯವರ ಕನಸಾದ ಆತ್ಮನಿರ್ಭರ ಭಾರತ್, ಸ್ವದೇಶಿ ಜಾಗೃತಿ ಬಗ್ಗೆ ಅರಿವು ಮೂಡಿಸುವ ಕಾರ್ಯವಾ ಗಲಿದೆ. ಸರ್ದಾರ್ ಪಟೇಲ್ ಅವರ ಜೀವನದ ಪ್ರದರ್ಶಿನಿಯನ್ನು ಕೂಡ ಹಮ್ಮಿಕೊಳ್ಳಲಾಗುವುದು. ನಶೆ ಮುಕ್ತ ಭಾರತ ಶೀರ್ಷಿಕೆಯಡಿ ಈ ಅಭಿಯಾನದಲ್ಲಿ ಅರಿವು ಮೂಡಿ ಸಲಾಗುವುದು. ರೈತರ ಚಳುವಳಿಯ ಮೂಲಕವೇ ಸರ್ದಾರ್ ಪಟೇಲ್ ಅವರು, ಬಂದ ಕಾರಣ ರೈತರಿಗೆ ಅನುಕೂಲ ವಾಗುವ ಭೂಮಿಯ ಮಣ್ಣು ಪರೀಕ್ಷೆ ಕಾರ್ಯಕ್ರಮವನ್ನು ಕೂಡ ಜೋಡಿಸಲಾಗಿದೆ ಎಂದರು.


ಏಕತಾಯಾತ್ರೆಯ ಸಮಾ ರೋಪದಲ್ಲಿ ಸರ್ದಾರ್ ಪಟೇಲ್ ಅವರ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಕೂಡ ಹಮ್ಮಿಕೊಳ್ಳ ಲಾಗಿದ್ದು, ಇಲ್ಲಿ ವಿಜೇತರಿಗೆ ರಾಜ್ಯ ಮತ್ತು ದೇಶಮಟ್ಟದಲ್ಲೂ ಅವಕಾಶ ಗಳಿವೆ. ಅಲ್ಲದೆ ಸರ್ದಾರ್ ಪಟೇಲ್ ಅವರ ಏಕತಾ ಪ್ರತಿಮೆಯ ಬಗ್ಗೆ ರೀಲ್ಸ್ ಮಾಡುವ ಸ್ಪರ್ಧೆ ಕೂಡ ಇರುತ್ತದೆ. ನಶೆಮುಕ್ತ ಭಾರತದ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯ ಕ್ರಮ ಮತ್ತು ಸ್ವದೇಶಿ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಎಬಿವಿಪಿ ಸಂಘಟನೆಯ ಸಹಕಾರದೊಂದಿಗೆ ವಿದ್ಯಾರ್ಥಿ ಗಳು ಮತ್ತು ಬಿಜೆಪಿಯ ಭೂತ್ ಮಟ್ಟ ದಿಂದ ಜಿ ಮಟ್ಟದ ಕಾರ್ಯ ಕರ್ತರು ಕೂಡ ಭಾಗವಹಿಸಲಿzರೆ. ಸ್ವಚ್ಛತಾ ಕಾರ್ಯಕ್ರಮಗಳ ಬಗ್ಗೆ ಯೂ ಅರಿವು ಮೂಡಿಸಲಾಗು ವುದು. ದೇಶ ಕಟ್ಟಿದವರನ್ನು, ದಾರ್ಶ ನಿಕರನ್ನು ಗುರುತಿಸಿ ಗೌರವಿ ಸುವ ಕೆಲಸವನ್ನು ಈ ಅಭಿಯಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಸುಮಾರು ದೇಶ ೫೬೫ ಸಂಸ್ಥಾನ ಗಳನ್ನು ಒಗ್ಗೂಡಿಸಿ ಜಮ್ಮು-ಕಾಶ್ಮೀರ, ಹೈದ್ರಾಬಾದ್ ಮತ್ತು ಜುನಾಘಡ್‌ಗಳನ್ನು ದೇಶದ ಒಕ್ಕೂಟಕ್ಕೆ ಸೇರಿಸುವಲ್ಲಿ ತನ್ನ ದೃಢ ನಿಲುವುಗಳ ಮೂಲಕ ದೇಶವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ದೇಶದ ಏಕತೆಗೆ ಅನೇಕ ಕೊಡುಗೆಗಳನ್ನು ನೀಡಿದರು. ಮೋದಿ ಸರ್ಕಾರ ಬಂದ ಮೇಲೆ ಒಂದು ಕುಟುಂಬಕ್ಕೆ ಸೀಮಿತವಾದ ಭಾರತವನ್ನು ದೇಶ ಕಟ್ಟಿದ ದಾರ್ಶ ನಿಕರನ್ನು ಗುರುತಿಸುವ ಕಾರ್‍ಯ ವಾಯಿತು.
ಪಟೇಲ್ ಅವರಿಗೆ ೪೦ ವರ್ಷ ಗಳ ನಂತರ ೧೯೯೧ರಲ್ಲಿ ಭಾರತ ರತ್ನ ನೀಡುವ ಕೆಲಸವಾ ಯಿತು. ಏಕತಾ ನಡಿಗೆ ಮಾಡಿ ೧೦ ಸಾವಿರ ಟನ್ ಕಬ್ಬಿಣವನ್ನು ಸಂಗ್ರಹಿಸಿ ಗುಜರಾತಿ ನಲ್ಲಿ ೭೯೦ ಅಡಿ ಎತ್ತರದ ಸರ್ದಾರ್ ಪಟೇಲ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿ, ಅವರ ವ್ಯಕ್ತಿತ್ವದ ಅರಿವನ್ನು ದೇಶದ ಜನರಿಗೆ ಮೂಡಿಸುವ ಕಾರ್ಯವಾಯಿತು. ಈಗ ಮತ್ತೊಮ್ಮೆ ಅವರ ೧೫೦ನೇ ವರ್ಷದ ಜನ್ಮದಿನಾಚರಣೆಯನ್ನು ಏಕತಾಯಾತ್ರೆ ಮೂಲಕ ವಿವಿಧ ಸಾಮಾಜಿಕ ಚಟುವಟಿಕೆ ಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಧ್ಯಕ್ಷ ಜಗದೀಶ್, ಜಿ ಮಹಿಳಾ ಘಟಕದ ಅಧ್ಯಕ್ಷ ಗಾಯತ್ರಿ ಮಲ್ಲಪ್ಪ, ಪ್ರಮುಖರಾದ ಮಾಲತೇಶ್, ಪದ್ಮಿನಿರಾವ್, ಹರಿಕೃಷ್ಣ, ಕುಪೇಂದ್ರ, ದರ್ಶನ್, ಸಂತೋಷ್, ಸತೀಶ್ ರಾಮಿನ ಕೊಪ್ಪ, ಸಂತೋಷ್, ಅಣ್ಣಪ್ಪ, ಚಂದ್ರಶೇಖರ್ ಇದ್ದರು.