ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಸಿಗಂಧೂರು ಸೇತುವೆ ಸೇರಿದಂತೆ ಅನೇಕ ಯೋಜನೆಗಳಲ್ಲಿ ಬಿಜೆಪಿಯವರು ಎಷ್ಟು ಹಣ ಹೊಡೆದಿzರೆಂದು ಹೇಳಲಿ:ಶಾಸಕ ಬೇಳೂರು

Share Below Link

ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪ್ರಸ್ತಾಪ ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದ್ದು. ಆದರೂ ಕಾಂಗ್ರೆಸ್ ನವರು ಈ ಯೋಜನೆಯಲ್ಲಿ ಹಣ ಹೊಡೆದಿzರೆನ್ನುವ ಕೂಗಾಟ ನಡೆದಿದೆ. ಹಾಗಾದರೆ ಈ ಹಿಂದೆ ತಾವೇ ತಂದ ಯೋಜನೆಗಳಲ್ಲಿ ಬಿಜೆಪಿಯವರು ಹಣ ಹೊಡೆದಿದ್ದರೆ ಎನ್ನುವುದನ್ನು ಬಹಿರಂಗಪಡಿಸಲಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿzರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿಚಾರದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಯೋಜನೆ ಯ ಸಾಧಕ-ಭಾದಕಗಳಬಗ್ಗೆ ಚರ್ಚೆ ಮಾಡದೆ, ಈ ಯೋಜನೆಯಲ್ಲಿ ಕಾಂಗ್ರೆಸ್‌ನವರು ಹಣ ಹೊಡೆದಿz ರೆಂದು ಗೂಬೆ ಕೂರಿಸಲಾಗುತ್ತಿದೆ. ಹಾಗಾದರೆ ಸಿಗಂಧೂರು ಸೇತುವೆ ಸೇರಿ ಅವರೇ ತಂದ ಯೋಜನೆಗಳಲ್ಲಿ ಬಿಜೆಪಿಯವರು ಎಷ್ಟು ಹಣ ಹೊಡೆದಿ zರೆಂದು ಹೇಳಲಿ ಎಂದು ಕಿಡಿಕಾರಿದರು.


ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ದೇಶದ ೨ನೇ ಅತೀ ದೊಡ್ಡ ಯೋಜನೆ. ಇದಕ್ಕೆ ಅನುಮತಿ ಕೊಟ್ಡಿದ್ದು ಕೇಂದ್ರ ಸರ್ಕಾರ. ಇಲ್ಲಿ ನಮ್ಮದೇನು ಪಾತ್ರವಿಲ್ಲ. ಯೋಜನೆಯ ಅನುಷ್ಟಾನ ಮಾತ್ರ ಕಾಂಗ್ರೆಸ್ ಸರ್ಕಾರದ ಕೆಲಸ. ಆದರೂ ಕೂಡ ಕೆಲವು ಪರಿಸರವಾದಿಗಳು, ರೈತರ ಜೊತೆಗೆ ಸೇರಿ ಬಿಜೆಪಿ ಯವರು ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿ zರೆ. ಇವರ ಹೋರಾಟಕ್ಕೆ ಮಣಿದು ಕೇಂದ್ರ ಸರ್ಕಾರ ಈ ಯೋಜನೆ ನಿಲ್ಲಿಸುವುದಾದರೆ ನಿಲ್ಲಿಸಲಿ ನಮ್ಮದೇನು ಅಭ್ಯಂತರವೇನಿಲ್ಲ ಎಂದು ಸ್ಪಷ್ಟ ಪಡಿಸಿದರು.
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಿಂದ ಅನುಕೂಲ ಆಗಲಿದೆ. ಈಗಿರುವ ೧೦೦೦ ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಗುರಿಯಿದೆ. ಇದಕ್ಕೆ ಫಾರೆಸ್ಟ್ ಹೋಗುತ್ತೆ, ಅದಾಗುತ್ತೆ ಎಂದರೆ ಹೇಗೆ? ಯಾವ ಯೋಜನೆ ಮಾಡಿದ್ರೂ ಫಾರೆಸ್ಟ್ ಹೋಗುತ್ತೆ. ಹೆzರಿ ಮಾಡಿದ್ರೆ ಫಾರೆಸ್ಟ್ ಹೋಗಲ್ವಾ? ಸುಮ್ನೆ ಕೆಟ್ಟ ಹೆಸರು ತರೋದು ಬೇಡ ಎಂದು ಗುಡುಗಿದರು.
ಸಂಸದರು ಡಬಲ್ ಗೇಮ್ ಆಡುತ್ತಿzರೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದ್ದನ್ನು ಮರೆಮಾಚಿ, ಯೋಜನೆ ಬೇಡ ಎನ್ನುತ್ತಿzರೆ. ಇದು ಕಣ್ಣೋರೆಸುವ ತಂತ್ರ. ಹಾಲಪ್ಪ ಪ್ರತಿಭಟನೆಯಲ್ಲಿ ನಿಂತುಕಾಂಗ್ರೆಸ್ ನವರು ದುಡ್ಡು ಹೊಡೆಯುತ್ತಿzರೆಂದು ಆರೋಪ ಮಾಡ್ತಾರೆ. ಈ ಹಿಂದೆ ಸಂಸದರು ತಂದ ಯೋಜನೆ ಗಳನ್ನು ದುಡ್ಡು ಹೊಡಯೋದಿಕ್ಕೆ ತಂದಿz? ಎಂದು ಪ್ರಶ್ನಿಸಿದರು.
ಶಾಸಕ ಡಾ.ಯತೀಂದ್ರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ವೈಯುಕ್ತಿಕ ಹೇಳಿಕೆ. ಅದಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ನಮ್ಮಲ್ಲಿ ಹೈಕ ಮಾಂಡ್ ಇದೆ. ಪಕ್ಷವೇ ನಿರ್ದಾರ ಮಾಡುತ್ತೆ ಎಂದರು. ನವೆಂಬರ್ ಕ್ರಾಂತಿ ಬಗ್ಗೆ ಪ್ರತಿಕ್ರಿಯೆ ನೀಡಿ, ಕ್ರಾಂತಿ ಇಲ್ಲ, ಬ್ರಾಂತಿಯೂಇಲ್ಲ ಎಲ್ಲವೂ ಸುಳ್ಳು ಎಂದರು.