ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಬ್ರಾಹ್ಮೀಮಹೂರ್ತದಲ್ಲಿ ಎದ್ದು ಓದುವ ಪ್ರವೃತ್ತಿ ಬೆಳೆಸಿಕೊಳ್ಳಿ…

Share Below Link

ಶಿವಮೊಗ್ಗ : ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಎಂದು ಜಿಪಂ ಸಿಇಓ ಹೇಮಂತ್‌ಕುಮಾರ್ ಹೇಳಿzರೆ.
ಅವರು ಇಂದು ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ದಸರಾ-೨೦೨೫ರ ಅಂಗವಾಗಿ ಪಾಲಿಕೆವತಿಯಿಂದ ಸಮನ್ವಯ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ eನದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಬೆಳಿಗ್ಗೆ ೪ ಗಂಟೆಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಓದಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ. ದೇಶದಲ್ಲಿ ಅನೇಕ eನಿಗಳು ಮತ್ತು ಬುದ್ಧಿವಂತರ ಸಫಲತೆಯ ಹಿಂದಿನ ರಹಸ್ಯ ಇದೇ ಆಗಿದೆ. ಉದಾಹರಣೆಗೆ ಅಮೇರಿಕಾದ ನಾಸಾದ ವಿeನಿಗಳು ರಾಕೇಟ್ ಉಡಾವಣೆಯ ಪ್ರಯೋಗದಲ್ಲಿ ೨ ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿದ್ದರು. ಬಳಿಕ ಅವರು ಜರ್ಮನಿ ವಿeನಿಗಳ ನೆರವು ಪಡೆದಾಗ ಆರು ತಿಂಗಳ ಪ್ರಯೋಗ ಯಶಸ್ವಿಯಾಯಿತು. ಈ ಬಗ್ಗೆ ಪತ್ರಕರ್ತರು ಜರ್ಮನಿ ವಿeನಿಗಳಿಗೆ ಯಶಸ್ಸಿನ ಕಾರಣವೇನು? ಅಮೇರಿಕಾದ ವಿeನಿಗಳು ವೈಫಲ್ಯತೆ ಏನು ಎಂದಾಗ, ಜರ್ಮನಿ ವಿeನಿಗಳು ನಾವು ಬೆಳಿಗ್ಗೆ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಕೆಲಸ ಮಾಡುತ್ತೇವೆ. ಅಮೇರಿಕಾದ ವಿeನಿಗಳು ರಾತ್ರಿ ಕೆಲಸ ಮಾಡುತ್ತಾರೆ ಇದೇ ವ್ಯತ್ಯಾಸ ಎಂದರು.
ಯುಪಿಎಸ್‌ಸಿ ಪರೀಕ್ಷೆಯಲ್ಲಿ ೧೦ನೇ ತರಗತಿ ಮತ್ತು ಪಿಯುಸಿ ಪಾಠಗಳು ಇರುತ್ತದೆ. ಆದರೆ ಅನೇಕರು ಎಸ್‌ಎಸ್‌ಎಲ್‌ಸಿಯ ನಂತರ ತಮ್ಮ ಓದುವ ವಿಧಾನವನ್ನು ಬದಲಾಯಿಸುತ್ತಾರೆ. ರೀಡ್, ರಿವೈಸ್, ರೀಕನೆಕ್ಟ್ ಈ ಮೂರು ಅಂಶಗಳನ್ನು ಅಳವಡಿಸಿಕೊಂಡಾಗ ಸಾಧನೆ ಸಾಧ್ಯ. ಓದಬೇಕು-ಓದಿದ್ದನ್ನು ಮನನ ಮಾಡಿಕೊಳ್ಳಬೇಕು ಮತ್ತು ಮುಂದಿನ ಸಿದ್ಧತೆ ಮಾಡಿಕೊಳ್ಳಬೇಕು. ಪ್ರಮುಖವಾಗಿ ಒಂದೇ ಒಂದು ಗುಣ ಎಂದರೆ ಧೈರ್ಯವಿರಬೇಕು. ಇನ್ನೊಬ್ಬರನ್ನು ಮೆಚ್ಚಿಸಲು ಯಾರz ಪ್ರಶಂಸೆಗೆ ಮತ್ತು ಪಬ್ಲಿಸಿಟಿಗಾಗಿ ಕೆಲಸ ಮಾಡದೆ ನಮ್ಮದೇ ಗುರಿಯನ್ನಿಟ್ಟುಕೊಂಡು ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮ ಪ್ರತಿಭೆ-ನಮ್ಮ ಸ್ವತ್ತು ಕನಸು ಕಾಣಬೇಕು ಕಠಿಣ ಪರಿಶ್ರಮವಿದ್ದರೆ ಏನೂ ಬೇಕಾದರೂ ಸಾಧಿಸಬಹುದು ಎಂದರು.


