ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ರಸ್ತೆ ಬದಿ ಇಟ್ಟ ಅನುಪಯುಕ್ತ ಪೈಪ್ ತೆರವಿಗೆ ಆಗ್ರಹ….

Share Below Link

ಭದ್ರಾವತಿ : ಅಧಿಕಾರಿಗಳ ನಿರ್ಲಕ್ಷದಿಂದ ನಗರ ದಲ್ಲಿ ಸಾರ್ವಜನಿಕರು ತೊಂದರೆಗೆ ಒಳಪಡುತ್ತಿರುವ ಘಟನೆಗಳು ಮುಂದುವರೆದಿದೆ.
ಸಿದ್ಧಾರೂಢ ನಗರದಿಂದ ಮುಖ್ಯಬಸ್ ನಿಲ್ದಾಣದವರೆಗೆ ಸಾಗುವ ದಾರಿಯಲ್ಲಿ ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿಭಾಯಿಸಲು ನಿರ್ಮಿಸಿರುವ ಮುಳುಗು ಸೇತುವೆ (ಹೊಸ ಸೇತುವೆ) ಇಕ್ಕೆಲಗಳಲ್ಲಿ ಕಬ್ಬಿಣದ ಪೈಪುಗಳು ಸೇತುವೆ ಪಕ್ಕ ಬಿದ್ದಿದ್ದು ಇದರಿಂದಾಗಿ ವಾಹನ ಸಂಚಾರಕ್ಕೆ ಹಾಗೂ ಪಾದಾಚಾರಿಗಳ ಓಡಾಟಕ್ಕೆ ಅತೀವ ತೊಂದರೆಯಾಗುತ್ತಿದ್ದು ಸಂಬಂಧಿಸಿದ ಇಲಾಖೆಗಳಿಗೆ ಅನೇಕ ಬಾರಿ ನಾಗರೀಕರು ಹಾಗೂ ಸ್ಥಳದ ನಿವಾಸಿಗಳು ದೂರನ್ನು ನೀಡಿದರೂ ತಮಗೆ ಸಂಬಂಧವಿಲ್ಲವೇನೋ ಎಂದು ನಿರ್ಲಕ್ಷ ಭಾವನೆಯನ್ನು ಇಲ್ಲಿನ ಅಧಿಕಾರಿ ವರ್ಗ ತೋರುತ್ತಿರುವುದು ವಿಷಾದನೀಯ ಎಂದು ಸಿದ್ಧಾರೂಢ ನಗರದ ನಿವಾಸಿಗಳ ಆರೋಪವಾಗಿದೆ.
ಇದಕ್ಕೆ ತಾಜ ಉದಾಹರಣೆ ಎಂದರೇ ಬುಧವಾರ ಎದುರಿನಿಂದ ಬರುತ್ತಿದ್ದ ಸರ್ಕಾರಿ ಬಸ್‌ಗೆ ಜಗ ಬಿಡಲು ಹೋದ ಸ್ವಿಫ್ಟ್ ಕಾರು ಸೇತುವೆ ಮೇಲೆ ನಿರುಪಯುಕ್ತ ವಾಗಿಟ್ಟಿರುವ ೨೦ ಅಡಿಯ ಪೈಪ್‌ಗೆ ಜಗವಿಲ್ಲದೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರಿಗೆ ಹಾನಿಯಾಗಿದೆ. ಈಗಲಾದರು ಸಂಬಂಧಿಸಿದ ಇಲಾಖೆ ಗಮನಹರಿಸುವುದೇ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಇತ್ತೀಚೆಗೆ ತಾಲೂಕಿನ ಸಿಂಗನಮನೆ ಗ್ರಾ. ಪಂ. ಕಚೇರಿಯ ಮುಂದಿನ ರಸ್ತೆಯ ಗುಂಡಿಯ ಅವಾಂತರ ಸಾಮಾಜಿಕ ಜಲತಾಣ ಗಳಲ್ಲಿ ರಾರಾಜಿಸುತ್ತಿರುವ ಬೆನ್ನ ನಗರದ ಹೃದಯಭಾಗದಲ್ಲಿರುವ ಸೇತುವೆಯಲ್ಲಿ ಬಿದ್ದಿರುವ ಕಬ್ಬಿಣದ ಪೈಪ್‌ನಿಂದ ಅಪಘಾತ ಸಂಭವಿಸುತ್ತಿದ್ದರೂ ನಗರಸಭೆ ಅಧಿಕಾರಿಗಳು ನಮಗೆ ಸಂಬಂಧವಿಲ್ಲ ವೆಂಬಂತೆ ಓಡಾಡುತ್ತಿzರೆ. ಹೆಚ್ಚಿನ ಮಳೆಯಿಂದಾಗಿ ಭದ್ರನದಿಯಲ್ಲಿ ಅಧಿಕ ನೀರು ಹರಿದು ಬಂದ ಪರಿಣಾಮ ೨೦ ಅಡಿಯ ಪೈಪ್ ಕಿತ್ತುಕೊಂಡು ಬಂದು ಬಹಳದಿನ ದಿಂದ ಸೇತುವೆ ಮೇಲೆ ಇರಿಸಲಾ ಗಿದೆ. ಪೈಪ್ ಗಳನ್ನು ಯಾವ ಕಾರಣಕ್ಕೆ ಇಡಲಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅನೇಕ ದಿನಗಳಿಂದ ಈ ಪೈಪ್ ವಾಹನ ಸಂಚಾರಕ್ಕೆ ತೊಡಕುಂಟಾಗುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿಕೊಂಡಿ ರುವುದು ಈ ಎ ಸಮಸ್ಯೆಗೆ ಕಾರಣವಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.