ಉಡುಪಿ ಕೃಷ್ಣ ಮಠದಲ್ಲಿ ಸುರೇಖಾ ಹೆಗಡೆ ಗಾಯನ…
ಶಿವಮೊಗ್ಗ : ಉಡುಪಿಯ ಶ್ರೀ ಕೃಷ್ಣ ಮಠದ ಮಧ್ವ ಮಂಟಪದಲ್ಲಿ ಇತ್ತೀಚೆಗೆ ಮಠದ ಆಹ್ವಾನದ ಮೇರೆಗೆ ಶಿವಮೊಗ್ಗದ ಪ್ರಖ್ಯಾತ ಸುಗಮ ಸಂಗೀತ ಗಾಯಕಿ ಶ್ರೀಮತಿ ಸುರೇಖಾ ಹೆಗಡೆ ಮತ್ತು ತಂಡ ದಿಂದ ದಾಸರ ಪದಗಳು, ಮರಾಠಿ ಅಭಂಗ್, ಹಿಂದಿ ಭಜನ್ಸ್ ಒಳಗೊಂಡ ದಾಸವಾಣಿ ಕಾರ್ಯಕ್ರಮ ನಡೆಯಿತು.
ಎರಡು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆಯಿತು. ಸುರೇಖಾ ಹೆಗಡೆ ಗಾಯನಕ್ಕೆ ಪಂ. ತುಕಾರಾಂ ರಂಗಧೋಳ್ ತಬಲದಲ್ಲಿ, ವಿಠಲ್ ರಂಗಧೋಳ್ ಹಾರ್ಮೋನಿಯಂ ನಲ್ಲಿ ಹಾಗೂ ಸಹ ಗಾಯನದಲ್ಲಿ ಶ್ರೀಮತಿ ಕಲಾವತಿ ಸಹಕರಿಸಿದರು.
ನೂರಾರು ಜನ ಸಂಗೀತಾಸಕ್ತರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ನಂತರ, ಪುತ್ತಿಗೆ ಶ್ರೀಗಳು ಕಾರ್ಯಕ್ರಮ ನೀಡಿದ ಸಂಗೀತಗಾರರನ್ನು ಆಶೀರ್ವಾದಿಸಿದರು.
