ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೇಂದ್ರ ಹಿಂದಿ ಸಲಹಾ ಮಂಡಳಿ ಸದಸ್ಯರಾಗಿ ಡಾ. ಸರೋಜ …

Share Below Link

ಶಿವಮೊಗ್ಗ : ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆಯ ಕೇಂದ್ರ ಹಿಂದಿ ಸಲಹಾ ಮಂಡಳಿಯ ಸದಸ್ಯರಾಗಿ ಶಿವಮೊಗ್ಗದ ನಿವೃತ್ತಿ ಪ್ರಾಂಶುಪಾಲೆ ಡಾ.ಜಿ.ಎಸ್. ಸರೋಜ ಅವರನ್ನು ನೇಮಕ ಮಾಡಲಾಗಿದೆ.
ಈ ನೇಮಕವು ಮೂರು ವರ್ಷದ ಅವಧಿಯವರೆಗೂ ಇದ್ದು, ಕೇಂದ್ರದ ಗೃಹಮಂತ್ರಿಗಳು ಈ ನೇಮಕಾತಿಯನ್ನು ಅನುಮೋದಿಸಿ zರೆ.
ಡಾ.ಜಿ.ಎಸ್. ಸರೋಜ ಅವರು ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಪದವಿಪೂರ್ವ ಕಾಲೇಜಿನಲ್ಲಿ ಉಪಪ್ರಾಂಶುಪಾಲ ರಾಗಿ ಕಾರ್ಯನಿರ್ವಹಿಸಿ, ನಿವೃತ್ತಿಯಾಗಿzರೆ.
ಸುಮಾರು ೪೦ ವರ್ಷಗಳಿಂದ ಹಿಂದಿಯೇತರ ಮಾತನಾಡುವ ರಾಜ್ಯಗಳಲ್ಲಿ ಅಧಿಕೃತ ಭಾಷೆ ಹಿಂದಿ ಮತ್ತು ದೇವನಾಗರಿ ಲಿಪಿಯ ಪ್ರಚಾರ ಮತ್ತು ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿ zರೆ. ಹಲವು ಕೃತಿಗಳನ್ನು ರಚಿಸಿರುವ ಇವರು ಅನುವಾದ ವನ್ನು ಕೂಡ ಮಾಡಿzರೆ. ಪ್ರಾದೇಶಿಕ ಸಾಹಿತ್ಯ ಸಂಸ್ಥೆಗಳು ಮತ್ತು ಹಲವಾರು ರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿ zರೆ. ಅಖಿಲ ಭಾರತ ಕಾವ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯಾಗಿzರೆ. ಕರ್ನಾಟಕ ರಾಜ್ಯ ಉಸ್ತುವಾರಿಯಾಗಿzರೆ. ಇವರಿಗೆ ೧೩ ರಾಜ್ಯಗಳಲ್ಲಿ ಪ್ರಶಸ್ತಿಗಳು ಲಭಿಸಿವೆ. ಜೊತೆಗೆ ಅಂತರಾಷ್ಟ್ರೀಯ ಪ್ರಶಸ್ತಿಗಳು ಕೂಡ ಬಂದಿವೆ.
ಅಭಿನಂದನೆ: ಕೇಂದ್ರ ಹಿಂದಿ ಸಲಹಾ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ಡಾ. ಸರೋಜಾ ಅವರಿಗೆ ಸಂಸದ ಬಿವೈಆರ್ ಅಭಿನಂದಿಸಿದ್ದಾರೆ.