ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಚಳುವಳಿಗಳನ್ನು ರೂಪಿಸಿದ ಕೀರ್ತಿ ಸಹ್ಯಾದ್ರಿ ಕಾಲೇಜ್‌ಗಿದೆ…

Share Below Link

ಶಿವಮೊಗ್ಗ : ಬಡವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ವಾತಂತ್ರ್ಯ, ಸೌಹಾರ್ದತೆಯನ್ನು ಕಲಿಸಿದ ಕೀರ್ತಿ ಸಹ್ಯಾದ್ರಿ ಕಾಲೇಜ್‌ಗೆ ಇದೆ ಎಂದು ಚಿಂತಕ ಹಾಗೂ ಕುವೆಂಪು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.
ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜು ಅಧ್ಯಾಪಕರ ಸಂಘ, ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಆಶ್ರಯ ದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಪ್ರಾಧ್ಯಾಪಕರುಗಳಿಗೆ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಪರಸ್ಪರ ಸಂಬಂಧಗಳು ಶಿಥಿಲ ಗೊಳ್ಳುತ್ತಿರುವ ಇಂತಹ ಸಂದರ್ಭ ದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಒಂದು ಉತ್ತಮ ಕಾರ್ಯಕ್ರಮ ವನ್ನು ರೂಪಿಸಿದೆ. ಕಾಲೇಜಿನ ನೆನಪುಗಳನ್ನು ಮತ್ತೆ ಮರುಕಳಿಸು ವಂತೆ ಮಾಡಿದೆ. ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ದೊಡ್ಡ ಪರಂಪರ ಇದೆ. ಇಲ್ಲಿ ಓದುವುದೇ ಭಾಗ್ಯ ಎಂಬ ಭಾವನೆ ಇತ್ತು. ಸಹ್ಯಾದ್ರಿ ಕಾಲೇಜು ವಿಶ್ವಾಸದ ಪ್ರತೀಕವಾಗಿತ್ತು ಎಂದರು.
ಕಲಿಕೆಯನ್ನು ಶ್ರೀಮಂತ ಗೊಳಿಸಿದ ಕೀರ್ತೀ ಈ ಕಾಲೇಜಿಗದೆ. ಇದು ಸೌಹಾರ್ದತೆಯ ತವರೂರು. ಇಲ್ಲಿಂದಲೇ ಚಳುವಳಿಗಳು ಆರಂಭ ವಾಗಿದ್ದವು. ಮತೀಯ ಗಲಾಟೆ ಗಳನ್ನು ಇ ನಿಬಂಧಿಸಲಾ ಗುತ್ತಿತ್ತು. ವಿದ್ಯಾರ್ಥಿ ಸಂಘದ ಚುನಾವಣೆ ಎಂದರೆ ಅದೊಂದು ದೊಡ್ಡ ಇತಿಹಾಸವನ್ನೇ ಹೊಂದಿತ್ತು. ಎ ಭಿನ್ನಾಭಿಪ್ರಾಯಗಳು ಇದ್ದರೂ ಕೂಡ ಅದರ ಆಚೆಗೆ ಪ್ರೀತಿ ಪ್ರೇಮವನ್ನು ಭಾವನೆಗಳನ್ನು ಕಲಿಸಿದ್ದು, ಈ ಕಾಲೇಜು ಎಂದರು.
