ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಮುಸ್ಲಿಂ ತುಷ್ಟೀಕರಣ: ಶಾಸಕ ಚನ್ನಬಸಪ್ಪ
ಶಿವಮೊಗ್ಗ : ಸಿಎಂ ಸಿದ್ದಾರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಸರ್ಕಾರವಾಗಿ ಪರಿವರ್ತನೆ ಆಗುತ್ತಿದ್ದು, ಸಂವಿಧಾನದ ಹಕ್ಕುಗಳನ್ನೇ ಉಲ್ಲಂಘಿಸಿ, ತುಷ್ಟೀಕರಣದ ಅತಿರೇಖಕ್ಕೆ ಮುನ್ನಡಿ ಬರೆದಿದೆ. ಕೇವಲ ಮುಸ್ಲೀಂ ಯುವಕರಿಗೆ ಪೊಲೀಸ್ ಟ್ರೈನಿಂಗ್ ನಡೆಸುತ್ತಿದೆ. ಇದಕ್ಕೆ ಹಿಂದೂ ಸಮಾಜದ ಧಿಕ್ಕಾರವಿದೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಕಿಡಿಕಾರಿzರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಪರವಾದ ರಾಜ್ಯ ಸರ್ಕಾರದ ಧೋರಣೆಗಳನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರದ ಕಾರ್ಯಕ್ರಮಗಳು ಈ ಮುಂಚೆ ನಾಡಗೀತೆ, ವಂದೇ ಮಾತರಂ ಗೀತೆಗಳ ಮೂಲಕ ಶುರುವಾಗುವ ಪರಿಪಾಠ ಇತ್ತು. ಆದರೆ ಈಗ ಸರ್ಕಾರಿ ಕಾರ್ಯಕ್ರಮಗಳು ಕುರಾನ್ ಪಠಣದ ಮೂಲಕ ಶುರು ವಾಗುತ್ತಿದೆ. ಇಂತಹ ಕೆಟ್ಟ ಪರಿಪಾಠಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಾಂದಿ ಹಾಡಿzರೆ. ಇದು ಅತ್ಯಂತ ಖಂಡನೀಯವಾಗಿದ್ದು. ಮಾತೆತ್ತಿದ್ದರೆ ಪ್ರಧಾನಿ ಮೋದಿ ಅವರನ್ನು ಟೀಕಿಸಿ, ಭೋದನೆ ಮಾಡುವ ಮಹಾಪುರುಷ ಸಂತೋಷ್ ಲಾಡ್, ಸಂವಿಧಾನ ವಿರೋಧಿ ಕ್ರಮಕ್ಕೆ ಚಾಲನೆ ಕೊಟ್ಟಿzರೆ. ಇದಕ್ಕೆ ಹಿಂದೂ ಸಮಾಜ ಧಿಕ್ಕಾರ ಹೇಳುತ್ತದೆ ಎಂದು ಗುಡುಗಿದರು.
ಒಂದೆಡೆ ಸಚಿವ ಸಂತೋಷ್ ಲಾಡ್ ಅವರ ಮುಸ್ಲೀಂ ತುಷ್ಟೀಕರಣದ ಕಥೆ ಇದಾದರೆ, ಇನ್ನು ಸರ್ಕಾರ ತುಷ್ಟೀಕರಣ ನೀತಿಗೆ ಇನ್ನಷ್ಟು ಇಂಬು ನೀಡಿ, ಮುಸ್ಲೀಂ ಸಮಾಜದವರಿಗೆ ಇನ್ನಷ್ಟು ಸೌಲಭ್ಯ ಗಳನ್ನು ನೀಡುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜದ ಯುವಜನರಿಗೆ ಕಾಲೇಜುಗಳ ಕೊರತೆ ಇzಗ್ಯೂ ಮುಸ್ಲೀಂ ಬಾಲಕಿಯರಿಗೆ ಪ್ರತ್ಯೇಕ ಕಾಲೇಜು ಗಳನ್ನು ತೆರೆಯುವ ಯೋಚನೆ ಮಾಡುತ್ತದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಸ್ಲೀಂ ಯುವ ಜನರಿಗೆ ಅನುಕೂಲ ಮಾಡಿಕೊಡಲು ಸಬ್ ಇನ್ಸೆಪೆಕ್ಟರ್ ಹುz ಗಳಿಗೆ ನೇಮಕಾತಿಗೆ ತರಬೇತಿ ನೀಡಲಾಗುತ್ತಿದೆ. ಈ ರೀತಿ ತಾರಾತಮ್ಯ ಯಾಕೆ ಎಂದು ಪ್ರಶ್ನಿಸಿದರು.
