ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸಹ್ಯಾದ್ರಿ ಕಾಲೇಜ್‌ನಲ್ಲಿ ವಿಶ್ವ ಹೃದಯ – ರೇಬಿಸ್ ದಿನ ಆಚರಣೆ…

Share Below Link

ಶಿವಮೊಗ್ಗ : ಸೆ.೨೯ರಂದು ವಿಶ್ವ ಹೃದಯ ದಿನ ಮತ್ತು ವಿಶ್ವರೇಬಿಸ್ ದಿನ ಪ್ರಯುಕ್ತ ಜಿ ಆಡಳಿತ, ಜಿಪಂ, ಜಿ ಆರೋಗ್ಯ ಇಲಾಖೆ ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ ಸಹ್ಯಾದ್ರಿ ವಿeನ ಕಾಲೇಜಿನಲ್ಲಿ ವಿಶ್ವ ಹೃದಯ ದಿನ ಮತ್ತು ವಿಶ್ವರೇಬಿಸ್ ದಿನವನ್ನುಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನ ಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜ ನಾಯ್ಕ ಅವರು, ಪ್ರತಿ ವರ್ಷ ಸೆ.೨೮ರಂದು ವಿಶ್ವ ರೇಬಿಸ್ ದಿನಾಚರಣೆ ಆಚರಿಸಲಾ ಗುತ್ತದೆ. ಈ ವರ್ಷದ ಘೋಷ ಣೆಯು ರೇಬೀಸ್ ತಡೆಗಟ್ಟಲು ಮುಂದಾಗೋಣ: ನೀವು, ನಾನು, ನಮ್ಮ ಸಮಾಜ ಎಂಬ ೨೦೨೫ರ ಘೋಷವಾಕ್ಯದೊಂದಿಗೆ ಸೆ.೨೮ ರಂದು ವಿಶ್ವ ರೇಬೀಸ್ ದಿನಾಚರಣೆ ಆಚರಿಸುತ್ತಿದೇವೆ. ಮೊಟ್ಟ ಮೊದಲ ಬಾರಿಗೆ ರೇಬಿಸ್ ವಿರುದ್ಧ ಪರಿಣಾಮಕಾರಿ ಲಸಿಕೆ ಕಂಡು ಹಿಡಿದ ಲೂಯಿಸ್ ಪಾಶ್ಚರ್ ಎಂಬ ವಿeನಿಯು ಸೆ.೨೮, ೧೮೯೫ರಂದು ಮರಣ ಹೊಂದಿದ್ದು, ಇವರ ಗೌರವಾರ್ಥ ಈ ದಿನವನ್ನು ವಿಶ್ವರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.


