ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ವಿಶ್ವ ಹೃದಯ ದಿನ ನಿಮಿತ್ತ ದಾವಣಗೆರೆ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಿಂದ ಉಚಿತ ಇಸಿಜಿ ತಪಾಸಣಾ ಶಿಬಿರ

Share Below Link

ದಾವಣಗೆರೆ : ಇಲ್ಲಿನ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ವಿಶ್ವ ಹೃದಯ ದಿನದ ನಿಮಿತ್ತ ಉಚಿತ ಇಸಿಜಿ ತಪಾಸಣಾ ಶಿಬಿರವನ್ನು ಅ.೫ರಂದು ಆಯೋಜಿಸಿದೆ.
ಇತ್ತೀಚೆಗೆ ಒಂದೇ ದಿನದಲ್ಲಿ ೧೧,೭೮೬ ಮಹಿಳೆಯರಿಗೆ ಉಚಿತ ಇಸಿಜಿ ತಪಾಸಣೆ ಮಾಡುವ ಮೂಲಕ ದಾಖಲೆ ಮಾಡಿದ್ದ ನಾರಾಯಣ ಹೆಲ್ತ್ ಇದೀಗ ತನ್ನ ದಾವಣಗೆರೆಯ ಎಸ್.ಎಸ್. ನಾರಾಯಣ ಸೂಪರ್ ಸ್ಪೆಷಾಲಿಟಿ ಸೆಂಟರ್‌ನಲ್ಲಿ ಒಂದೇ ದಿನದಲ್ಲಿ ಸಾವಿರಕ್ಕೂ ಅಧಿಕ ಜನರ ಇಸಿಜಿ ತಪಾಸಣೆ ಮಾಡುವ ಧೇಯ್ಯ ದೊಂದಿಗೆ ತಪಾಸಣಾ ಶಿಬಿರ ಹಮ್ಮಿಕೊಂಡಿದೆ.
ಈ ಶಿಬಿರವೂ ಅ.೫ರ ಭಾನುವಾರದಂದು ದಾವಣಗೆರೆಯ ಮೋದಿ ಕಾಂಪೌಂಡ್‌ನ ಗುಂಡಿ ಸರ್ಕಲ್ ಹತ್ತಿರದ ಎಸ್.ಎಸ್. ಹಾಸ್ಪಿಟಲ್ ಸ್ಪೆಷಾಲಿಟಿ ಕ್ಲಿನಿಕ್‌ನಲ್ಲಿ ಬೆಳಿಗ್ಗೆ ೯ ರಿಂದ ಸಂಜೆ ೫ರವರೆಗೂ ನಡೆಯಲಿದ್ದು. ಇಸಿಜಿ ಜೊತೆಗೆ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ತಪಾಸಣೆ ಹಾಗೂ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಸಹ ಉಚಿತವಾಗಿರಲಿದೆ.
ಆಸ್ಪತ್ರೆಯ ಹೃದ್ರೋಗ ವಿಭಾಗದ ಮುಖ್ಯಸ್ಥ ಹಾಗೂ ಹೃದ್ರೋಗ ತಜ್ಞ ಡಾ| ಮಲ್ಲೇಶ. ಪಿ., ವ್ಯವಸ್ಥಾಪಕ ನಿರ್ದೇಶಕ ಸುನೀಲ ಭಂಡಾರಿಗಲ್ ಅವರು ದಾವಣಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಜನರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿzರೆ.
ಹೆಚ್ಚಿನ ಮಾಹಿತಿಗೆ ಮೊ. ಸಂಪರ್ಕಿಸಿ: ೯೭೩೯೩೪೫೬೦೩ / ೯೯೮೦೦೨೬೦೨೬ / ೮೮೮೪೪ ೩೧೩೭೨ರಲ್ಲಿ ಸಂಪರ್ಕಿಸಲು ಕೋರಿದೆ.