ಶ್ರೀ ಶಾರದಾ ಪೀಠಮ್‌ನಿಂದ ರಾಕೇಶ್ ಡಿಸೋಜರಿಗೆ ಪೂಜ್ಯಶ್ರೀಗಳಿಂದ ಆತ್ಮೀಯ ಸನ್ಮಾನ….
ಕೂಡಲಿ : ಇತಿಹಾಸ ಪ್ರಸಿದ್ಧ ಶಿವಮೊಗ್ಗ ತಾಲ್ಲೂಕಿನಲ್ಲಿರುವ ಕೂಡಲಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ದಕ್ಷಿಣಾಮ್ನಾಯ ಮೂಲ ಶ್ರೀ ಶಾರದಾ ಪೀಠಮ್‌ನಲ್ಲಿ ಸೆ.೨೨ರಿಂದ ಅ.೨ರವರೆಗೆ ಶ್ರೀಶರನ್ನವರಾತ್ರಿ ಮಹೋತ್ಸವವು ಅತ್ಯಂತ ಶ್ರದ್ಧಾಭಕ್ತಿಯಿಂದ ಅದ್ದೂರಿಯಾಗಿ ನೆರವೇರಿತು.
ಶ್ರೀಮಠದ ೭೧ನೇ ಪೀಠಾಧಿಪತಿಗಳಾದ ಪೂಜ್ಯಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿದಿನ ವಿವಿಧ ಹೋಮಗಳು ನೆರವೇರಲಿದೆ. ಅ.೧ರಂದು ಲೋಕಲ್ಯಾಣಾರ್ಥಕ್ಕಾಗಿ ಮತ್ತೂರಿನ ವಿದ್ವಾನ್ ಶ್ರೀ ಪ್ರದೀಪ್ ಅವಧಾನಿ ನೇತೃತ್ವದಲ್ಲಿ ಶತಚಂಡಿಯಾಗ ನಡೆಸಲಾಯಿತು. ಪ್ರತಿದಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅ.೨ರ ವಿಜಯದಶಮಿ ಯಂದು ಪೂಜ್ಯಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಜೆಡಿಎಸ್ ರಾಜ್ಯ ಕಾರ್ಯದರ್ಶಿಗಳೂ ಆದ ಹಿರಿಯ ಪತ್ರಕರ್ತ ರಾಕೇಶ್ ಡಿಸೋಜ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.



