ಕೃಷಿಯಲ್ಲಿನ ತಂತ್ರeನವು ರೈತರ ಉತ್ಪನ್ನಗಳ ಮಾರುಕಟ್ಟೆಯ ನೆರವಿಗೆ ಬರಬೇಕು….
ಶಿವಮೊಗ್ಗ : ರೈತರ ಉತ್ಪನ್ನಗಳಿಗೆ ಬೇಡಿಕೆ ಬರಬೇಕಾದರೆ ಅವುಗಳ ಉಪ ಉತ್ಪನ್ನಗಳ ತಯಾರಿಕೆಗೆ ತಂತ್ರeನ ನೆರವಾಗಬೇಕು, ಹಾಗೆಯೇ ಅವುಗಳಿಗೆ ದೊಡ್ಡ ಮಟ್ಟದ ಮಾರುಕಟ್ಟೆ ಸೃಷ್ಟಿಯಾಗಬೇಕಿದೆ ಎಂದು ಬೆಂಗಳೂರು ಕೃಷಿ ತಂತ್ರeನ ಅನ್ವಯಕ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ವಿ. ವೆಂಕಟಸುಬ್ರಮಣಿಯನ್ ಹೇಳಿದರು.
ವಿಶ್ವ ಆಹಾರದ ದಿನದ ಅಂಗವಾಗಿ ನಗರದ ನವುಲೆ ಐಸಿಎ ಆರ್ ಕೃಷಿ ವಿeನ ಕೇಂದ್ರದಲ್ಲಿ ಆಯೋಜಿಸಿದ್ದ ಆಹಾರ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ,ನೀಲಿ ಕ್ರಾಂತಿ ಬಳಿಕ ಈಗ ಸಮೃದ ಕ್ರಾಂತಿಗೆ ಕಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಿಸಾನ್ ಸಮೃದ್ದಿ ಕ್ರಾಂತಿಗೆ ಕರೆ ನೀಡಿದ್ದು, ಕೃಷಿಸಂಶೋಧನೆಗಳು ಆ ದಿಕ್ಕಿನಲ್ಲಿ ಸಾಗಬೇಕಿದೆ. ಕೃಷಿಯಲ್ಲಿನ ತಂತ್ರeನವು ರೈತರ ಉತ್ಪನ್ನಗಳ ಮಾರುಕಟ್ಟೆ ಯ ನೆರವಿಗೆ ಬರಬೇಕಿದೆ. ಆಮೂಲಕ ಕೃಷಿ ಲಾಭದಾಯಕವಾಗಬೇಕು, ಯುವಜನರು ಕೃಷಿಯತ್ತ ಮುಖ ಮಾಡಬೇಕಿದೆ ಎಂದು ಕರೆ ನೀಡಿದರು.
ಕ್ಷೀರ ಕ್ರಾಂತಿ ಮೂಲಕ ಅಮುಲ್ ಜಗತಿಕ ಪ್ರಚಾರ ಪಡೆದಿದ್ದನ್ನು ಉದಾಹರಿಸಿದ ಅವರು, ಯಾವುದೇ ಉತ್ಪನ್ನಗಳಿಗೆ ಉಪ ಉತ್ಪನ್ನಗಳ ತಯಾರಿಕೆ ಮತ್ತು ಮಾರುಕಟ್ಡೆ ಅಗತ್ಯ ಎಂದರು.
ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಹೆಚ್.ಡಿ. ದೇವಿಕುಮಾರ್ ಅವರು ಕೃಷಿ ವಿವಿ ಪರಿಚಯಿಸಿದ ಕೃಷಿ ಪ್ರವಾಸೋದ್ಯಮ ಪ್ರಚಾರ ಕರಪತ್ರ ಬಿಡುಗಡೆ ಮಾತನಾಡಿ, ಆಹಾರ ಮನುಷ್ಯನಿಗೆ ಅತ್ಯಂತ ಅಗತ್ಯ.ಆಹಾರವೇ ಇಲ್ಲದಿದ್ದರೆ ಮನುಷ್ಯ ಬದುಕುವುದು ಕಷ್ಟ. ಹಾಗಾಗಿ ಅಹಾರ ಬಳಕೆಯಲ್ಲಿ ಅರಿವು ಮುಖ್ಯ. ಅನಗತ್ಯವಾಗಿ ಆಹಾರವನ್ನು ಬೀಸಾಡುವುದು, ಹೆಚ್ಚಾಗಿ ಚೆಲ್ಲುವುದು ಸರಿಯಲ್ಲ ಎಂದರು.
ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಹೆಚ್.ಎಸ್. ಶಶಾಂಕ್, ವಿವಿ ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾನಾಯ್ಕ್, ಡೀನ್ ಡಾ. ತಿಪ್ಪೇಶ್ ಡಿ,. ಡಾ. ಜಿ.ಕೆ.ಗೀರೀಶ್ ಸೇರಿ ಹಲವರು ಇದ್ದರು. ಇದಕ್ಕೂಮುನ್ನ ಕೃಷಿ ಯಾನ-ಕೃಷಿ ಪ್ರವಾಸೋದ್ಯಮ ಕೇಂದ್ರ, ಸಹ್ಯಾದ್ರಿ ಆಹಾರ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಲಾಯಿತು.
