ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಅ. 12: ಪ್ರೊ| ಚನ್ನೇಶ್ ಅವರ ಮೂರು ಪುಸ್ತಕಗಳ ಬಿಡುಗಡೆ…

Share Below Link

ಶಿವಮೊಗ್ಗ : ಹೊಂಗಿರಣ ವತಿಯಿಂದ ಅ.೧೨ ರ ಬೆಳಗ್ಗೆ ೧೦.೩೦ಕ್ಕೆ ಆರ್‌ಟಿಓ ರಸ್ತೆಯ ಪತ್ರಿಕಾ ಭವನದಲ್ಲಿ ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಚನ್ನೇಶ್ ಹೊನ್ನಾಳಿ ಅವರ ಮೂರು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಅರಿವಿನ ಬೆಳಕು , ಗಾಂಧಿಚರಿತ ಮತ್ತು ಸ್ವಾಗತ, ಕಾವ್ಯ ಮಡಿಕೆ ಪುಸ್ತಕಗಳನ್ನು ಖ್ಯಾತ ಲೇಖಕರಾದ ನಾಡೋಜ ಕುಂ. ವೀರಭದ್ರಪ್ಪ ಅವರು ಬಿಡುಗಡೆ ಮಾಡಲಿzರೆ ಎಂದು ಪ್ರೊ. ಅವನ್ನೇ ಹೊನ್ನಾಳಿ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರಿವಿನ ಬೆಳಕು ಇದು ನನ್ನ ಸ್ವತಂತ್ರ ವಿಮರ್ಶಾ ಕೃತಿಯಾಗಿದೆ. ಇದರಲ್ಲಿ ನಾಲ್ಕು ಭಾಗಗಳಲ್ಲಿ ೩೩ ಲೇಖನಗಳಿವೆ. ೧೯೯೨ರಿಂದ ರವರೆಗೆ ೨೦೨೪ರ ವರೆಗೆ ಬರೆದ ವಡ್ಡಾರಾಧನೆ, ಪಂಪ ಭಾರತ, ಶರಣ ಚಳವಳಿ, ಹೊಸಗನ್ನಡ ಸಾಹಿತ್ಯ,ಹಸ್ತ ಪ್ರತಿ ಶಾಸ್ತ್ರಿ, ಕೆ.ವಿ. ಸುಬ್ಬಣ್ಣ ರಂಗಭೂಮಿ ಸೇರಿದಂತೆ, ಅನೇಕ ಲೇಖನಗಳಿವೆ ಎಂದರು.
ಗಾಂಧಿಚರಿತ ಮತ್ತು ಸ್ವಾಗತ ಗೀತ ಇದು ಸಂಗ್ರಹ ಮತ್ತು ಸಂಪಾದನೆಯ ಕೃತಿಯಾಗಿದೆ. ಇದರ ಮೊದಲನೇ ಭಾಗವು ಹತ್ತೂರು ಪಂಡಿತ, ಬಿ.ಎಸ್. ಭರ್ಮೇಗವಗಡರು ಮಹಾತ್ಮ ಗಾಂಧಿಯವರನ್ನು ಕುರಿತು ಭಾಮಿನಿ ಷಟ್ಪದಿಯಲ್ಲಿ ಬರೆದ ಖಂಡ ಕಾವ್ಯವಾಗಿದ್ದು, ಎರಡನೇ ಭಾಗದಲ್ಲಿ ಸ್ವಾಗತ ಗೀತೆ, ಸುಖಾ ಗಮನ ಪದ್ಯಗಳು ಇವೆ ಎಂದರು.
ಕಾವ್ಯ ಮಡಿಕೆ ಇದು ಸಂಗ್ರಹ ಮತ್ತು ಸಂಪಾದನೆಯ ಕೃತಿಯಾ ಗಿದ್ದು ಹೊನ್ನಾಳಿ ಆಶು ಕವಿ ಕುಂಬಾರ ಜಿ. ಪರ್ವತ ಮಲ್ಲಪ್ಪನವರ ಸಮಗ್ರ ಕಾವ್ಯ ವಾಗಿದ್ದು, ಇದರಲ್ಲಿ ಶ್ರದ್ಧಾಂಜಲಿ, ಭಿನ್ನವತ್ತಳೆ ಇತ್ಯಾದಿ ನಾಲ್ಕು ಭಾಗಗಳಿವೆ. ಈ ಮೇಲಿನ ಇಬ್ಬರೂ ಕೂಡ ಹೊನ್ನಾಳಿ ತಾಲೂಕಿನವರೆಂಬುದು ವಿಶೇಷವಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅಣ್ಣಪ್ಪ, ಪವಿತ್ರ, ಗಿರಿಧರ್, ಗಣೇಶ, ಶ್ರೀಕಂಠ ಪ್ರಸಾದ್ ಇದ್ದರು.