ಮುಸ್ಲೀಂ ಸಮಾಜವೇನು ಪ್ರತ್ಯೇಕವಾಗಿಲ್ಲ, ಒಬಿಸಿಯಲ್ಲೂ ಅವರಿಗೆ ಅವಕಾಶವಿದೆ. ವಿವಿಧ ವಿಭಾಗಗಳಲ್ಲೂ ಅವರಿಗೆ ನೇಮ ಕಾತಿ ಅವಕಾಶವಿದೆ. ಹೀಗಿದ್ದೂ ಅವರಿಗೆ ಪ್ರತ್ಯೇಕ ಅನುದಾನದ ಮೂಲಕ ತರಬೇತಿ ನೀಡುವು ದೇಕೆ? ಇವತ್ತು ದೇಶವನ್ನು ವಿದ್ವಂಸ ಗೊಳಿಸುವ ಅಪರಾಧ ಕೃತ್ಯಗಳಲ್ಲಿ ಮುಸ್ಲಿಂ ಸಮಾಜದ ಯುವಕರೇ ಹೆಚ್ಚಾಗಿರುವುದನ್ನು ಕ್ರೈಮ್ ಬ್ಯೂರೋ ಅಂಕೆ ಸಂಖ್ಯೆಗಳೇ ಹೇಳುತ್ತಿವೆ. ಹೀಗಿದ್ದೂ ಮುಸ್ಲೀಂ ಯುವಕರಿಗೆ ಹೆಚ್ಚು ಆದ್ಯತೆ ನೀಡುತ್ತೀರಿ, ಇದರ ಉzಶ ವೇನು? ಒಂದು ರೀತಿ ಮುಸ್ಲಿಂ ಯುವಕರ ಕಾನೂನುಬಾಹಿರ ಚಟುವಟಿಕೆಗಳಿಗೆ ಕಾನೂನಾತ್ಮಕ ಅವಕಾಶ ನೀಡುವ ಹುನ್ನಾರ ಇದರ ಹಿಂದೆ ಇದೆಯಾ ಎಂದು ಗಂಭೀರ ಆರೋಪ ಮಾಡಿದರು.
ಇದು ದೇಶದ ಭದ್ರತೆಯ ಪ್ರಶ್ನೆ. ಇಲ್ಲಿ ಹುಡುಗಾಟಿಕೆ ಮಾಡಬೇಡಿ, ವಿಧ್ವಂಸಕ ಕೃತ್ಯ ಮನಸ್ಥಿತಿಗೆ ಬೆಂಬಲ ನೀಡಬೇಡಿ, ಈ ಬಗೆಯ ತುಷ್ಟೀಕರಣದಿಂದಲೇ ದೇಶವನ್ನೇ ಇಬ್ಬಾಗ ಮಾಡಲಾಗಿದೆ. ಇನ್ನೇಷ್ಟು ಅವರಿಗೆ ಅವಕಾಶ ಕೊಡುತ್ತೀರಿ? ಕಾಂಗ್ರೆಸ್ ಮನಸ್ಥಿತಿಯೇ ದೇಶವನ್ನು ಒಡೆಯುವುದಾಗಿದೆ. ಅವರದು ವೋಟ್ ಬ್ಯಾಂಕ್ ರಾಜಕಾರಣ. ಇದಕ್ಕೆ ಹಿಂದೂಸಮಾಜದ ಧಿಕ್ಕಾರವಿದೆ ಎಂದರು.