ರೇಬಿಸ್ ಒಂದು ಭಯಾನಕ ಮಾರಣಾಂತಿಕ ಕಾಯಿಲೆ ಆಗಿದ್ದು, ರೋಗಲಕ್ಷಣಗಳು ಪ್ರಾರಂಭವಾದ ನಂತರ ಯಾವುದೇ ಚಿಕಿತ್ಸೆಯಿಂದ ರೋಗಿಯನ್ನು ಬದುಕಿಸಲು ಸಾಧ್ಯ ವಿರುವುದಿಲ್ಲ. ಹಾಗಾಗಿ ಇದು ಶೇ.೧೦೦ ಮಾರಣಾಂತಿಕ ವಾಗಿರು ತ್ತದೆ. ಈ ರೋಗವು ನಾಯಿ ಹಾಗೂ ಇತರೆ ಪ್ರಾಣಿಕಡಿತದಿಂದ ಸಂಭವಿ ಸುತ್ತದೆ. ಈ ರೋಗಕ್ಕೆ ಪರಿಣಾಮ ಕಾರಿಯಾದ Anti rabies vaccine & Immunoglobulin ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಲಭ್ಯ ವಿದ್ದು, ನಾಯಿ ಕಡಿತ ಪ್ರಕರಣದಲ್ಲಿ ಕೂಡಲೇ ವೈದ್ಯರ ಸಲಹೆ ಮೇರೆಗೆ ಈ ಲಸಿಕೆಯನ್ನು ಪಡೆದುಕೊಂಡಲ್ಲಿ ರೇಬಿಸ್ ಸೋಂಕಿತ ನಾಯಿ ಕಚ್ಚಿದರೂ ಸಹ ಈ ರೋಗವನ್ನು ಶೇ.೧೦೦ ಈ ಕಾಯಿಲೆಯನ್ನು ತಡೆಗಟ್ಟಬಹುದಾಗಿದೆ. ಸಾರ್ವ ಜನಿಕರು ನಾಯಿ ಅಥವಾ ಯಾವುದೇ ಪ್ರಾಣಿಗಳು ಕಚ್ಚಿದಾಗ ಸೋಪಿನಿಂದ ಹರಿಯುವ ನೀರಿ ನಲ್ಲಿ ೧೫ ನಿಮಿಷ ನಿರಂತರ ವಾಗಿ ತೊಳೆದು ತಡಮಾಡದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ವೈದ್ಯರ ಸಲಹೆ ಮೇರೆಗೆ ಲಸಿಕೆಯನ್ನು ಸಂಪೂರ್ಣವಾಗಿ ಪಡೆದುಕೊಂಡಲ್ಲಿ ರೇಬಿಸ್ ನಿಂದಾಗುವ ಸಾವುಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನವ ರಲ್ಲಿ ಹೃದಯ ಸಂಬಂಧಿ ಕಾಯಿಲೆ ಗಳು ಹೆಚ್ಚಾಗುತ್ತಿದ್ದು, ಜೀವನಶೈಲಿ ಬದಲಾವಣೆ ಹಾಗೂ ಹೃದಯದ ಆರೋಗ್ಯ ಕಾಪಾಡಲು ಅನುಸರಿಸ ಬೇಕಾದ ಮುಂಜಗ್ರತಾ ಕ್ರಮ ಗಳನ್ನು ವಿದ್ಯಾರ್ಥಿಗಳು ತಮ್ಮ ಸ್ಥಳಿಯ ನಿವಾಸಿಗಳಿಗೆ, ಸಾರ್ವಜನಿಕರಿಗೆ ಹೃದಯ ಹಾಗೂ ರೇಬೀಸ್ ಕಾಯಿಲೆಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.


ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಕಸಬಿ , ಪ್ರಮುಖರಾದ ಡಾ| ಹರ್ಷವರ್ಧನ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಪ್ರೊ| ರಾಜೇಶ್ವರಿ, ವಿದ್ಯಾಥಿಗಳಿಗೆ ಫಾಸ್ಟ್ ಜಂಕ್ ಫುಡ್‌ಗಳು ಹಾಗೂ ಬೀದಿಬದಿ ಯಲ್ಲಿ ತೆರೆದಿಟ್ಟ ಪದಾರ್ಥಗಳನ್ನು ತಿನ್ನದಿರಲು ಮತ್ತು ವಿದ್ಯಾಥಿಗಳಿಗೆ ದೈನಂದಿನ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುವಂತೆ, ಪ್ರತಿದಿನ ವ್ಯಾಯಾಮ ಹಾಗೂ ಕ್ರೀಡಾಚಟುವಟಿಕೆಯಲ್ಲಿ ಭಾಗವಹಿಸಿ ಕ್ರೀಯಾಶೀಲ ರಾಗಿರುವಂತೆ ತಿಳಿಸಿದರು.
ಡಾ| ಚಂದ್ರಶೇಕರ್.ಜಿ.ಬಿ, ಡಾ| ವೆಂಕಟೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಾಲೇಜು ವಿದ್ಯಾಥಿಗಳು ಉಪಸ್ಥಿತರಿ ದ್ದರು. ಡಾ. ವೆಂಕಟೇಶ್ ವಂದಿಸಿದರು.