ಜಿ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಸಿಗುವ ಮಾಹಿತಿ ಓವರ್‌ಲೋಡ್ ಆಗಿದೆ. ಆದರೆ ಅನೇಕರು ಅದರಿಂದ ತಮ್ಮ eನ ಹೆಚ್ಚಿಸಿಕೊಳ್ಳಲಿಲ್ಲ ಬದಲಾಗಿ ಆತುರದ ಗುಣಗಳಿಂದ ಅನೇಕಬಾರಿ ಎಡವಟ್ಟು ಮಾಡುತ್ತಾರೆ. ಪ್ರತ್ಯಕ್ಷೆ ಕಂಡರೂ ಪ್ರಾಮಾಣಿಸಿ ನೋಡು ಎನ್ನುವ ಗಾದೆ ಇದೆ. ಮೊಬೈಲ್‌ನಲ್ಲಿ ಕೇಳಿದ್ದು-ನೋಡಿದ್ದು ಎಲ್ಲವೂ ಸತ್ಯ ಅಲ್ಲ, ಸಿವಿಲೇಜೆಷನ್ ಎತ್ತರಕ್ಕೆ ಬೆಳೆದ ದೇಶಗಳನ್ನು ನೋಡಿದಾಗ ಅವರೆಲ್ಲರೂ eನಕ್ಕೆ ಪ್ರಾಮುಖ್ಯತೆ ನೀಡಿzರೆ. ಹಾಗಾಗಿ ಆ ದೇಶಗಳಲ್ಲಿ ಬೆಳವಣಿಗೆ ಸಾಧ್ಯವಾಗಿದೆ. eನ ಎಂದರೆ ಅಕಾಡೆಮಿಕ್ ಪಠ್ಯಗಳು ಮಾತ್ರ ಅಲ್ಲ, ಪರಿಣಿತಿ ಹೊಂದುವುದರ ಜೊತೆಗೆ ಛಲವನ್ನು ಬೆಳೆಸಿಕೊಳ್ಳಬೇಕು. ಮಲ್ಯಾಧಾರಿತ ಶಿಕ್ಷಣವನ್ನು ಪಡೆಯಬೇಕು. ಮಾನವೀಯ ಮಲ್ಯಗಳನ್ನು ಪಾಲನೆ ಮಾಡಬೇಕು. ಪ್ರತಿಯೊಬ್ಬರಲ್ಲೂ ಅವರದ್ಧೇ ಆದ ಸಾಮರ್ಥ್ಯ ಇz ಇರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ ಒಂದು ವರ್ಷವಾದರೂ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಪ್ರಮುಖವಾಗಿ ನಾಗರೀಕ ಸಮಾಜದಲ್ಲಿ ಸಿವಿಲ್ ಸೆನ್ಸ್‌ನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಸ್.ಎನ್. ಚನ್ನಬಸಪ್ಪ ಶಾರದಾ ಪೂಜೆಯ ದಿನದಂದು eನ ದಸರಾದ ಮೂಲಕ ವಿದ್ಯಾರ್ಥಿಗಳಲ್ಲಿ eನದ ಬೀಜವನ್ನು ಬಿತ್ತುವ ದೃಷ್ಟಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿzವೆ. ಶಾರದೆ ಎಂದರೆ eನದ ಸಂಕೇತ. ನಮ್ಮ ಹಿರಿಯರು ಶಾರದಾ ಪೂಜೆಗೆ ವಿಶೇಷ ಮಹತ್ವ ನೀಡಿzರೆ. ಭಾವನೆಗಳಿಗೆ ಶಕ್ತಿಕೊಡುವ ಕಾರ್ಯ ಈ eನ ದಸರಾದಿಂದ ಆಗುತ್ತಿದೆ. ನಾನು ಏನಾಗಬೇಕು ಎಂದು ನಾನೇ ಯೋಚನೆ ಮಾಡಬೇಕು. ಸತ್ಪ್ರಜೆಯಾಗುವ ನಿಟ್ಟಿನಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಆಯುಕ್ತ ಮಾಯಣ್ಣಗೌಡ, ಡಾ|| ಅರವಿಂದ ತಿಮ್ಮಯ್ಯ, eನಕಶ್ಯಪ್, ದುರ್ಗಪ್ಪ ಅಂಗಡಿ, ಸಮನ್ವಯ ಕಾಶಿ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದಪ್ಪ, ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹಾಗೂ eನ ದಸರಾ ಕಾರ್ಯದರ್ಶಿ ವಸಂತಕುಮಾರಿ ಇದ್ದರು.