೨೦೨೪ರ ಒಂಭತ್ತು ತಿಂಗಳಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಗಲಭೆ, ವಂಚನೆಗಳು ಒಟ್ಟು ೧.೫೪, ೧೫೭ ಪ್ರಕರಣಗಳು ದಾಖಲಾದರೆ, ೨೦೨೫ರ ಎಂಟು ತಿಂಗಳಲ್ಲಿ ೮೪, ೩೮೬ ಪ್ತಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಗೂಂಡಾ ರಾಜ್ಯ ವಿದೆಯೇ ಎನ್ನುವ ಆತಂಕವಿದೆ. ಈ ಬಗ್ಗೆ ಗೃಹ ಸಚಿವರನ್ನು ಕೇಳಿದರೆ ಎ ಒಂದು ನಡೆದ ಘಟನೆ ಹೇಳುತ್ತೀರಿ ಎಂದು ಉಡಾಪೆಯ ಉತ್ತರ ನೀಡುತ್ತಾರೆಂದು ಗುಡುಗಿದರು.
ರಾಜ್ಯದಲ್ಲೂ ಐ ಲವ್ ಮೊಹಮ್ಮದ್ ಕೃತ್ಯನಡೆದಿದೆ. ಕೆಲವು ಮುಸ್ಲಿಂ ಅಂತರಿಕ ಭಯೋತ್ಪಾದಕರು, ಇದನ್ನು ಶುರು ಮಾಡಿzರೆ. ಉತ್ತರ ಪ್ರದೇಶದ ಮಲನಾ ತೌಫಿಕ್ ರಾಹ್ ಖಾನ್ ಎಂಬಾತ, ಈ ರೀತಿಯ ಕೇತ್ಯಕ್ಕೆ ಸೂತ್ರದಾರನಾಗಿದ್ದು, ಬೆಳಗಾವಿ, ಮೈಸೂರಿನಲ್ಲಿ ಈ ಪ್ರಕರಣಗಳ ಬಯಲಾಗಿವೆ.ಇದರ ನಡುವೆ ಬೆಳಗಾವಿಯ ಮುಸ್ಲಿಂ ಯುವಕರಿಗೆ ಪೊಲೀಸ್ ಸಬ್ ಇನ್ಸೆಪೆಕ್ಟರ್ ಹುzಗಳ ನೇಮಕಾತಿಯ ತರಬೇತಿ ನಡೆದಿದ್ದು ಗುಮಾನಿ ಹುಟ್ಟಿಸಿದೆ. ಈ ಕೃತ್ಯಗಳಿಗೆ ಆಮ್ ಆದ್ಮಿ ಪಕ್ಷ, ಎಸ್ಡಿಪಿಐ ಪಕ್ಷದ ಕುಮ್ಮಕ್ಕು ಇದೆ ಎಂದು ಗಂಭೀರ ಆರೋಪ ಮಾಡಿದರಲ್ಲದೇ, ಐ ಲವ್ ಮೊಹಮ್ಮದ್ ಕೃತ್ಯಕ್ಕೆ ಬೆಂಬಲಿಸುವ ಮುಸ್ಲಿಂ ಸಮಾಜ ತಾಕತ್ತಿದ್ದರೆ ತಮ್ಮ ಅಂಗಡಿ ಮುಂಗಟ್ಟುಗಳ ಮೇಲೆ ಐ ಲವ್ ಮೊಹಮ್ಮದ್ ಎಂದು ನಾಮಫಲಕ ಹಾಕಿಕೊಂಡು ವ್ಯಾಪಾರ ಮಾಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಮುಖಂಡರಾದ ಎಸ್. ಜನೇಶ್ವರ್, ದೀನ್ ದಯಾಳ್, ಶ್ರೀನಾಗ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
