ಕುಂಸಿ ಮತ್ತು ಅರಸಾಳು ರೈಲುನಿಲ್ದಾಣದಲ್ಲಿ ಇಂಟರ್‌ಸಿಟಿ ರೈಲು ನಿಲುಗಡೆ…
ಶಿವವಗ್ಗ : ಶಿವಮೊಗ್ಗ ಜಿಯ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ಗಾಡಿ ಸಂಖ್ಯೆ ೨೦೬೫೧ / ೨೦೬೫೨ (ಬೆಂಗಳೂರು- ತಾಳಗುಪ್ಪ- ಬೆಂಗಳೂರು) ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಇಲ್ಲದ ಕಾರಣ ಆ ಭಾಗದ ಸಾರ್ವಜನಿಕರ ಬಹು ದಿನಗಳ ಬೇಡಿಕೆ ಮತ್ತು ಒತ್ತಡ ಇದ್ದ ಕಾರಣ ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯದ ಜನರಲ್ ಮ್ಯಾನೇಜರ್ ಮುಕುಲ್ ಸರಣ್ ಮಾಥೂರ್ ಅವರನ್ನು ಸಂಸದ ಬಿ.ವೈ ರಾಘವೇಂದ್ರ ಅವರು ಹುಬ್ಬಳ್ಳಿಯಲ್ಲಿ ಕಳೆದ ವಾರ ಭೇಟಿ ಮಾಡಿ ವಸ್ತುಸ್ಥಿತಿಯನ್ನು ವಿವರಿಸಿ ಜಿಯ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲನ್ನು ನಿಲುಗಡೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಕೋರಿ ಕೊಂಡಿದ್ದರು.
ಸಂಸದರ ಸತತ ಪ್ರಯತ್ನದ ಫಲವಾಗಿ ಹುಬ್ಬಳ್ಳಿ ರೈಲ್ವೆ ನೈರುತ್ಯ ವಲಯದಿಂದ ಜಿಯ ಕುಂಸಿ ಮತ್ತು ಅರಸಾಳು ರೈಲ್ವೆ ನಿಲ್ದಾಣದಲ್ಲಿ ಇಂಟರ್ ಸಿಟಿ ರೈಲನ್ನು ದಿನಾಂಕ: ೬.೧೦.೨೦೨೫ ರಿಂದ ೫.೦೧.೨೦೨೬ ರವರೆಗೆ ೩ ತಿಂಗಳವರೆಗೆ ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ಶಿವಮೊಗ್ಗದಿಂದ ಹೊರಡುವ ಇಂಟರ್ ಸಿಟಿ ರೈಲು ಗಾಡಿ ಸಂಖ್ಯೆ ೨೦೬೫೧ ಕುಂಸಿ ರೈಲ್ವೆ ನಿಲ್ದಾಣಕ್ಕೆ ರಾತ್ರಿ ೮.೦೫ಕ್ಕೆ ಬರಲಿದೆ. ೮.೦೬ ನಿಮಿಷಕ್ಕೆ ಹೊರಟು ೮.೨೦ ನಿಮಿಷಕ್ಕೆ ಅರಸಾಳು ರೈಲು ನಿಲ್ದಾಣ ತಲುಪಿ ೮.೨೧ ಕ್ಕೆ ರೈಲ್ವೆ ನಿಲ್ದಾಣವನ್ನು ಬಿಡಲಿದೆ. ಅದೇ ರೀತಿ ತಾಳಗುಪ್ಪದಿಂದ ಹೊರಡುವ ಇಂಟರ್ ಸಿಟಿ ರೈಲು ಗಾಡಿ ಸಂಖ್ಯೆ ೨೦೬೫೨ ಅರಸಾಳು ರೈಲ್ವೆ ನಿಲ್ದಾಣಕ್ಕೆ ಬೆಳಿಗ್ಗೆ ೬.೧೯ ಕ್ಕೆ ತಲುಪಲಿದೆ. ೬.೨೦ ಕ್ಕೆ ಅರಸಾಳು ನಿಂದ ಹೊರಟು ಕುಂಸಿ ರೈಲ್ವೆ ನಿಲ್ದಾಣಕ್ಕೆ ೬.೩೩ ಕ್ಕೆ ತಲುಪಿ, ೬.೩೪ ಕ್ಕೆ ರೈಲ್ವೆ ನಿಲ್ದಾಣವನ್ನು ಬಿಡಲಿದೆ.
ಆಯನೂರು, ಕುಂಸಿ, ಹೋಬಳಿಗಳ ಗ್ರಾಮಸ್ಥರು ಹಾಗೂ ಶಿಕಾರಿಪುರ ತಾಲ್ಲೂಕಿನ ಗಾಮ, ಕಲ್ಮನೆ, ಹಿತ್ತಲ, ಚುರ್ಚಿಗುಂಡಿ ಭಾಗದ ಸಾರ್ವಜನಿಕರು ಹಾಗೂ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ, ಕೋಡೂರು, ಬಾಳೂರು, ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಹುಂಚ ಅಮೃತ ಗ್ರಾಮದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ರೈಲನ್ನು ಬಳಕೆ ಮಾಡಿಕೊಳ್ಳುವಂತೆ ಸಂಸದರು ಪ್ರಕಟಣೆಯಲ್ಲಿ ತಿಳಿಸಿzರೆ.

