ಆರೋಗ್ಯಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಆನೆಗಳ ಆರೋಗ್ಯಸ್ಥಿತಿ ಗಂಭೀರ: ಪ್ರತಿಭಟನೆ

Share Below Link

ಶಿವಮೊಗ್ಗ : ಸಕ್ಕರೆಬೈಲು ಕ್ಯಾಂಪಿನಲ್ಲಿ ಬಾಲಣ್ಣ ಸೇರಿದಂತೆ ಇತರೆ ಆನೆಗಳ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾವೇದಿಕೆ ಸಿಂಹಸೇನೆ ಇಂದು ಜಿಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಸಕ್ರೆಬೈಲು ಕ್ಯಾಂಪಿನಲ್ಲಿ ಬಾಲಣ್ಣ ಸೇರಿದಂತೆ ನಾಲ್ಕು ಆನೆಗಳ ಆರೋಗ್ಯ ಸ್ಥಿತಿ ತುಂಬಾ ಹದಗೆಟ್ಟಿದೆ. ಅದರಲ್ಲೂ ಬಾಲಣ್ಣ ಎಂಬ ಆನೆಯ ಕಿವಿ ಕೊಳೆಯುತ್ತಾ ಬಂದಿದೆ. ಮೂಕ ಪ್ರಾಣಿಗಳಿಗೆ ಈ ರೀತಿಯ ಚಿತ್ರಹಿಂಸೆ ಆಗುತ್ತಿರುವುದು ಈ ಅಧಿಕಾರಿಗಳಿಗೆ ಗೊತ್ತಿಲ್ಲವೇ? ಏಕೆ ಈ ನಿರ್ಲಕ್ಷ್ಯ ಇಲ್ಲಿನ ಅಧಿಕಾರಿಗಳಾದ ಆರ್‌ಎಫ್ ಓ ಮತ್ತು ಡಿಎಫ್‌ಓ ಗಳು ಏನು ಮಾಡುತ್ತಿzರೆ. ತಕ್ಷಣವೇ ಇವರನ್ನು ಅಮಾನತ್ತು ಮಾಡಿ, ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಾಲಣ್ಣನ ಜೊತೆಗೆ ಇತರೆ ಎರಡೂ ಆನೆಗಳಿಗೂ ಆರೋಗ್ಯಸ್ಥಿತಿ ಗಂಭೀರವಾಗಿದ್ದು, ಸಕ್ರೆಬೈಲು ಕ್ಯಾಂಪಿನಲ್ಲಿ ಚಿಕಿತ್ಸೆ ನೀಡಲು ಯಾವುದೇ ಆಸ್ಪತ್ರೆಯೂ ಇಲ್ಲ. ವೈದ್ಯರೂ ಇಲ್ಲ ಆದ್ದರಿಂದ ರಾಜ್ಯದಲ್ಲಿ ಇರುವ ತಜ್ಞ ವೈದ್ಯಾಧಿಕಾರಿಗಳನ್ನು ಕರೆಯಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜಧ್ಯಕ್ಷ ಎಂ. ರವಿಪ್ರಸಾದ್, ಜಿಧ್ಯಕ್ಷ ಮಧುಸೂದನ್, ಪ್ರಮುಖರಾದ ನಯಾಜ್, ಅಭಿಜಿತ್, ಪ್ರಶಾಂತ್, ನೂರೂಲ್ಲ, ರಾಘವೇಂದ್ರ, ವಿನಯ್, ಅರುಣ್, ಶರತ್, ವೆಂಕಟೇಶ್, ಮುಕುಂದ, ಶಶಿ, ಲಿಂಗಣ್ಣ, ರವಿಕುಮಾರ್, ಭರತ್, ಶಿವಣ್ಣ ಮುಂತಾದವರು ಇದ್ದರು.