ಮುಖ್ಯವಾಗಿ ಬಡವಿದ್ಯಾರ್ಥಿ ಗಳೇ ಇಲ್ಲಿ ಹೆಚ್ಚು ಓದಿದವರು. ಅವರಿಗೆ ಗೌರವವನ್ನು ಕಲಿಸಿದ ಬದುಕನ್ನು ಕೊಟ್ಟ, ಆತ್ಮವಿಶ್ವಾಸವನ್ನು ಹೆಚ್ಚಿಸಿದ, eನದ ಅರಿವನ್ನು ವಿಸ್ತರಿಸಿದ ಜಗವಿದು. ಇಲ್ಲಿ ನಾವು ಪಾಠ ಮಾಡಿzವೆ ಎಂಬುವುದೇ ನಮಗೆ ಹೆಮ್ಮೆ, ಅಷ್ಟೇಕೆ ಸಹ್ಯಾದ್ರಿ ಕಾಲೇಜು ನನಗೆ ಕನ್ನಡ ಸಾಹಿತ್ಯ ವನ್ನು ರೂಪಿಸಿಕೊಟ್ಟಿದೆ. ಇಂಗ್ಲಿಷ್ ಪ್ರಾಧ್ಯಾಪಕನಾದ ನಾನು ಕನ್ನಡ ಲೇಖಕನಾಗಿದ್ದು ಈ ಕಾಲೇಜಿನಿಂದ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಾಜಿ ಸಂಸದ ಆಯನೂರು ಮಂಜುನಾಥ್ ಶಿಕ್ಷಣ ಶುದ್ಧವಾಗಿರಬೇಕು. ಆದರೆ ಇಂದು ಶಿಕ್ಷಣ ಕ್ಷೇತ್ರವೇ ವಿಚಿತ್ರ ಹಾದಿಯನ್ನು ತುಳಿಯುತ್ತಿದೆ. ಆಗಾಗಬಾರದು. ಸಹ್ಯಾದ್ರಿ ಕಾಲೇಜಿನ ಪರಂಪರೆ ಉಳಿಯಬೇಕು. ಇದು ನಮ್ಮತನ ವನ್ನು ರೂಪಿಸಿದ ಕಾಲೇಜು, ಈ ಕಾಲೇಜಿನಲ್ಲಿ ಓದಿದವರು ಇಂದು ಅತಿದೊಡ್ಡ ವ್ಯಕ್ತಿಗಳಾಗಿ ರೂಪುಗೊಂಡಿzರೆ. ನ್ಯಾಯಾಧೀಶರು, ಪೊಲೀಸ್ ಅಧಿಕಾರಿಗಳು ತಮ್ಮ ಪ್ರತಿಷ್ಠೆಯನ್ನು ಮರೆತು ಸರಳವಾಗಿ ನಮ್ಮ ಮುಂದೆಯೇ ಕುಳಿತಿzರೆ. ಇದೇ ಈ ಕಾಲೇಜಿನ ಶಕ್ತಿ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಹಾಗೂ ದ.ಸಂ.ಸ. ರಾಜ್ಯ ಸಂಚಾಲಕ ಎಂ. ಗುರುಮೂರ್ತಿ, ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಚಳುವಳಿಗಳನ್ನು ರೂಪಿಸಿದ ಕೀರ್ತಿ ಈ ಕಾಲೇಜಿಗಿದೆ. ಆದರೆ ಇಂದು ಈ ಕಾಲೇಜಿನ ಭೂಮಿಯನ್ನೇ ಕಬಳಿಸುವ ಯತ್ನಗಳು ನಡೆಯುತ್ತಿವೆ. ಅದಕ್ಕೆ ಅವಕಾಶವನ್ನು ಕೊಡುವುದಿಲ್ಲ ಎಂದರು.
೧೦೦ ಎಕರೆ ಇದ್ದ ಸಹ್ಯಾದ್ರಿ ಕ್ಯಾಂಪಸ್‌ನ ಜಗ ಈಗ ೭೬.೪ಕ್ಕೆ ಇಳಿದಿದೆ. ಇದರಲ್ಲೂ ಸುಮಾರು ೭೫ ಎಕರೆ ಜಗವನ್ನು ಬೇರೆ ಬೇರೆ ಉಪಯೋಗಕ್ಕೆ ಬಳಸಿಕೊಳ್ಳುವ ಯತ್ನ ನಡೆದಿತ್ತು. ನಮ್ಮ ಹೋರಾಟ ದಿಂದ ಅದು ಉಳಿದಿದೆ. ಸಹ್ಯಾದ್ರಿ ಕಾಲೇಜಿನ ಭೂಮಿಯನ್ನು ಪರಾಭವ ಮಾಡಲು ಬಿಡುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಾಗಿ ವಿವಿಧ ಹುzಗಳಲ್ಲಿ ಕೆಲಸ ನಿರ್ವಹಿಸುತ್ತಿ ರುವ ಹಾಗೂ ನಿವೃತ್ತ ಪ್ರಾಧ್ಯಾಪಕರು ಗಳನ್ನು ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಎಸ್.ಸಿರಾಜ್ ಅಹಮ್ಮದ್ ವಹಿಸಿದ್ದರು.
ಸಹ್ಯಾದ್ರಿ ಕಲಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕ ಕೆ.ಎನ್. ಮಂಜುನಾಥ್, ಸ್ವಾಗತಿಸಿದರು. ಅಧ್ಯಾಪಕರ ಸಂಘದ ಅಧ್ಯಕ್ಷ ಎಂ.ಹೆಚ್. ಪ್ರಹ್ಲಾದ್‌ಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಕೆ.ಪ್ರಸನ್ನಕುಮಾರ್ ಆಶಯ ನುಡಿಗಳನ್ನಾಡಿದರು. ಡಾ.ಹಾಲಮ್ಮ ಕಾರ್ಯಕ್ರಮ ನಿರೂಪಿಸಿದರು.