ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಗುರು ಹಿರಿಯರ ಮಾರ್ಗದರ್ಶನದಿಂದ ಜೀವನದಲ್ಲಿ ಯಶಸ್ಸು…

Share Below Link

ಶಿವಮೊಗ್ಗ : ಗುರು ಹಿರಿಯರ ಮಾರ್ಗದರ್ಶನ ದಿಂದ ಉತ್ತಮ ವ್ಯಕ್ತಿತ್ವ ರೂಪಿಸಿ ಕೊಳ್ಳುವ ಜತೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ಆಚಾರ್‍ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿ ಜಡೇದ ಸಿದ್ದಪ್ಪ ಹೇಳಿದರು.
ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿ ಹಳೆಯ ವಿದ್ಯಾರ್ಥಿ ಬಳಗದ ವಾರ್ಷಿಕ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಕಾರ್ಯ ಪ್ರಶಂಶಿಸಿ ಸಮಾಜದಲ್ಲಿ ಸಿಗುವ ಸನ್ಮಾನಗಳಿಗಿಂತ ನಮ್ಮವರೇ ಮಾಡು ವ ಸನ್ಮಾನ ಹೆಚ್ಚು ಸಂತೋಷ ನೀಡುತ್ತದೆ. ಕಾಲೇಜಿನ ಪ್ರಾರಂಭದ ದಿನಗಳಲ್ಲಿ ವಿದ್ಯಾರ್ಥಿಯಾಗಿz. ಅಂದಿನ ಪ್ರಾಚಾರ್ಯ ಶ್ರೀನಿವಾಸ ಮೂರ್ತಿಗಳು ನೀಡುತ್ತಿದ್ದ ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡಿzವೆ ಎಂದು ತಿಳಿಸಿದರು.


ವಿದ್ಯಾರ್ಥಿ ಸಂಘದ ಚುನಾ ವಣೆ ಗೆದ್ದವರು ರಾಜಕೀಯಕ್ಕೆ ಬರಲು ಸಾಧ್ಯವಾಗುತ್ತಿತ್ತು. ವ್ಯಾಪಾ ರ ಕುಟುಂಬದಿಂದ ಬಂದ ನಾನು ತಂದೆ ಆಶಯದಂತೆ ಸಿಎ ಓದಿ ಟ್ಯಾಕ್ಸ್ ಪ್ರಾಕ್ಟೀಸ್ ಮಾಡುತ್ತಿzನೆ ಎಂದರು.
ಹಿರಿಯ ವಿದ್ಯಾರ್ಥಿ ವಸಂತ ಹೋಬಳಿದಾರ್ ಸನ್ಮಾನ ಸ್ವಿಕರಿಸಿ ಮಾತನಾಡಿ, ಪದವಿ ನಂತರ ಫೈನಾನ್ಸ್ ಅಡ್ವೈಸರ್ ಆಗಿ ಕಾರ್ಯ ನಿರ್ವಹಿಸುತ್ತ ವ್ಯವಹಾರ ಪ್ರಾರಂಭಿ ಸಿzನೆ. ಅದಕ್ಕೆಲ್ಲ ಕಾರಣಕರ್ತರು ನಮ್ಮ ಪ್ರಾಧ್ಯಪಕರು ನೀಡಿದ ಸಲಹೆಗಳು. ಅತ್ಯುತ್ತಮ ಜೀವನ ಸಾಗಿಸಲು ಬೇಕಾದ ಸಲಹೆ ಸೂಚನೆ ನೀಡುತ್ತಿದ್ದರು ಎಂದು ಹೇಳಿದರು.
ಸಮಾಜಮುಖಿ ಚಟುವಟಿಕೆಗ ಳಲ್ಲಿ ತೊಡಗಿಸಿಕೊಳ್ಳಲು ರೋಟರಿ ಯಲ್ಲಿ ಕಾರ್ಯನಿರ್ವಹಿಸುತ್ತಿzನೆ. ವಿಶ್ವದಲ್ಲಿ ಹನ್ನೆರಡು ಲಕ್ಷಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಸೇವಾ ಸಂಸ್ಥೆ. ನಿಯೋಜಿತ ಗವರ್ನರ್ ಆಗಿ ಆಯ್ಕೆಯಾಗಿzನೆ ಎಂದು ತಿಳಿಸಿ ದರು.
ಎಟಿಎನ್‌ಸಿಸಿ ಪ್ರಾಚಾರ್ಯೆ ಪ್ರೊ. ಮಮತಾ ಮಾತನಾಡಿ, ಉನ್ನತ ವಿದ್ಯಾಭ್ಯಾಸ ಮಾಡಲು ನಡೆ ಯುವ ಸಿಎ, ಸಿಎಸ್ ಮುಂತಾದ ಪರೀಕ್ಷೆ ತೆಗೆದುಕೊಳ್ಳಲು ದೂರದ ಊರುಗಳಿಗೆ ಹೋಗುವ ಅವಶ್ಯಕತೆ ಇಲ್ಲ. ನಮ್ಮ ಕಾಲೇಜಿನಲ್ಲಿ ಎ ಪರೀಕ್ಷಾ ಕೇಂದ್ರಗಳನ್ನು ತೆಗೆದಿzವೆ. ವಿದ್ಯಾರ್ಥಿಗಳು ಸದುಪಯೋಗಪ ಡಿಸಿಕೊಳ್ಳಬೇಕು. ಉದ್ಯೋಗ ಮೇಳ ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿzವೆ ಎಂದರು.
ಜಿ.ವಿಜಯಕುಮಾರ್, ಪ್ರೊ. ಆಶಾಲತಾ, ಅಧ್ಯಕ್ಷ ಎಸ್. ಎಸ್.ವಾಗೇಶ್, ಕಾರ್ಯದರ್ಶಿ ಶಿವಾನಂದ ಸಾನು, ನಿರ್ದೇಶಕ ಸೈಯದ್ ಅಬೂತಾಹಿರ್, ಕೇಶವಮೂರ್ತಿ, ಅಭಿಗೌಡ ಮತ್ತಿತರರು ಹಾಜರಿದ್ದರು.